Advertisement

Ugadi ಫಲ ಭವಿಷ್ಯ: ಬಲಿಷ್ಠ ರಾಜನೇ ಮರಳಿ ರಾಜನಾಗುತ್ತಾನೆ

08:58 PM Apr 09, 2024 | Team Udayavani |

ಗುಳೇದಗುಡ್ಡ : ರಾಜ ಬಲಿಷ್ಠನಾಗಿದ್ದಾನೆ. ಹೀಗಾಗಿ ಈ ಬಾರಿಯು ರಾಜನೇ ರಾಜನಾಗುವ ಯೋಗವಿದ್ದು, ರಾಜ, ಪ್ರಜೆಗಳು, ಮಂತ್ರಿ ಸೈನ್ಯ ಬಲಿಷ್ಠವಾಗಿದೆ ಎನ್ನುವ ಮತ್ತು ಈ ದೇಶದಲ್ಲಿ ಯಾವ ರಾಜನಿದ್ದಾನೋ ಅವನೇ ಮುಂದೆವರೆಯುತ್ತಾನೆ ಎಂಬ ಭವಿಷ್ಯವನ್ನು ಮಲ್ಲಿಕಾರ್ಜುನ ಗೊಬ್ಬಿ ಅವರು ಯುಗಾದಿ ಫಲ ಭವಿಷ್ಯದಲ್ಲಿ ನುಡಿದರು. ಯುಗಾದಿ ಫಲ ಭವಿಷ್ಯದ ಕೇಳಿದ ಅದೇಷ್ಟೋ ಜನರು ಈ ಬಾರಿ ಮತ್ತೆ ಮೋದಿ ಅವರು ಅಧಿಕಾರಕ್ಕೆ ಬರಲಿದ್ದಾರೆ ಎಂಬ ಮಾತುಗಳನ್ನಾಡಿದರು.

Advertisement

ಪಟ್ಟಣದ ಬಗೀಚ್‌ನಲ್ಲಿ ಇಲ್ಯಾಳ ಮ್ಯಾಳದವರು ಪ್ರತಿ ವರ್ಷ ಯುಗಾದಿ ಹಬ್ಬದ ನಿಮಿತ್ತ ನಡೆಸಿಕೊಂಡು ಬಂದಿರುವ ಯುಗಾದಿ ಫಲ ಭವಿಷ್ಯದಲ್ಲಿ ಭವಿಷ್ಯ ನುಡಿದು, ದೇಶದಲ್ಲಿ ಈ ವರ್ಷ ಹೆಸರು ಬಿಳಿಜೋಳ, ಕಡಲೆ, ಗೋಧಿ ಬಂಪರ್ ಬೆಳೆ ಇದೆ. ತೊಗರಿ ಸಜ್ಜೆಗೆ ಕೀಟ ಭಾದೆ ಕಾಡಲಿದೆ. ಅಲ್ಲದೇ ಎಳ್ಳು ಅತ್ಯುತ್ತಮವಾಗಿ ಬೆಳೆಯಲಿದ್ದು, ಗುಳೇದಗುಡ್ಡ ಖಣ, ಇಲಕಲ್ ಸೀರೆಯ ವ್ಯಾಪಾರ ವಹಿವಾಟು ಕುಂಠಿತ ಕಾಣಲಿದೆ. ಅಲ್ಲದೇ ಬಟ್ಟೆ ವ್ಯಾಪಾರದಲ್ಲಿ ಈ ಭಾರಿ ಗಣನೀಯ ಏರಿಕೆ ಕಾಣಲಿದ್ದು, ಬಟ್ಟೆ ವ್ಯಾಪಾರಿ ಶೆಟ್ಟಿಯು ವ್ಯಾಪಾರದಲ್ಲಿ ಭರಪೂರವಾಗಿ ತೊಡಗಿರುತ್ತಾನೆ. ಸಿಮೆಂಟ್, ಕಬ್ಬಿಣ, ಉಸುಕು ವ್ಯಾಪಾರ ಜೋರಾಗಲಿದೆ ಎಂದರು.

ಈ ಭಾರಿ ಭರಣಿ,ಆರಿದ್ರಾ, ಪುನರ್ವಸು, ಮಾಘ, ಹುಬ್ಬಾ, ಚಿತ್ತಿ ಮಳೆಗಳು ಸಂಪೂರ್ಣವಾಗಿದ್ದು, ರಾಜ್ಯ, ದೇಶದಲ್ಲಿ ಮಳೆರಾಯ ಕಣ್ತೆರೆಯಲಿದ್ದಾನೆ. ಜನರಿಗೆ ನೀರಿನ ಬವಣೆ ತಪ್ಪಲಿದ್ದು, ಹಳಸಂದಿ, ನವಣಿ ಸೇರಿದಂತೆ ಇನ್ನಿತರ ಬೆಳೆಗಳು ಉತ್ತಮವಾಗಿ ಬರಲಿವೆ ಎಂದು ಯುಗಾಧಿ ಫಲ ಭವಿಷ್ಯದಲ್ಲಿ ಭವಿಷ್ಯ ನುಡಿಯಲಾಯಿತು. ಸುಮಾರು ನೂರು ವರ್ಷಗಳಿಂದ ಪಟ್ಟಣದ ಇಲಾಳ ಮ್ಯಾಳದವರು ಯುಗಾದಿ ಫಲ ಭವಿಷ್ಯ ಹೇಳುತ್ತ ಬಂದಿದ್ದು, ಜನರು ಫಲ ಭವಿಷ್ಯ ಕೇಳಲು ತಂಡೋಪ ತಂಡವಾಗಿ ಆಗಮಿಸುತ್ತಾರೆ.

ಈ ಸಂದರ್ಭದಲ್ಲಿ ಮ್ಯಾಳದ ಮಲ್ಲಿಕಾರ್ಜುನ ಗೊಬ್ಬಿ, ನಾಗಪ್ಪ ಚಿಂದಿ, ಪ್ರಶಾಂತ ರಂಜಣಗಿ, ಶಂಕರ ರಂಜಣಗಿ, ಮಲ್ಲೇಶಪ್ಪ ಶೀಪ್ರಿ, ಶಿವು ಹುಣಸಿಮರದ, ಈರಣ್ಣ ರಂಜಣಗಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next