Advertisement

ಅಂಡರ್‌-19 ಏಕದಿನ ಕ್ರಿಕೆಟ್‌: ಜೈಸ್ವಾಲ್‌ ಶತಕ; ಭಾರತಕ್ಕೆ 3-2 ಸರಣಿ

08:40 AM Aug 11, 2018 | |

ಮೊರಟುವಾ (ಶ್ರೀಲಂಕಾ): ಆರಂಭಕಾರ ಯಶಸ್ವಿ ಜೈಸ್ವಾಲ್‌ ಅವರ ಅಜೇಯ ಶತಕ ಸಾಹಸದಿಂದ ಆತಿಥೇಯ ಶ್ರೀಲಂಕಾ ವಿರುದ್ಧದ 5ನೇ ಹಾಗೂ ಕೊನೆಯ ಅಂಡರ್‌-19 ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದ ಭಾರತ ಸರಣಿಯನ್ನು 3-2 ಅಂತರದಿಂದ ತನ್ನದಾಗಿಸಿಕೊಂಡಿದೆ.

Advertisement

ಮೊರಟುವಾದಲ್ಲಿ ಶುಕ್ರವಾರ ನಡೆದ ಈ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 9 ವಿಕೆಟಿಗೆ 212 ರನ್‌ ಗಳಿಸಿದರೆ, ಭಾರತ 42.4 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 214 ರನ್‌ ಬಾರಿಸಿ ಗೆದ್ದು ಬಂದಿತು. ಆಗ ಯಶಸ್ವಿ ಜೈಸ್ವಾಲ್‌ 114 ರನ್‌ ಬಾರಿಸಿ ಔಟಾಗದೆ ಉಳಿದಿದ್ದರು. 128 ಎಸೆತಗಳ ಈ ಆಕರ್ಷಕ ಇನ್ನಿಂಗ್ಸ್‌ ವೇಳೆ 8 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಯಲ್ಪಟ್ಟಿತು. ಮತ್ತೂಬ್ಬ ಆರಂಭಕಾರ ದೇವದತ್‌ ಪಡಿಕ್ಕಲ್‌ 38 ರನ್‌ ಮಾಡಿದರು. ಇವರಿಬ್ಬರ 15.5 ಓವರ್‌ಗಳ ಮೊದಲ ವಿಕೆಟ್‌ ಜತೆಯಾಟದಲ್ಲಿ 71 ರನ್‌ ಒಟ್ಟುಗೂಡಿತು. ವನ್‌ಡೌನ್‌ ಬ್ಯಾಟ್ಸ್‌ ಮನ್‌ ಪವನ್‌ ಶಾ 36 ರನ್‌, ನಾಯಕ ಆರ್ಯನ್‌ ಜುಯಾಲ್‌ ಔಟಾಗದೆ 22 ರನ್‌ ಹೊಡೆದರು.

ಶ್ರೀಲಂಕಾ ಪರ ಓಪನರ್‌ ನಿಶಾನ್‌ ಮದುಶಂಕ ಫೆರ್ನಾಂಡೊ 95 ರನ್‌, ನುವನಿಂದು ಫೆರ್ನಾಂಡೊ 56 ರನ್‌ ಹೊಡೆದರು. ಭಾರತದ 6 ಬೌಲರ್‌ಗಳು ವಿಕೆಟ್‌ ಕಿತ್ತು ಮಿಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next