Advertisement

ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿಲ್ಲ

04:41 PM Sep 05, 2021 | Team Udayavani |

ಹೊನ್ನಾಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಎಂಬುದು ಶುದ್ಧ ಸುಳ್ಳು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾದ್ಯಂತ ಶನಿವಾರ ಹಮ್ಮಿಕೊಂಡಿದ್ದ ಲಸಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕೋವಿಡ್‌ ಸಂದರ್ಭದಲ್ಲಿ ಕೈಗೊಂಡ ತೀರ್ಮಾನಗಳನ್ನು ರಾಷ್ಟ್ರೀಯ ನಾಯಕರೇ
ಮೆಚ್ಚಿದ್ದಾರೆ. ಈಗ ಯಾರು ಸಿಎಂ ಇರುತ್ತಾರೋ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ. ಅದೇ ಅರ್ಥದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾತನಾಡಿದ್ದು, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.

ಮಾಜಿ ಸಚಿವ ಎಂ.ಬಿ ಪಾಟೀಲ್‌ ವೀರಶೈವ ಲಿಂಗಾಯಿತ ಧರ್ಮ ಒಡೆಯಲು ಹೋಗಿ ಅದರಲ್ಲಿ ವಿಫಲರಾಗಿದ್ದರು. ಈಗ ಮತ್ತೊಮ್ಮೆ ಅದೇ ಪ್ರಯತ್ನಕ್ಕೆ ಕೈ ಹಾಕಿದ್ದು, ಜನರು ಅವರಿಗೆ ತಕ್ಕ ಉತ್ತರ ನೀಡುತ್ತಾರೆ. ಅಖಂಡ ವೀರಶೈವ ಧರ್ಮ ಒಡೆಯಲು ಸಾಧ್ಯವಿಲ್ಲಾ ವೀರಶೆ„ವ ಲಿಂಗಾಯತ ಒಂದೇ ಎಂದರು.

ಇದನ್ನೂ ಓದಿ:ಅಭಿವೃದ್ಧಿಗೂ ಪಕ್ಷ ರಾಜಕಾರಣದ ಸೋಂಕು!

ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಗ್ರಾಮಗಳಾದ ಕುಂಕುವ, ಮುಸ್ಸೇನಾಳ್‌, ಫಲವನಹಳ್ಳಿ, ಸೋಗಿಲು, ಯರಗನಾಳ್‌, ರಾಮೇಶ್ವರ,
ಮಲ್ಲಿಗೇನಹಳ್ಳಿ, ಹೊಸಕೊಪ್ಪ, ಗುಡ್ಡೇಹಳ್ಳಿ, ಗುಡ್ಡೇಹಳ್ಳಿ ತಾಂಡ, ಹಿರೇಗೋಣಿಗೆರೆ, ಕಮ್ಮಾರಘಟ್ಟ, ಕುಳಗಟ್ಟೆ, ಹನುಮನಹಳ್ಳಿ ಹೊಸಬಡಾವಣೆ,
ಹನುಮನಹಳ್ಳಿ ತಾಂಡ, ಹನುಮನಹಳ್ಳಿ, ತ್ಯಾಗದಕಟ್ಟೆ, ಚನ್ನಮುಂಬಾಪುರ, ಹೊಸಹಳ್ಳಿ ಮೊದಲ ಕ್ಯಾಂಪ್‌, ರಾಂಪುರ ಗ್ರಾಮಗಳು ಸೇರಿದಂತೆ ಹೊನ್ನಾಳಿ ಪಟ್ಟಣದ ಅಂಬೇಡ್ಕರ್‌ ಭವನ, ಶಾದಿಮಹಲ್‌, ಗುರುಭವನ, ಹಳದಮ್ಮ ಶಾಲೆಗಳಲ್ಲಿ ಏಳು ಸಾವಿರಕ್ಕೂ ಹೆಚ್ಚು ಲಸಿಕೆ ನೀಡಲಾಯಿತು. ಲಸಿಕಾ ಕೇಂದ್ರಕ್ಕೆ ಶಾಸಕ ಎಂ.ಪಿ. ರೇಣುಕಾಚಾರ್ಯ ಭೇಟಿ ನೀಡಿ ಲಸಿಕೆ ಬಗ್ಗೆ ಮಾಹಿತಿ ಪಡೆದರು.

Advertisement

ದಾವಣಗೆರೆ ಜಿಲ್ಲೆಯಲ್ಲಿರುವ ತಾಲೂಕುಗಳಲ್ಲಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕು ಲಸಿಕೆಯಲ್ಲಿ ಹಾಕುವುದರಲ್ಲಿ ಪ್ರಥಮ ಸ್ಥಾನದಲ್ಲಿವೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದರು. ಇದುವರೆಗೆ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾದ್ಯಂತ 1,38,528 ಜನರಿಗೆ
ಲಸಿಕೆ ಹಾಕಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಶೇ. 98ರಷ್ಟು ಲಸಿಕೆ ಹಾಕಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಶೇ. 48 ಜನರಿಗೆ ಲಸಿಕೆ ಹಾಕಲಾಗಿದ್ದು ಇದುವರೆಗೆ ಒಟ್ಟು 1,43 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ
ಅಧ್ಯಕ್ಷ ಎಸ್‌.ಪಿ. ರವಿಕುಮಾರ್‌, ಮುಖಂಡರಾದ ಅಜಯ್‌ ರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next