Advertisement

ಯಡಿಯೂರಪ್ಪ ಕೂಡಾ ಸಾಮಾನ್ಯ ಕಾರ್ಯಕರ್ತರೇ..!: ಬಿಎಸ್ ವೈ ವಿರುದ್ಧ ಸಿ.ಟಿ ರವಿ ಆಕ್ರೋಶ

05:20 PM Jun 18, 2021 | Team Udayavani |

ಬೆಂಗಳೂರು: ನಮ್ಮದು ಸಿದ್ದಾಂತದಿಂದ ಬಂದ ಪಕ್ಷ. ಇಲ್ಲಿ ಎಲ್ಲರೂ ಸಾಮಾನ್ಯ ಕಾರ್ಯಕರ್ತರೇ. ಪತ್ರಕರ್ತನಾಗಿದ್ದ ಪ್ರತಾಪ್ ಸಿಂಹರನ್ನು ಕರೆದು ಸಂಸದರನ್ನಾಗಿ ಮಾಡಿದೆವು. ನಾನೂ ಸಾಮಾನ್ಯ ಕಾರ್ಯಕರ್ತ, ಪ್ರಹ್ಲಾದ್ ಜೋಶಿ, ಈಶ್ವರಪ್ಪನವರು ಸಾಮಾನ್ಯ ಕಾರ್ಯಕರ್ತರೇ. ಅದೇ ರೀತಯಡಿಯೂರಪ್ಪನವರು ಸಾಮಾನ್ಯ ಕಾರ್ಯಕರ್ತರೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಪಕ್ಷದಲ್ಲಿ ಯಾರೂ ದೊಡ್ಡವರಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಾರ್ಟಿ ಗೆ ಜಾತಿ ಇಲ್ಲ, ಸಿದ್ದಾಂತ ಮುಖ್ಯ. ನಾವು ಬೀದಿಯಲ್ಲಿ ನಿಂತು ಹೋರಾಟ ಮಾಡುವಾಗ ಹೊಡೆತ ತಿಂದವರು ಸಿದ್ದಾಂತ ಒಪ್ಪಿದವರು. ನಾನು ಜಾತಿಯ ಕಾರಣಕ್ಕೆ ಈ ಪಕ್ಷದಲ್ಲಿ ಇಲ್ಲ .ನಮ್ಮ ಪಾರ್ಟಿಯಲ್ಲಿ ಯಡಿಯೂರಪ್ಪ ಒಬ್ಬರೇ ಶಾಸಕರಿದ್ದಿದ್ದು. ಆಗ ನಾನು ಬಾವುಟ ಕಟ್ಟುತ್ತಿದ್ದೆ. ಆಗ ನಮ್ಮ ಅಪ್ಪ ಅಮ್ಮ ದೇವೇಗೌಡರ ಪಕ್ಷ ಸೇರಿಲು ಹೇಳಿದ್ದರು. ಆದರೆ ಈ ಪಕ್ಷದ ಸಿದ್ದಾಂತ ದೇಶಕ್ಕೆ ಹಿತವಾಗಿತ್ತು ಅದಕ್ಕೆ ನಾನು ಬಿಜೆಪಿಗೆ ಬಂದೆ ಎಂದರು.

ಇದನ್ನೂ ಓದಿ:ಸಿಎಂ ಯಡಿಯೂರಪ್ಪಗೆ ಬೆಂಬಲ ನೀಡಿದ ಅಖಿಲ ಭಾರತ ವೀರಶೈವ ಮಹಾಸಭಾ

ನಮ್ಮ ಪಾರ್ಟಿ ಬೆಂಬಲಕ್ಕೆ ನೂರಾರು ಶ್ರೀಗಳು ಬೆಂಬಲಿಸಿದ್ದಾರೆ. ನೂರಾರು ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ಅವರು ಆಶೀರ್ವಾದ ಮಾಡಿದ್ದರಿಂದಲೇ ನಾವು ಅಧಿಕಾರಕ್ಕೆ ಬಂದಿರುವುದು. ನಮ್ಮ ಪಾರ್ಟಿಗೆ ಯಾವುದೇ ಜಾತಿ ಇಲ್ಲ. ನಮ್ಮ ಪಾರ್ಟಿಗೆ ಇರುವುದು ಸಿದ್ಧಾಂತ ಮಾತ್ರ. ಆ ಸಿದ್ಧಾಂತದ ಆಧಾರದ ಮೇಲೆ ಪಾರ್ಟಿ ಬೆಳೆದಿದೆ. ನಮ್ಮ ಜೊತೆ ನಿಂತವರು, ಪೆಟ್ಟು ತಿಂದವರು ಅವರ ಅಶೀವಾರ್ದದಿಂದಲೇ ಪಕ್ಷ ಈ ಮಟ್ಟಕ್ಕೆ ಬೆಳೆದಿದ್ದು. ನಮಗೆ ಅಧಿಕಾರ ಸಿಕ್ಕಾಗ ಜಾತಿ ಬರುತ್ತೆ. ನಾವು ಜೈಲಿಗೆ ಹೋಗುವಾಗ ಯಾವ ಜಾತಿ ಬರಲಿಲ್ಲ. ಎಲ್ಲ ಜಾತಿಗಳ ಸಹಕಾರ ಇದ್ದರೆ ಮಾತ್ರ ಅಧಿಕಾರ. ಇಲ್ಲವಾದರೆ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಸಿ.ಟಿ.ರವಿ ಪರೋಕ್ಷವಾಗಿ ಅಸಮಾಧಾನ ತೋಡಿಕೊಂಡರು.

ಇದನ್ನೂ ಓದಿ: ಅರುಣ್ ಸಿಂಗ್ ಭೇಟಿಯಾದ ಪಂಚಮಸಾಲಿ ಪೀಠದ ಶ್ರೀ: ಸಿಎಂ ಸ್ಥಾನಕ್ಕೆ ಸಮುದಾಯದ ಪರ ಬ್ಯಾಟಿಂಗ್?

Advertisement

ಕೋರ್ ಕಮಿಟಿ ಸಭೆಯಲ್ಲಿ ರಾಜ್ಯದ ಹಿತಾಸಕ್ತಿ, ಪಕ್ಷದ ಹಿತ ದೃಷ್ಟಿಯಿಂದ ಚರ್ಚೆ ನಡೆಸುತ್ತೇವೆ. ಎಲ್ಲಾ ವಿಚಾರಗಳನ್ನು ಮಾಧ್ಯಮದ ಮುಂದೆ ಪ್ರಸ್ತಾಪ ಮಾಡಲಾಗುವುದಿಲ್ಲ. ಪಕ್ಷದ ಒಳಿತು, ಕೆಡುಕುಗಳ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ಸಂಪುಟ ಪುನರ್ ರಚನೆ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರವಿದೆ. ನಾವು ಪಕ್ಷದಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಬಹುದು ಅಷ್ಟೇ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next