Advertisement
ನಂತರ ಬಿಜೆಪಿಯು ವಿರುದ್ಧ ಕಿಡಿಕಾರಿದ ಅವರು, ಬಿಜೆಪಿಗೆ ನಾನೇನು ಹೈಕಮಾಂಡಾ ? ಎಂದು ಪ್ರಶ್ನಿಸಿದರು. ಮಾಹಿತಿ ಕಲೆ ಹಾಕಲು ಹೈಕಮಾಂಡ್ ಜೊತೆ ಸಂಪರ್ಕದಲ್ಲಿ ಇರಬೇಕೆಂದಿಲ್ಲ. ಆ ಬಗ್ಗೆ ಬೇಕಾದಷ್ಟು ಸುದ್ದಿ ಮೂಲಗಳು ಇವೆ. ಆ ಮೂಲಗಳಿಂದ ನನಗೆ ಮಾಹಿತಿ ಲಭ್ಯವಾಗಿದೆ. ನನಗೆ ಬಂದಿರುವ ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಆಗುತ್ತಾರೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ಬದಲಾವಣೆ ಮಾಡಲಿದೆ.
Related Articles
Advertisement
ಜಿ.ಟಿ ದೇವೇಗೌಡ ಹಣ ಪಡೆದು ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾನು ಹಾಗೆ ಹೇಳಿಯೇ ಇಲ್ಲ. ಅದು ಕ್ಲೋಸ್ ಡೋರ್ ಮೀಟಿಂಗ್ ಅಲ್ಲಿ ಆಗಿರುವ ಚರ್ಚೆ. ನಾನು ಹೀಗೆ ಹೇಳಿದೆ ಅಂತ ನಿಮಗೆ ಹೇಳಿದವರು ಯಾರು ? ನಾನು ಕೆಲ ವಿಚಾರಗಳನ್ನು ಹೇಳಿದ್ದು ಸತ್ಯ. ಆದ್ರೆ ಜಿಟಿಡಿ ಹಣ ಪಡೆದು ಬಿಜೆಪಿಗೆ ಕೆಲಸ ಮಾಡಿದ್ದಾರೆ ಅಂತ ಹೇಳಿಲ್ಲ.
ನಾವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಾರದಿತ್ತು ಅಂತ ಹೇಳಿದ್ದೆ. ಅಂದು ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ನಾವು ಮೈಸೂರು, ಮಂಡ್ಯ, ತುಮಕೂರು ಎಲ್ಲಾ ಕಡೆ ಗೆಲ್ಲುತ್ತಿದ್ದೆವು. ಜೆಡಿಎಸ್ ಕಾರ್ಯಕರ್ತರಿಗೂ, ನಮಗೂ ಹೊಂದಾಣಿಕೆ ಆಗಲಿಲ್ಲ. ಆದರೆ ಅದನ್ನು ಜಿಟಿಡಿ ಹಣ ಪಡೆದು ಕೆಲಸ ಮಾಡಿಲ್ಲ ಅಂತ ವದಂತಿ ಹಬ್ಬಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ರಾಜ್ಯ ಸರ್ಕಾರ ಇದುವರೆಗೂ ಟೇಕ್ ಆಫ್ ಆಗಿಯೇ ಇಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಪರಿಸ್ಥಿತಿ ಇದೆ. ಕುರುಬ ಹೋರಾಟದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಮಾತ್ರವಲ್ಲದೆ ನನ್ನನ್ನು ಪ್ರತ್ಯೇಕಿಸುವ ಹುನ್ನಾರ ಇದರಲ್ಲಿ ಅಡಗಿದೆ. ಎಸ್. ಟಿ. ಹೋರಾಟಕ್ಕೆ ನೂರಕ್ಕೆ ನೂರರಷ್ಟು ಕರೆದಿಲ್ಲ. ಒಂದೇ ಒಂದು ಬಾರಿ ಈಶ್ವರಪ್ಪ ಪೋನ್ ಮಾಡಿದ್ದರು.
ಇದನ್ನೂ ಓದಿ: ರೈತರನ್ನು ಹೇಡಿ ಅಂದಿಲ್ಲ, ಆತ್ಮಹತ್ಯೆಯಂತ ಕೆಲಸ ಹೇಡಿತನದ್ದು ಎಂದಿದ್ದೆ: B.C.ಪಾಟೀಲ್
ಆ ಹೋರಾಟ ರಾಜಕಿಯೇತರ ಹೋರಾಟ ಆಗಿದ್ದರೆ ನಾನು ಹೋಗುತ್ತಿದ್ದೆ. ಆರ್ ಎಸ್ ಎಸ್ ಮಾಡಿಸುತ್ತಿರುವ ಹೋರಾಟ ಅದು. ಕುರುಬರನ್ನು ಒಡೆಯವ ಹುನ್ನಾರ ಅದು. ಅದಕ್ಕೆ ಈಶ್ವರಪ್ಪನವರು ಕೈ ಗೊಂಬೆಯಾಗಿದ್ದಾರೆ. ಈಶ್ವರಪ್ಪ ಕುರುಬರ ಪರವಾಗಿ ಅದ್ಯಾವಾಗ ಹೋರಾಟ ಮಾಡಿಯೇ ಇಲ್ಲ. ಸ್ವಾರ್ಥಕ್ಕಾಗಿ ರಾಯಣ್ಣ ಬ್ರಿಗೇಡ್ ಮಾಡಿದ್ದರು. ಕುರುಬರ ಮಠ ಕಟ್ಟುವಾಗ ಎಲ್ಲಿದ್ದರು ? ಕನಕನ ಕಿಂಡಿ ಬದಲಾಯಿಸಲು ಹೋದಾಗ ಮಠದ ಪರವಾಗಿದ್ದ ಈ ಈಶ್ವರಪ್ಪ. ಮಿಸಲಾತಿ ಪರವಾಗಿ ಹೋರಾಟ ಮಾಡಿಲ್ಲವೇಕೆ ? ಸಂವಿಧಾನ ಸುಟ್ಟಹಾಕಬೇಕು ಅಂದಾಗ ವಿರೋಧ ಮಾಡಿದ್ದರಾ ಈಶ್ವರಪ್ಪ ಎಂದು ಹರಿಹಾಯ್ದರು.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ನಮ್ಮ ಪಕ್ಷದ ಕಾರ್ಯಕರ್ತರೂ ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ನಮ್ಮ ಪಕ್ಷವೂ ರೈತರ ಹೋರಾಟಕ್ಕೆ ಬೆಂಬಲ ನೀಡಿದೆ. ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಬೇಕು. ಸಮಿತಿಯೊಂದನ್ನು ಮಾಡಿ ಅದರಿಂದ ಸಮಸ್ಯೆಗೆ ಉತ್ತರ ಹುಡುಕುತ್ತೀವಿ ಅಂತ ಹೇಳಿದರೆ ಅರ್ಥವಿಲ್ಲ ಎಂದು ತಿಳಿಸಿದರು.
ಸಾಲ ಮಾಡಿ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು ಎಂಬ ಸಚಿವ ಬಿ ಸಿ ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿ.ಸಿ ಪಾಟೀಲ್ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ. ಅವರು ಆ ರೀತಿ ಹೇಳಿಕೆ ನೀಡಿದ್ದರೇ ಅದು ತಪ್ಪು. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆ ರೀತಿಯ ಹೇಳಿಕೆ ನೀಡಬಾರದು ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ಐಸಿಸ್ ಉಗ್ರಗಾಮಿ ಸಂಘಟನೆಯ ಮನಸ್ಥಿತಿ, ಎರಡೂ ಒಂದೇ: ಬಿಜೆಪಿ