Advertisement

ನೂಜಾಡಿಯ ಸಾಧಕ ಕೃಷಿಕ ಮಂಜುನಾಥ ನಾಯ್ಕ

11:23 PM Jan 04, 2020 | Sriram |

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

Advertisement

ಕೊಲ್ಲೂರು: ಮನಸ್ಸು ಮಾಡಿದರೆ ಬರಡು ಭೂಮಿಯನ್ನು ಕೂಡ ಫಲವತ್ತಾದ ಕೃಷಿ ಭೂಮಿಯಾಗಿ ಪರಿವರ್ತಿಸಬಹುದೆಂಬುವುದಕ್ಕೆ ನೂಜಾಡಿಯ ಬ್ರಹೆ¾àರಿ ಮೇಲ್ಮನೆ ಮಂಜುನಾಥ ನಾಯ್ಕ ಸಾಕ್ಷಿ. ಕಠಿಣ ಪರಿಶ್ರಮದಿಂದ ಶ್ರಮಜೀವಿಯಾಗಿ ಬದುಕಿ ಜೀವನೋಪಾಯಕ್ಕೆ ಅಗತ್ಯವಿರುವಷ್ಟು ಆರ್ಥಿಕ ಸಂಪನ್ಮೂಲವನ್ನು ವ್ಯವಸ್ಥೆಗೊಳಿಸಲು ಸಾಧ್ಯ ಅನ್ನುವುದನ್ನು ಕೃಷಿ ಚಟುವಟಿಕೆ ಮೂಲಕ ಅವರು ಸಾಬೀತುಪಡಿಸಿದ್ದಾರೆ. ತಮ್ಮ ಪಾಲಿಗೆ ಬಂದ 3 ಎಕರೆ ಜಾಗದಲ್ಲಿ ಭತ್ತ ಬೆಳೆದು ಆ ಮೂಲಕ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೇವಲ 9ನೇ ತರಗತಿ ತನಕ ವಿದ್ಯಾಭ್ಯಾಸ ಹೊಂದಿರುವ ಅವರು ಕೃಷಿ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ. ಎಂ.4 ಭತ್ತದ ತಳಿ ಬಳಸಿ ಹೊಸ ಆವಿಷ್ಕಾರದ ಪರಂಪರೆಯನ್ನು ರೂಢಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಉಳುಮೆ ಪದ್ಧತಿ ಅನುಸರಿಸುತ್ತಾರೆ.

ತೋಟಗಾರಿಕೆ ಬೆಳೆ
ಭತ್ತದ ಬೆಳೆಯೊಡನೆ ಅಲಸಂಡೆ, ಹೀರೆಕಾಯಿ, ಬೆಂಡೆ, ತೊಂಡೆ, ಬದನೆ, ಅಡಿಕೆ, ಕಾಳುಮೆಣಸು ಸಹಿತ ಇನ್ನಿತರ ಬೆಳೆ ಬೆಳೆದು ಯಶಸ್ಸು ಕಂಡುಕೊಂಡಿದ್ದಾರೆ. ಮಂಜುನಾಥ ಅವರು ಮಾರುಕಟ್ಟೆಯ ದರದ ಏರಿಳಿತಕ್ಕನುಸಾರವಾಗಿ ಬೆಳೆಯನ್ನು ವಿಕ್ರಯಿಸುವುದರ ಮೂಲಕ ಸಂತುಷ್ಟ ಜೀವನ ನಡೆಸುತ್ತಿದ್ದಾರೆ.

ಪತ್ನಿ ಸುಜಾತಾ, 2 ಹೆಣ್ಣು ಮಕ್ಕಳೊಡನೆ ತೋಟಗಾರಿಕೆಯಲ್ಲಿ ತೊಡಗಿರುವ ಅವರು ಜೀವನೋಪಾಯಕ್ಕೆ ಇಷ್ಟೊಂದಿದ್ದರೆ ಸಾಕು ಎಂಬ ತೃಪ್ತಿಯ ಮಾತನಾಡುತ್ತಾರೆ. ತಂದೆ ಅಪ್ಪಿ ನಾಯ್ಕ, ತಾಯಿ ತುಂಗಾ ಅವರ ಸಹಕಾರವನ್ನು ಸದಾ ನೆನೆಯುವ ಈ ಕೃಷಿ ಕುಟುಂಬ ರಾಜ್ಯಮಟ್ಟದ ಗಮನ ಸೆಳೆದಿದೆ.

ಇತರ ಬೆಳೆಗಳು
ತೆಂಗು, ಕಂಗು, ಮಾವು, ಗೇರು ಸಹಿತ ತರಕಾರಿಗಳನ್ನು ಬೆಳೆಸುವದರ ಮೂಲಕ ಕೃಷಿ ಆದಾಯವನ್ನೇ ಅವಲಂಬಿಸಿದ್ದಾರೆ.ಅನೇಕ ಸಂಶೋಧಕರು ಇವರ ಕೃಷಿ ಪ್ರದೇಶಕ್ಕೆ ಭೇಟಿ ನೀಡಿ ಮಣ್ಣಿನ ಫ‌ಲವತ್ತತೆಯ ಜತೆಗೆ ಇತರ ಮಾಹಿತಿಗಳನ್ನು ಪಡೆದುಕೊಂಡು ಹೋಗಿರುವುದು ಖುಷಿಯ ವಿಚಾರವಾಗಿದೆ.

Advertisement

ಪ್ರಶಸ್ತಿ
ಪ್ರಶಸ್ತಿಗಳು ಕೃಷಿ ಉದ್ಯಮದಲ್ಲಿನ ಸಾಧನೆಗೆ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಶ್ರೇಷ್ಠ ಕೃಷಿಕ ಪ್ರಶಸ್ತಿ, ಮರಾಠಿ ಬಾಂಧವರು, ತಾಲೂಕು ರೈತ ಸಮಾಜ ವತಿಯಿಂದ ಉತ್ತಮ ಕೃಷಿಕ ಪ್ರಶಸ್ತಿ ಗಳಿಸಿದ್ದಾರೆ. ವಿವಿಧ ಜಿಲ್ಲೆಗಳ ಕೃಷಿ ಅಧ್ಯಯನ ಕೇಂದ್ರದ ತಂಡಗಳು ಇಲ್ಲಿಗೆ ಆಗಮಿಸಿ ವೀಕ್ಷಿಸಿ ಸಾಂಪ್ರದಾಯಿಕ ಕೃಷಿಯೊಡನೆ ಆಧುನಿಕ ಪರ್ಯಾಯ ವ್ಯವಸ್ಥೆಯನ್ನು ಪೋಣಿಸಿ ಕೃಷಿಯನ್ನು ಉತ್ತೇಜಿಸುವ ಕ್ರಮದ ಬಗ್ಗೆ ಶ್ಲಾಘಿಸಿರುವುದು ಗಮನಾರ್ಹ.

ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇದ್ದರೆ ಮಾತ್ರ ಸಾಧನೆ ಸಾಧ್ಯ ಬಾಲ್ಯದಿಂದಲೂ ಕೃಷಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೆ.ಜೀವನೋಪಾಯಕ್ಕೆ ಕೃಷಿಯನ್ನೇ ಅವಲಂಬಿಸಬೇಕಾದ ನಮಗೆ ಸವಾಲಾದ ಅನೇಕ ಸಂದರ್ಭದಲ್ಲಿ ಒದಗಿಬಂದ ಸಾಲ ಸೌಲಭ್ಯ
ವ್ಯವಸ್ಥೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದ್ದು ಇದೀಗ ಕಠಿಣ ಪರಿಶ್ರಮದ ಮೂಲಕ ಬಂಜರು ಭೂಮಿಯನ್ನು ಹಸನಾಗಿಸುವಲ್ಲಿ ಮಾಡಿದ ಪ್ರಯತ್ನ ಸಫ‌ಲವಾಗಿದೆ. ಇದರಿಂದ ಆರೋಗ್ಯಕ್ಕೆ ತುಂಬಾ ಲಾಭ ಹಾಗೂ ಸ್ವಯಂ ಉದ್ಯೋಗದ ಖುಷಿ ಲಭಿಸುತ್ತಿದೆ.
– ಮಂಜುನಾಥ ನಾಯ್ಕ, ನೂಜಾಡಿ

-ಡಾ. ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next