ಕೆಜಿಎಫ್: ಯುಗಾದಿಯೊಳಗೆ ಎರಗೋಳು ನೀರಾವರಿ ಯೋಜನೆ ಕೆಲಸ ಪೂರ್ತಿ ಮಾಡಲಿದ್ದು ಇನ್ನೆರಡು ವರ್ಷದಲ್ಲಿ ಎತ್ತಿನಹೊಳೆ ನೀರು ಜಿಲ್ಲೆಯ ಜನತೆಗೆ ಸಿಗಬಹುದೆಂಬ ವಿಶ್ವಾಸವಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು. ನಗರದ ಆ್ಯಂಡರ್‌ರ್ಸನ್‌ಪೇಟೆಯ ನೂರಿ ವಿದ್ಯಾ ಸಂಸ್ಥೆಯಲ್ಲಿ ಹೊಸ ಕಟ್ಟಡ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತಡೆ
ಯಾಜ್ಞೆಗೆ ಬೇಸರ: ಕೆ.ಸಿ. ವ್ಯಾಲಿ ನೀರನ್ನು ಅಂತರ್ಜಲ ಹೆಚ್ಚಿಸಲು ತರುತ್ತಿದ್ದೇವೆ. ನರಸಾಪುರದ ಬಳಿ ಕೆರೆಗಳನ್ನು ನೋಡಿದರೆ ಸಂತೋಷ ಆಗುತ್ತದೆ. ಎರಡು ಬಾರಿ ಸಂಸ್ಕರಣ ಮಾಡಿದ್ದಾರೆ. ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನೀರಿನ ಬಗ್ಗೆ ಎಲ್ಲಾ ಸರ್ಟಿಫಿಕೇಟ್ ನೀಡಿದೆ. ವರ್ಷದಲ್ಲಿ ಕೆಲಸ ಮಾಡಿದ್ದೇವೆ. ಆದರೆ, ಜನರದ್ದು ತಕರಾರು ಇಲ್ಲ.
ಕೆಲವು ಸ್ಥಾಪಿತ ಹಿತಾಸಕ್ತಿಗಳು ಸುಪ್ರಿಂ ಕೋರ್ಟಿನ ವಕೀಲರನ್ನು ಭೇಟಿ ಮಾಡುತ್ತಾರೆ. ತಡೆಯಾಜ್ಞೆ ತರುತ್ತಾರೆಂದು ವಿಷಾದಿಸಿದರು. ಬೆಳಗಾವಿ ಅಧಿವೇಶನದಲ್ಲಿ ರೂಪಾಶಶಿಧರ್ ಅವರು ಕೈಗಾರಿಕೆ ಬಗ್ಗೆ ಪ್ರಸ್ತಾಪಿಸಿದ್ದರು. ಈ ವೇಳೆ ಕೈಗಾರಿಕಾ ಮಂತ್ರಿಗಳು ಮಾಡೋಣ ಎಂದಿದ್ದಾರೆ. ಶಾಸಕಿಯವರು ಅಸೆಂಬ್ಲಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆಂದರು.
ಶಿಕ್ಷಣ ಸಂಸ್ಥೆಯನ್ನು ಮರೆಯದಿರಿ: ವಿದ್ಯಾರ್ಥಿಗಳು ತಮ್ಮ ಕೋರ್ಸ್ ಮುಗಿಸಿ ಹೊರಗೆ ಹೋಗುವ ಸಮಯ ಅತ್ಯಂತ ಖುಷಿ ಕೊಡುವ ಸಮಯವಾಗಿದೆ. ತಾವು ಜೀವನದಲ್ಲಿ ಸಾಧನೆ ಮಾಡಲು ಪ್ರೇರೇಪಿಸಿದ ಪೋಷಕರು ಮತ್ತು ಶಿಕ್ಷಣ ಸಂಸ್ಥೆಯನ್ನು ಮರೆಯಬಾರದು ಎಂದು ಹೇಳಿದರು. ನರ್ಸಿಂಗ್ ವೃತ್ತಿಗೆ ಬರುವವರು ಬಹುತೇಕ ಮಂದಿ ಮಧ್ಯಮ ವರ್ಗದವರು. ನರ್ಸ್ ಯಾವುದೇ ಜಾತಿ ಮತ-ಧರ್ಮ, ಆಸ್ತಿ ಯಾವುದನ್ನೂ ನೋಡುವುದಿಲ್ಲ. ಕೇವಲ ರೋಗವನ್ನು ಮಾತ್ರ ಕಾಣುತ್ತಾಳೆ. ನರ್ಸ್ ರೋಗಿಗಳ ಮಾರ್ಗದರ್ಶಿಯಾಗಿದ್ದಾರೆ. ಇತರರ ಜೀವ ಉಳಿಸುವವರೂ ಆಗಿದ್ದಾರೆಂದು ಶ್ಲಾಘಿಸಿದರು.
ಕನಸು ನನಸಾಗುತ್ತಿದೆ: ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ಇಡೀ ರಾಜ್ಯದಲ್ಲಿ ಪ್ರಮುಖವಾಗಿ ಕೋಲಾರ ಜಿಲ್ಲೆ ಬಹಳ ವರ್ಷದಿಂದ ಎತ್ತಿನಹೊಳೆ ನೀರನ್ನು ಕಾಯುತ್ತಿದೆ. ಕೆ.ಸಿ.ವ್ಯಾಲಿ ನೀರು ಬರುತ್ತಿದೆ. ಈ ಕನಸು ನನಸಾಗುವ ಸಮಯ ಬಂದಿದ್ದು ಡಿಸಿಸಿ ಬ್ಯಾಂಕ್‌ಗೆ ಪುನರ್ಜನ್ಮ ಕೊಟ್ಟ ಕೀರ್ತಿ ರಮೇಶ್‌ಕುಮಾರ್‌ರಿಗೆ ಸಲ್ಲುತ್ತದೆ ಎಂದು ಹೇಳಿದರು. ಸಂಸದ ಕೆ.ಎಚ್.ಮುನಿಯಪ್ಪ, ಸಂಸ್ಥೆ ಮುಖ್ಯಸ್ಥರಾದ ಶಾಹಿದ್ ನೂರಿ, ಶಾಜದಾ, ನಗರಸಭೆ ಮಾಜಿ ಅಧ್ಯಕ್ಷ ಕೆ.ಸಿ.ಮುರಳಿ, ಶ್ರೀನಿವಾಸ್ ಇದ್ದರು.