Advertisement
ಉಡುಪಿ ಶ್ರೀಕೃಷ್ಣ ಮಠಕ್ಕೆ ರವಿವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಗೊಂದಲಗಳಿರುವುದು ನಿಜ. ನಾವೆಲ್ಲ ಚರ್ಚಿಸಿ, ಮಾತುಕತೆ ನಡೆಸಿ ಪರಿಹರಿಸಿಕೊಳ್ಳುತ್ತೇವೆ. ಪಕ್ಷದಲ್ಲಿರುವ ಸಮಸ್ಯೆ ಪರಿಹರಿಸಿಕೊಳ್ಳಲು ಶಾ ಸೂಚಿಸಿದ್ದು, ಯಡಿಯೂರಪ್ಪ ಈ ವಿಚಾರದಲ್ಲಿ ಸ್ವಲ್ಪ ತಾತ್ಸಾರ ಮಾಡುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಂದುವರಿಸಲು ಸೂಚನೆ ಸಿಕ್ಕಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಬಾಲಕಿ ಕೊಳವೆ ಬಾವಿಗೆ ಬಿದ್ದ ಪ್ರಕರಣ ಸಂಬಂಧ ಉಡಾಫೆಯಾಗಿ ಉತ್ತರಿಸಿದ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು ಸರಕಾರದಲ್ಲಿ ಎಲ್ಲ ಮಂತ್ರಿಗಳು ಉಡಾಫೆಯಾಗಿ ಮಾತನಾಡುತ್ತಾರೆ. ಮುಖ್ಯಮಂತ್ರಿಗಳೇ ಎಸ್‌ಪಿ ಅವರನ್ನು ಸಾರ್ವಜನಿಕವಾಗಿ ಬೈಯುತ್ತಾರೆ. ಉಡುಪಿ ಜಿಲ್ಲಾಧಿಕಾರಿ ಹಾಗೂ ಎಸಿ ಮೇಲಿನ ಹಲ್ಲೆ ಪ್ರಕರಣ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಅಕ್ರಮಗಳಿಗೆ ಸಚಿವರು ಪೂರಕವಾಗಿ ಬೆಂಬಲ ಕೊಡುತ್ತಿದ್ದಾರೆ ಎಂದರು. ಪಕ್ಷದ ಸೋಲು:ಜನರ ತೀರ್ಪು
ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆ ಸೋಲು ಪಕ್ಷದ ಸೋಲು. ಇದು ಜನರ ತೀರ್ಪು. ನಾವೆಲ್ಲ ಅದನ್ನು ಗೌರವಿಸುತ್ತೇವೆ. ಶೇ. 100 ಗೆಲುವಿಗೆ ಪಕ್ಷದ ಎಲ್ಲರೂ ಪ್ರಯತ್ನಿಸಿದ್ದೇವೆ. ಈ ಸೋಲಿಗೆ ಎಲ್ಲರೂ ಹೊಣೆ. ಸೋಲಿನ ಪರಾಮರ್ಶೆ ನಡೆಯುತ್ತಿದೆ. ಜಿಲ್ಲಾಧ್ಯಕ್ಷರ ನೇಮಕ ಬಗ್ಗೆಯೂ ಭಿನ್ನಾಭಿಪ್ರಾಯಗಳಿದ್ದು, ಈ ಕುರಿತು ಮಾತುಕತೆ ನಡೆಯುತ್ತಿವೆ ಎಂದು ಈಶ್ವರಪ್ಪ ಹೇಳಿದರು.
Related Articles
ದಿಗ್ವಿಜಯ್ ಸಿಂಗ್ ಅವರು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸುತ್ತದೆ, ಮುಖ್ಯಮಂತ್ರಿಗಳನ್ನು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಅಂತ ಮಾತನಾಡುತ್ತಿದ್ದಾರೆ. ಇದು ಅಹಂಕಾರದ ಮಾತು. ಕತ್ತಿ ಮಸೆಯುತ್ತಿರುವುದು, ಅಶಿಸ್ತಿನಿಂದ ವರ್ತಿಸುತ್ತಿರುವುದು ಯಾರು. ಕೇಂದ್ರ ನಾಯಕರು ಹಾಗೇ ಹೇಳುತ್ತಿದ್ದಾರೆ. ಆದರೆ ಇವರಿಗೆ ಈಗಲೇ ಹೇಳಿಕೊಳ್ಳಲು ಅಧಿಕಾರ ಕೊಟ್ಟವರಾರು? ಎಂದು ಈಶ್ವರಪ್ಪ ಅವರು ಪ್ರಶ್ನಿಸಿದರು.
Advertisement