Advertisement

ಯತಿಗಳಿಂದ ಆತ್ಮಲಿಂಗ ದರುಶನಕ್ಕೀಗ ವರ್ಷ ಪೂರ್ಣ

03:02 PM Jan 09, 2018 | |

ಗೋಕರ್ಣ: ಮಂಡಲಾಧೀಶ್ವರ ರಾಘವೇಶ್ವರ ಭಾರತೀ ಸ್ವಾಮೀಜಿ ಮಾರ್ಗದರ್ಶನದಲ್ಲಿ ಲೋಕಕಲ್ಯಾಣಾರ್ಥ ನಾಡಿನ ವಿವಿಧ ಸಂತರಿಂದ ಆತ್ಮಲಿಂಗ ಪೂಜೆ ಹಾಗೂ ಸಂತ ಸಮರ್ಪಣಾ ಕಾರ್ಯಕ್ರಮ ಇಂದಿಗೆ 365 ದಿನಗಳನ್ನು ಪೂರೈಸಿದಂತಾಗಿದೆ. ಕಳೆದ 2017ರ ಜನವರಿ 9ರಿಂದ ಆರಂಭಗೊಂಡ ಪ್ರತಿದಿನ ನಾಡಿನ ವಿವಿಧ ಮಠದ ಮಠಾಧೀಶರು ಇಲ್ಲಿಗೆ ಬಂದು ಆತ್ಮಲಿಂಗ ಪೂಜೆ ನಡೆಸುವ ಕಾರ್ಯಕ್ರಮ ಜ.8 ಸೋಮವಾರ ಒಂದು ವರ್ಷ ಪೂರೈಸಿದೆ.

Advertisement

ಅಂದು ಆಂಧ್ರ ಪ್ರದೇಶ ಶ್ರೀಶೈಲದ ಸೂರ್ಯಸಿಂಹಾಸನಾ ಮಠಾಧೀಶ ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಇಂದು 365ನೇ ದಿನ ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ ಗೋಕರ್ಣ
ಗೌರವ ಕಾರ್ಯಕ್ರಮವು ಬಸವಕಲ್ಯಾಣದ ಶಾಂತಲಿಂಗೇಶ್ವರ ಮಠದ ಶಾಂತಲಿಂಗ ಸ್ವಾಮಿಗಳ ಸಾನ್ನಿಧ್ಯದಲ್ಲಿ ಮಹಾಬಲೇಶ್ವರ ದೇವಾಲಯದ ಆತ್ಮಲಿಂಗಕ್ಕೆ ಪೂಜೆ ನೆರವೇರಿಸಿದರು.

ದೇವಾಲಯದ ಪ್ರಧಾನ ಅರ್ಚಕ ಹಾಗೂ ಉಪಾಧಿವಂತ ಪುರೋಹಿತ ವೇ.ಶಿತಿಕಂಠ ಹಿರೇ ದೇವಾಲಯದ ವತಿಯಿಂದ ಪೂಜ್ಯರಿಗೆ ಫಲ ಸಮರ್ಪಿಸಿ, ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆನೀಡಿ, ಗೌರವಿಸಿದರು. ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಗೋಳಗೋಡ, ಸಂತಸೇವಕ ಸಮಿತಿ ವಿ.ಡಿ. ಭಟ್ಟ್ ಹಾಗೂ ಉಪಾಧಿವಂತ ಮಂಡಳದ ಸದಸ್ಯರು ಉಪಸ್ಥಿತರಿದ್ದರು. 

ಉಪಾಧಿವಂತ ವೇ.ವಿಶ್ವನಾಥ ಬಾಳೇಹಿತ್ತಲು ಪೂಜಾಕಾರ್ಯ ನೆರವೇರಿಸಿದರು, ಆಗಮಿಸಿದ ಎಲ್ಲ ಸಂತರೂ ತಮ್ಮ ಶಿಷ್ಯ ಜನತೆಯ ಒಳಿತು ಹಾಗೂ ಲೋಕಕಲ್ಯಾಣ ಸಂಕಲ್ಪಿಸಿ, ಪ್ರಾತಃ ಕಾಲದಲ್ಲಿ ಆತ್ಮಲಿಂಗಕ್ಕೆ ಕ್ಷೀರಾಭಿಷೇಕ, ಪಂಚಾಮೃತ, ನವಧಾನ್ಯ, ರುದ್ರಾಭಿಷೇಕ ಬಿಲ್ವಾರ್ಚನೆ, ಮಂಗಳಾರತಿ ಹಾಗೂ ಸುವರ್ಣ ನಾಗಾಭರಣ ವಿಶೇಷ ಪೂಜೆ ಸಲ್ಲಿಸಿ, ಶಿವ ಸಂಪ್ರೀತಿ ಪಡೆದು, ಈ ವಿಶೇಷ ಕಾರ್ಯಕ್ರಮವನ್ನು ಮೆಚ್ಚಿ, ಹಾಡಿ ಹೊಗಳಿ, ಆಶೀರ್ವದಿಸುತ್ತಿದ್ದರು. ಪೂಜೆಯ ನಂತರ ವಿವಿಧ ಸಮಾಜದ ಮುಖಂಡರಿಂದ ಪ್ರತಿದಿನದ ಗೌರವಾರ್ಪಣೆ ನಡೆಸಿಕೊಡಲಾಗುತ್ತಿತ್ತು.

ಇನ್ನು ಮುಂದೆಯೂ ಆತ್ಮಲಿಂಗ ಸನ್ನಿಧಿ ಗೋಕರ್ಣದ ಮಹಾಬಲೇಶ್ವರ ದೇವಾಲಯವು ಸಂತರ ಕೇಂದ್ರವಾಗಲಿದೆ. ರಾಜ್ಯದಲ್ಲಿರುವ ಸುಮಾರು 5ಸಾವಿರಕ್ಕೂ ಹೆಚ್ಚು ಮಠಗಳಿದ್ದು, ಎಲ್ಲ ಮಠಾಧೀಶರನ್ನು ಸಂಪರ್ಕಿಸಿ, ಗೋಕರ್ಣಕ್ಕೆ ಆಹ್ವಾನಿಸಿ, ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲು ಊರಿನ ಉಪಾಧಿವಂತ ಅರ್ಚಕರು ಹಾಗೂ ವಿವಿಧ ಸಮಾಜದ ಮುಖಂಡರ ಸಹಯೋಗದಿಂದ ವ್ಯವಸ್ಥೆ ಮಾಡಲಾಗುವುದು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಈ ನಡುವೆ ದೇವಾಲಯದ ಉಪಾಧಿವಂತ ಮಂಡಳ ಹಾಗೂ ಜನಸಮುದಾಯ ಸಂತರುಗಳಿಂದ ನೆರವೇರುವ ಸಾರ್ವಭೌಮ ಮಹಾಬಲೇಶ್ವರ ದೇವರ ಪೂಜಾಕಾರ್ಯ ಅದ್ವಿತೀಯ ಕಾರ್ಯಕ್ರಮವಾಗಿದ್ದು, ಶ್ರೀಗಳ ಸಂಕಲ್ಪದಂತೆ ಮುಂದಿನ ದಿನಗಳಲ್ಲಿಯೂ ಆಗಮಿಸಿ, ಸಂತರು ಆಶೀರ್ವದಿಸಿ
ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕೆಂದು ದೇವಾಲಯದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಗೋಳಗೋಡ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next