Advertisement

ಯಾದಗಿರಿ: 117 ಮಂದಿಗೆ ಸೋಂಕು

09:41 AM Jul 22, 2020 | Suhan S |

ಯಾದಗಿರಿ: ಜಿಲ್ಲಾ ಕೇಂದ್ರ ಸೇರಿದಂತೆ ಹಲವು ಗ್ರಾಮೀಣ ಕೋವಿಡ್ ಸೋಂಕು ವ್ಯಾಪಿಸಿದ್ದು, ಮಂಗಳವಾರ 117 ಜನರಲ್ಲಿ ಪಾಸಿಟಿವ್‌ ದೃಢವಾಗಿದ್ದು, ಸೋಂಕಿತರ ಸಂಖ್ಯೆ 1713ಕ್ಕೇರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿ ಸೋಂಕಿನ ಸಂಪರ್ಕದ ಮೂಲವೇ ಪತ್ತೆಯಾಗದ ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ಸಿಬ್ಬಂದಿಗಳಿಗೆ ಸೋಂಕು ಹರಡುತ್ತಿದೆ. ವಡಗೇರಾ ಸಮುದಾಯ ಆಸ್ಪತ್ರೆಯ ಮೂರು ಸಿಬ್ಬಂದಿ 35, 24, 40 ವರ್ಷದ ಪುರುಷ ಪಿ-72467, ಪಿ-72573, ಪಿ-72574 ಅಲ್ಲದೇ ರಾಜನಕೊಳ್ಳೂರ ಪಿಎಚ್‌ಸಿಯ 55 ವರ್ಷದ ಪುರುಷ ಪಿ-72755, ಚಾಮನಾಳ ಪಿಎಚ್‌ಸಿಯ 25 ವರ್ಷದ ಮಹಿಳೆ ಪಿ-73276 ಸೇರಿದಂತೆ ಪೊಲೀಸ್‌ ಸಿಬ್ಬಂದಿ 35 ವರ್ಷದ ಪುರುಷ ಪಿ-73439 ಅಲ್ಲದೇ ಯಾದಗಿರಿ ನಗರದಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.

8 ವರ್ಷದ ಬಾಲಕಿ ಪಿ-72942 ಸೇರಿ 26 ವರ್ಷದ ಮಹಿಳೆ‌ ಪಿ-69283, 54 ವರ್ಷದ ಮಹಿಳೆ ಪಿ-71287, 40 ವರ್ಷದ ಪುರುಷ ಪಿ-71292, 20 ವರ್ಷದ ಪುರುಷ ಪಿ-71293, 50 ವರ್ಷದ ಪುರುಷ ಪಿ-71325, 45 ವರ್ಷದ ಪುರುಷ ಪಿ-71452, 40 ವರ್ಷದ ಪುರುಷ ಪಿ-71453, 26 ವರ್ಷದ ಮಹಿಳೆ ಪಿ-71454 ಸೇರಿದಂತೆ ಒಟ್ಟು 84 ಪುರುಷರು ಮತ್ತು 33 ಮಹಿಳೆಯರಿಗೆ ಸೋಂಕು ವಕ್ಕರಿಸಿದೆ. ಜಿಲ್ಲಾಡಳಿತ ಮಂಗಳವಾರ 174 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಕಳಿಸಿದ್ದು, 130 ಜನರ ವರದಿ ನೆಗೆಟಿವ್‌ ಬಂದಿದೆ.

ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 3,525 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 5,237 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 131 ಕಂಟೈನ್ಮೆಂಟ್‌ ಝೋನ್‌ ಗಳನ್ನು ರಚಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 98 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ 15, ಸುರಪುರ 44 ಜನ ಹಾಗೂ ಬಂದಳ್ಳಿ ಏಕಲವ್ಯ ಕೋವಿಡ್ ಕೇರ್‌ ಸೆಂಟರ್‌ ನಲ್ಲಿ 50 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 1 ಸಾಂಸ್ಥಿಕ ಕ್ವಾರಂಟೈನ್‌ ಸೆಂಟರ್‌ನಲ್ಲಿ ಒಟ್ಟು 10 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next