Advertisement

Ambani ಪುತ್ರನ ಮದುವೆ ಸಂಭ್ರಮದಲ್ಲಿ ಯಶ್: ಗಮನ ಸೆಳೆದ ಹೊಸ ಲುಕ್

07:29 PM Jul 12, 2024 | Team Udayavani |

ಮುಂಬಯಿ: ಇಲ್ಲಿನ BKC ಯಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ನಡೆಯುತ್ತಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಕನ್ನಡ ಸೂಪರ್‌ಸ್ಟಾರ್ ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ಪತ್ನಿ ರಾಧಿಕಾ ಭಾಗಿಯಾಗುತ್ತಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಯಶ್ ದಂಪತಿ ಕಾರನ್ನೇರುವ ವೇಳೆ ಎಲ್ಲರ ಗಮನ ಸೆಳೆದರು.

Advertisement

ಯಶ್  ಉದ್ದನೆಯ ಕೂದಲಿಗೆ ಕತ್ತರಿ ಹಾಕಿಸಿಕೊಂಡಿದ್ದು ಭಿನ್ನ ಲುಕ್ ನಲ್ಲಿ ಗಮನ ಸೆಳೆದಿದ್ದಾರೆ. ಯಶ್ ಅವರು ಮುಂಬರುವ ಚಿತ್ರ ‘ಟಾಕ್ಸಿಕ್’ಗಾಗಿ(Toxic) ಹೊಸ ಲುಕ್ ಆಗಿರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಅಮೆರಿಕನ್ ನಟ ಮತ್ತು WWE star ಜಾನ್ ಸೀನ,ತೆಲುಗು ಸೆನ್ಸೇಷನ್ ಮಹೇಶ್ ಬಾಬು ಮತ್ತು ಇತರ ಹಲವು ನಟರು, ಗಣ್ಯಾತೀಗಣ್ಯರು ಮುಂಬೈನಲ್ಲಿ ನಡೆಯುತ್ತಿರುವ ಅದ್ದೂರಿ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ.

ಹೊಸ ಲುಕ್ ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಟ್ರೆಂಡಿಗ್ ಆಗಿದೆ. ದೊಡ್ಡ ಸಂಭ್ರಮದ ವೇಳೆ ‘ಟಾಕ್ಸಿಕ್’ ಚಿತ್ರಕ್ಕೆ ದೊಡ್ಡ ಪ್ರಮಾಣದ ಪ್ರಚಾರ ಸಿಕ್ಕಂತಾಗಿದೆ. ಕನ್ನಡಿಗರೂ ಸ್ಯಾಂಡಲ್ ವುಡ್ ನಿಂದ ನಟ ಅಂಬಾನಿ ಕುಟುಂಬದ ಮದುವೆಯಲ್ಲಿ ಭಾಗಿಯಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next