ಚಿತ್ರದುರ್ಗ: ಕಳುವಾಗಿದ್ದ ಟ್ರ್ಯಾಕ್ಟರ್ ಬರೋಬ್ಬರಿ ಒಂದು ವರ್ಷ ಎರಡು ತಿಂಗಳ ನಂತರ ಸಿಕ್ಕಿರುವ ಪ್ರಕರಣ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ
ಹೊಳಲ್ಕೆರೆ ತಾಲ್ಲೂಕು ಮದ್ದೇರು ಗ್ರಾಮದ ರವಿ ಎಂಬುವವರಿಗೆ ಸೇರಿದ್ದ ಟ್ರಾಕ್ಟರನ್ನು ಹೊಳಲ್ಕೆರೆ ತಾಲೂಕು ಪೊಲೀಸರು ಪತ್ತೆ ಮಾಡಿಕೊಟ್ಟಿದ್ದಾರೆ.
ತಮಿಳುನಾಡಿನ ಕೃಷ್ಟಗಿರಿ ಪಟ್ಟಣದ ಬಳಿ ಟ್ರ್ಯಾಕ್ಟರ್ ಪತ್ತೆಯಾಗಿದ್ದು, ಕಳ್ಳತನ ಮಾಡಿದ ಆರೋಪದಡಿ ಮದ್ದೇರು ಗ್ರಾಮದ ತಿಮ್ಮಪ್ಪ ಹಾಗೂ ಗಿರೀಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
2018 ಸೆಪ್ಟೆಂಬರ್ 11 ರಂದು ಟ್ರ್ಯಾಕ್ಟರ್ ಕಳುವಾಗಿರುವ ಬಗ್ಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಹೊಳಲ್ಕೆರೆ ಸಿಪಿಐ ರವೀಶ್, ಎಎಸ್ಐ ದೇವೇಂದ್ರಪ್ಪ, ಮುಖ್ಯ ಪೇದೆ ಹೆಚ್.ಸಿ. ಚಿದಾನಂದ, ಸಿಬ್ಬಂದಿಗಳಾದ ಎಲ್.ಎನ್.ಕಲ್ಲೇಶ್, ಮೋಹನ ನಾಯ್ಕ ಕಳುವಾಗಿದ್ದ ಟ್ರಾಕ್ಟರ್ ಪತ್ತೆಗೆ ಕಾರ್ಯಚರಣೆ ಮಾಡಿದ್ದರು.