Advertisement

ವೈ.ಬಿ. ಅಣ್ಣಿಗೇರಿ ಮಹಾವಿದ್ಯಾಲಯ ಧಾರವಾಡ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆ

06:56 PM Feb 08, 2023 | Team Udayavani |

– ಸ್ವಚ್ಛಂದ ಪರಿಸರದ ಪ್ರದೇಶದಲ್ಲಿ ಸ್ವಂತ ಕಟ್ಟಡ
– ಗೆಳೆಯರ ಜತೆ ಸೇರಿ ಅಣ್ಣಿಗೇರಿ ಕ್ಲಾಸಿಸ್‌ ಆರಂಭ
– ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಕಲ ಸೌಲಭ್ಯ

Advertisement

ಧಾರವಾಡ ಜಿಲ್ಲೆಯಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಹೊರ ಹೊಮ್ಮಿರುವ ವೈ.ಬಿ. ಅಣ್ಣಿಗೇರಿ ಪದವಿ ಪೂರ್ವ ವಿಜ್ಞಾನ-ವಾಣಿಜ್ಯ ಮಹಾವಿದ್ಯಾಲಯ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರತಿ ವರ್ಷವೂ ಈ ಸಂಸ್ಥೆಯ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ-ರ್‍ಯಾಂಕ್‌ಗಳನ್ನು ಪಡೆಯುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಹಾವೇರಿ ಜಿಲ್ಲೆ ಶಿಗ್ಗಾವಿ ಮೂಲದವರಾದ ಅದರಲ್ಲೂ ಗ್ರಾಮೀಣ ಭಾಗದ ರೈತ ಕುಟುಂಬದಿಂದ ಬಂದಿರುವ ಪ್ರೊ|ನಾಗೇಶ ವೈ. ಅಣ್ಣಿಗೇರಿ ಅವರು ಈ ಸಂಸ್ಥೆಯ ಅಧ್ಯಕ್ಷರಾಗಿದ್ದು, ಕರ್ನಾಟಕದ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಎಂಫಿಲ್‌ ಪದವಿ ಪಡೆದಿದ್ದಾರೆ. ಕರ್ನಾಟಕ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, ಬಳಿಕ ಸ್ನೇಹಿತರೊಂದಿಗೆ ಸೇರಿ ಅಣ್ಣಿಗೇರಿ ಕ್ಲಾಸಿಸ್‌ ಎಂಬ ಸಂಸ್ಥೆ ಆರಂಭಿಸಿದರು. ನಂತರ 2013ರಲ್ಲಿ ತಮ್ಮದೇಯಾದ ಪಿಯು ವಿಜ್ಞಾನ-ವಾಣಿಜ್ಯ ಪದವಿ ಪೂರ್ವ ಕಾಲೇಜು ಆರಂಭಿಸಿದರು. 2018ರಲ್ಲಿ ಸ್ವಂತ ಕಟ್ಟಡ ಹೊಂದಿ ಮುನ್ನಡೆದಿದೆ. ಪ್ರೊ|ನಾಗೇಶ ವೈ.ಅಣ್ಣಿಗೇರಿ ಅವರು ಅಧ್ಯಕ್ಷರಾದರೂ ದಿನಕ್ಕೆ 5-6 ಗಂಟೆಗಳ ಕಾಲ ಗಣಿತ ವಿಷಯ ಬೋಧಿಸುವುದು ವಿಶೇಷ.

ವಿದ್ಯಾಕಾಶಿ ಧಾರವಾಡದ ಅಣ್ಣಿಗೇರಿ ಸೇವಾ ಟ್ರಸ್ಟ್‌ನ ವೈ.ಬಿ.ಅಣ್ಣಿಗೇರಿ ಪಿಯು ವಿಜ್ಞಾನ-ವಾಣಿಜ್ಯ ಮಹಾವಿದ್ಯಾಲಯ ಸರ್ವತೋಮುಖ, ಮೌಲ್ಯ, ಸಂಸ್ಕಾರ ಆಧಾರವಾದ ಶಿಕ್ಷಣ ನೀಡುವ ಮೂಲಕ ಪರಿಪೂರ್ಣತೆ ಹೊಂದಿದ ವಿದ್ಯಾಮಂದಿರವಾಗಿ ಪಕ್ವಗೊಂಡಿದೆ. ಹಳಿಯಾಳ ರಸ್ತೆಯಲ್ಲಿ ಸ್ವತ್ಛಂದ ಪರಿಸರದ ವಿಶಾಲ ಪ್ರದೇಶದಲ್ಲಿ ಕ್ಲಾಸಿಕಲ್‌ ಇರೋಪಿಯನ್‌ ಮಾದರಿಯಲ್ಲಿ ಐದು ಅಂತಸ್ತಿನ ಕಟ್ಟಡ ವಿಶಿಷ್ಟ ರೀತಿಯಿಂದ ಕೂಡಿದ್ದು, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನೊಳಗೊಂಡಿದೆ. ಸುಸಜ್ಜಿತ ಕಟ್ಟಡದಲ್ಲಿ ಅತ್ಯಾಧುನಿಕ ಬೋಧನಾ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ಯೋಗಾ ಹಾಲ್‌, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಹೊಂದಿದ್ದು, 50 ಜನ ನುರಿತ ಉಪನ್ಯಾಸಕ ವರ್ಗ, 15 ಜನ ಬೋಧಕೇತರ ಸಿಬ್ಬಂದಿ ಮಹಾವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಾಣಿಜ್ಯ-ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸದ್ಯ 570 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್‌, ಸ್ಥಳೀಯ ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಇಂಗ್ಲಿಷ್‌ ವಾತಾವರಣ ನಿರ್ಮಿಸುವ ಮೂಲಕ ಹಳ್ಳಿಯಿಂದ ಬಂದ ವಿದ್ಯಾರ್ಥಿಗಳಲ್ಲಿನ ಇಂಗ್ಲಿಷ್‌ ಬಗೆಗಿನ ಕೀಳರಿಮೆ ಹೊಡೆದೋಡಿಸಲಾಗುತ್ತಿದೆ. ಹೀಗಾಗಿ ಗ್ರಾಮೀಣ-ನಗರ ಭಾಗದಿಂದ ಬರುವ ಪಿಯು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಅಣ್ಣಿಗೇರಿ ಸೇವಾ ಟ್ರಸ್ಟ್‌ ವಿಜ್ಞಾನ-ವಾಣಿಜ್ಯ ವಿಭಾಗದಲ್ಲಿ ಪ್ರತಿವರ್ಷ ಶೇ.90ಕ್ಕೂ ಅಧಿಕ ಫಲಿತಾಂಶ ಸಾಧನೆ ಮಾಡುತ್ತಲೇ ಬಂದಿದೆ.

Advertisement

ಅಣ್ಣಿಗೇರಿ ಮಹಾವಿದ್ಯಾಲಯದಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಐಐಟಿ, ಜೆಇಇ, ನೀಟ್‌, ಕೆ.ಸಿಇಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ, ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ. ಕಾಲೇಜು ಅವಧಿ ಮುಗಿದ ನಂತರವೂ ಸಂಜೆ 5:30ರಿಂದ 7:00 ಗಂಟೆಯವರೆಗೆ ಕಾಲೇಜಿನಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿದೆ. ನಂತರ ಶಿಕ್ಷಕರ ಸಮ್ಮುಖದ ಲ್ಲಿಯೇ ಸ್ಟಡಿವರ್ಕ್‌ ಆಗುತ್ತಿದೆ. ಪ್ರತಿ 20 ವಿದ್ಯಾರ್ಥಿಗಳಿಗೆ ಒಬ್ಬ ಮೆಂಟರ್‌ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಲಾಗುತ್ತಿದೆ. ಇದೇ ಸಂಸ್ಥೆಯ ಬಿಕಾಂ ಪದವಿ ಕಾಲೇಜು ಕೂಡ ವಿಶಿಷ್ಟತೆಯೊಂದಿಗೆ ಶಿಕ್ಷಣದಲ್ಲಿ ಕ್ರಾಂತಿ ಮಾಡುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಸಂಸ್ಥೆಯು ಬಿಸಿಎ ಪದವಿ ಕೋರ್ಸ್‌ ತೆರೆಯಲು ಉದ್ದೇಶಿಸಲಾಗಿದೆ.

ನಮ್ಮ ಸಂಸ್ಥೆ ಶಿಕ್ಷಣ ನೀಡುವುದಷ್ಟೇ ಅಲ್ಲ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಿ ತಂದೆ-ತಾಯಿಗಳಿಗೆ ಉತ್ತಮ ಮಕ್ಕಳನ್ನಾಗಿಸಿ ಸಮಾಜಕ್ಕೆ ಒಳ್ಳೆಯ ನಾಗರಿಕರನ್ನಾಗಿ ರೂಪಿಸುವ ಗುರಿ ನಮ್ಮದಾಗಿದೆ. ಕಾಲೇಜು ಆಧುನಿಕ ಪ್ರಯೋಗಾಲಯ, ಗ್ರಂಥಾಲಯ ಸೌಲಭ್ಯ ಹೊಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಲು ಎರಡು ತಿಂಗಳಿಗೊಮ್ಮೆ ಪಾಲಕರ ಸಭೆ ನಡೆಸಲಾಗುತ್ತಿದೆ. ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಉತ್ತಮ ವಸತಿ ನಿಲಯ ಸೌಲಭ್ಯವಿದೆ. ವಿದ್ಯಾರ್ಥಿಗಳ ಸರ್ವತೋಮುಖ ಏಳ್ಗೆಯೇ ಕಾಲೇಜಿನ ಮುಖ್ಯ ಧ್ಯೇಯ ಎಂದು ಹೇಳುತ್ತಾರೆ ಪ್ರೊ|ನಾಗೇಶ ಅಣ್ಣಿಗೇರಿ.

ಅಣ್ಣಿಗೇರಿ ಕಾಲೇಜಿನಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅಷ್ಟೇ ಆದ್ಯತೆ ನೀಡಲಾಗುತ್ತಿದೆ. ಮಕ್ಕಳು ಪಾಠದ ಜತೆ ಆಟದಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಇದು ಬದುಕೆಂಬ ಭವಿಷ್ಯಕ್ಕೆ ಮೆಟ್ಟಿಲಾಗಲಿದೆ ಎಂಬ ನಂಬಿಕೆಯೊಂದಿಗೆ ಮುನ್ನಡೆಯಲಾಗುತ್ತಿದೆ. ಇತ್ತೀಚೆಗೆ ಕೆಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಿಗದೆ ತಪ್ಪು ಕೋರ್ಸ್‌ಗಳ ಆಯ್ಕೆಯಿಂದ ಅವರ ಓದಿನ ಹಾದಿಯೇ ತಪ್ಪುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಹಾಗೂ ಕೋರ್ಸ್‌ ಆಯ್ಕೆ ವಿಚಾರದಲ್ಲಿ ಅವರಿಗಿರುವ ಅವಕಾಶಗಳ ಬಗ್ಗೆ ತಮ್ಮ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಹೊರತಾಗಿಯೂ ಬೇರೆ ಬೇರೆ ಹೈಸ್ಕೂಲ್‌, ಕಾಲೇಜು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿರುವುದು ಅಣ್ಣಿಗೇರಿ ಕಾಲೇಜಿನ ವಿದ್ಯಾರ್ಥಿ ಪರ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ.

ಮಕ್ಕಳ ಆಸಕ್ತಿಗೆ ತಕ್ಕಂತೆ ಕೋರ್ಸ್‌ ಆಯ್ಕೆ ಅಗತ್ಯ. ಸ್ವಲ್ಪ ಆರಂಭಿಕ ಕಷ್ಟವಾದರೂ ಸರಿ ಉತ್ತಮ ಕೋರ್ಸ್‌ ಆಯ್ಕೆ ವಿದ್ಯಾರ್ಥಿಯ ಭವಿಷ್ಯವನ್ನೇ ಬದಲಿಸಲಿದೆ. ಇದು ಅತ್ಯಂತ ಪ್ರಮುಖವಾಗಿದ್ದು, ಮಕ್ಕಳ ಶಿಕ್ಷಣದಲ್ಲಿ ತಮ್ಮ ಪಾತ್ರ ಅರಿತು ಪಾಲಕರು ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು. ಇಂಗ್ಲಿಷ್‌ ಕಬ್ಬಿಣದ ಕಡಲೆ ಅಲ್ಲ. ಓದಿಗಿಂತ ರೂಢಿಯಿಂದ ಈ ಭಾಷೆಯ ಕಲಿಕೆ ಸುಲಭ. ಹೀಗಾಗಿ ನಾವು ನಮ್ಮ ಸಂಸ್ಥೆಯಲ್ಲಿ ಅಂತಹದೊಂದು ವಾತಾವರಣ ಸೃಷ್ಟಿಗೆ ಆದ್ಯತೆ ನೀಡಿದ್ದೇವೆ. ಅದೇ ರೀತಿ ಉತ್ತಮ ಬೋಧನೆ ಜತೆಗೆ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಆದ್ಯತೆ ಕೊಟ್ಟಿದ್ದೇವೆ.
-ಪ್ರೊ|ನಾಗೇಶ ವೈ. ಅಣ್ಣಿಗೇರಿ, ಅಧ್ಯಕ್ಷರು, ಅಣ್ಣಿಗೇರಿ ಸೇವಾ ಟ್ರಸ್ಟ್‌.

Advertisement

Udayavani is now on Telegram. Click here to join our channel and stay updated with the latest news.

Next