Advertisement

ಯಶವಂತ ಸಿನ್ಹಾ ರಾಜಕೀಯ ಸನ್ಯಾಸ

06:00 AM Apr 22, 2018 | |

ಪಟ್ನಾ: ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ (80) ಬಿಜೆಪಿ ತೊರೆಯುವುದಾಗಿ ಶನಿವಾರ ಘೋಷಿಸಿದ್ದು, ಪಕ್ಷ ರಾಜಕೀಯದಿಂದ  ಸನ್ಯಾಸ ಸ್ವೀಕರಿಸುವುದಾಗಿಯೂ ಪ್ರಕಟಿಸಿದ್ದಾರೆ.

Advertisement

ಪಟ್ನಾದಲ್ಲಿ ಸಿನ್ಹಾ ಅವರೇ ಇತ್ತೀಚೆಗೆ ಆರಂಭಿಸಿದ್ದ ರಾಷ್ಟ್ರೀಯ ಸಂಘಟನೆಯ ಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಸೇರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ಅದನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾರೆ.

“ದೀರ್ಘ‌ ಕಾಲದಿಂದ ಬಿಜೆಪಿ ಜತೆಗೆ ಹೊಂದಿದ್ದ ಸಂಬಂಧ ಕಡಿದುಕೊಳ್ಳುತ್ತಿದ್ದೇನೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಆದರೆ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಲು ಶ್ರಮಿಸುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next