Advertisement
ಬುಧವಾರ ನಂಜನಗೂಡು ದೇವಾಲಯಕ್ಕೆ ಯಶ್ ಕುಟುಂಬ ಸಮೇತ ಭೇಟಿ ನೀಡಿದ್ದರು. ಈ ವೇಳೆ “ನಿಮ್ಮ ಹೊಸ ಸಿನಿಮಾ ಯಾವಾಗ?’ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ಯಶ್, “ಜನ ನನಗೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಅವರು ಕೊಡೋ ದುಡ್ಡಿಗೆ ವ್ಯಾಲ್ಯೂ ಇರಬೇಕು. ಅವರು ಫ್ರೀಯಾಗಿ ಬಂದು ಸಿನಿಮಾ ನೋಡಲ್ಲ. ಹಾಗಾಗಿ, ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಬಹಳ ದಿನಗಳಿಂದ ಕೆಲಸ ಮಾಡುತ್ತಲೇ ಇದ್ದೀವಿ. ನಾನಂತೂ ಒಂದು ದಿನ, ಒಂದು ಕ್ಷಣಾನೂ ವೇಸ್ಟ್ ಮಾಡುತ್ತಿಲ್ಲ. ಇಡೀ ದೇಶ ಜಗತ್ತು ನೋಡುತ್ತಾ ಇದೆ. ಆದಷ್ಟು ಬೇಗ ಬರುತ್ತೇನೆ’ ಎಂದಿದ್ದಾರೆ.
Related Articles
Advertisement
ಮುಂದೆಯೂ ಆತ ಇದೇ ತರಹದ ದೊಡ್ಡ ಹಿಟ್ ಕೊಡಬೇಕು, ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಸೂಪರ್ ಹಿಟ್ ಆಗಬೇಕೆಂದು ಅಭಿಮಾನಿಗಳು ಬಯಸುತ್ತಾರೆ. ಈ ತರಹದ ನಿರೀಕ್ಷೆ ಹೆಚ್ಚಾಗುತ್ತಾ ಹೋದಾಗಲೇ ನಾಯಕನ ಆಯ್ಕೆಗಳು ತಡವಾಗುತ್ತಾ ಹೋಗುತ್ತದೆ. ಮುಂದೆ ಯಾವ ರೀತಿಯ ಕಥೆ ಆಯ್ಕೆ ಮಾಡಬೇಕು, ಯಾವ ಜಾನರ್ ನ ಸಿನಿಮಾ ಒಪ್ಪಿಕೊಳ್ಳಬೇಕು ಎಂಬ ಸಣ್ಣ ಗೊಂದಲ ಸೃಷ್ಟಿಯಾಗೋದು ಸಹಜ. ಇದೇ ಕಾರಣದಿಂದ ಯಶ್ ಕೂಡಾ ಅಳೆದು ತೂಗಿ ಕಥೆಯ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ರವಿಪ್ರಕಾಶ್ ರೈ