Advertisement

INDvsWI: ಚೊಚ್ಚಲ ಶತಕದೊಂದಿಗೆ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್

03:40 PM Jul 14, 2023 | Team Udayavani |

ಡೊಮಿನಿಕಾ: ಭಾರತದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರು ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. 143 ರನ್ ಗಳಿಸಿರುವ ಜೈಸ್ವಾಲ್ ಅಜೇಯರಾಗಿದ್ದಾರೆ.

Advertisement

ಈ ಶತಕದೊಂದಿಗೆ ಯಶಸ್ವಿ ಜೈಸ್ವಾಲ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವುಗಳ ಮಾಹಿತಿ ಇಲ್ಲಿದೆ.

1 ಅವರು 2 ನೇ ದಿನದಂದು 350 ಎಸೆತಗಳನ್ನು ಎದುರಿಸಿದರು. ಚೊಚ್ಚಲ ಟೆಸ್ಟ್ ಇನ್ನಿಂಗ್ಸ್‌ ನಲ್ಲಿ ಭಾರತೀಯನೊಬ್ಬ ಎದುರಿಸಿದ ಅತಿ ಹೆಚ್ಚು ಎಸೆತಗಳು. 1984ರಲ್ಲಿ ಈಡನ್ ಗಾರ್ಡನ್‌ನಲ್ಲಿ ಇಂಗ್ಲೆಂಡ್ ವಿರುದ್ಧ 110 ರನ್ ಗಳಿಸಿದ್ದಾಗ ಮೊಹಮ್ಮದ್ ಅಜರುದ್ದೀನ್ 322 ಎಸೆತಗಳಲ್ಲಿ ಶತಕ ಸಿಡಿಸಿದ್ದು ಹಿಂದಿನ ಅತ್ಯುತ್ತಮವಾಗಿತ್ತು.

2 ಜೈಸ್ವಾಲ್ ಅವರ 143 ರನ್ ಭಾರತದಿಂದ ಹೊರಗಿನ ಚೊಚ್ಚಲ ಪಂದ್ಯದಲ್ಲಿ ಭಾರತೀಯ ಆಟಗಾರನ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. 1996ರಲ್ಲಿ ಲಾರ್ಡ್ಸ್‌ನಲ್ಲಿ ಸೌರವ್ ಗಂಗೂಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ 131 ರನ್ ಗಳಿಸಿದ್ದರು.

3 ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ 17 ನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಜೈಸ್ವಾಲ್ ಪಾತ್ರರಾದರು. 1933 ರಲ್ಲಿ ಇಂಗ್ಲೆಂಡ್ ವಿರುದ್ಧ ಲಾಲಾ ಅಮರನಾಥ್ ಅವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ ಮೊದಲ ಭಾರತೀಯರಾಗಿದ್ದರು, ಆದರೆ ಶ್ರೇಯಸ್ ಅಯ್ಯರ್ ಅವರು 2021 ರಲ್ಲಿ ಈ ಸಾಧನೆ ಮಾಡಿದ ಕೊನೆಯ ಆಟಗಾರರಾಗಿದ್ದರು.

Advertisement

4 ಜೈಸ್ವಾಲ್ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ ಮೂರನೇ ಆರಂಭಿಕ ಆಟಗಾರ ಎನಿಸಿಕೊಂಡರು. ಶಿಖರ್ ಧವನ್ (ಆಸ್ಟ್ರೇಲಿಯಾ ವಿರುದ್ಧ, ಮೊಹಾಲಿ, 2013) ಮತ್ತು ಪೃಥ್ವಿ ಶಾ (ವಿಂಡೀಸ್ ವಿರುದ್ಧ, ರಾಜ್‌ಕೋಟ್, 2018) ನಂತರ ವಿದೇಶದಲ್ಲಿ ಚೊಚ್ಚಲ ಶತಕ ಗಳಿಸಿದ ಐದನೇ ಭಾರತೀಯ.

Advertisement

Udayavani is now on Telegram. Click here to join our channel and stay updated with the latest news.

Next