ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿರುವ ಆರೋಪದಲ್ಲಿ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಉಗ್ರ ಯಾಸಿನ್ ಮಲಿಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಾರಣ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಪ್ರವೀಣ್ ಕೊಲೆ; ಸರಕಾರ ಎಚ್ಚೆತ್ತು ಕೊಳ್ಳಲಿಲ್ಲವೇಕೆ?: ಹೆಚ್ ಡಿಕೆ ಕಿಡಿ
ಉಪವಾಸ ಸತ್ಯಾಗ್ರಹದಿಂದ ಯಾಸಿನ್ ಮಲಿಕ್ ರಕ್ತದೊತ್ತಡದಲ್ಲಿ ಏರು ಪೇರಾಗಿದ್ದು, ಕೂಡಲೇ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತನಗೆ ಚಿಕಿತ್ಸೆ ನೀಡಬಾರದು ಎಂದು ಮಲಿಕ್ ವೈದ್ಯರಿಗೆ ಪತ್ರ ಬರೆದಿರುವುದಾಗಿ ವರದಿ ವಿವರಿಸಿದೆ.
ತನ್ನ ಪ್ರಕರಣವನ್ನು ಸಮರ್ಪಕವಾಗಿ ತನಿಖೆ ನಡೆಸಿಲ್ಲ ಎಂದು ಆರೋಪಿಸಿ ಯಾಸಿನ್ ಮಲಿಕ್ ಜುಲೈ 22ರಿಂದ ತಿಹಾರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿರುವುದಾಗಿ ವರದಿ ತಿಳಿಸಿದೆ.
ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪದಲ್ಲಿ ಯಾಸಿನ್ ಮಲಿಕ್ ಗೆ ದೆಹಲಿಯ ಎನ್ ಐಎ ವಿಶೇಷ ಕೋರ್ಟ್ ಮೇ 25ರಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.