Advertisement

ಉತ್ತರಪ್ರದೇಶ: ಅಪಘಾತಕ್ಕೀಡಾದ 100 ಜನ ಪ್ರಯಾಣಿಕರಿದ್ದ ಬಸ್; 14 ಜನರಿಗೆ ಗಾಯ

08:05 PM Mar 18, 2021 | Team Udayavani |

ಉತ್ತರಪ್ರದೇಶ: ಬರೊಬ್ಬರಿ 100 ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ಸೊಂದು ಆಗ್ರಾದ ಬಳಿ ಇರುವ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಉರುಳಿಬಿದ್ದು ಅಪಘಾತಕ್ಕೀಡಾದ ಪರಿಣಾಮ 14 ಜನ ಪ್ರಯಾಣಿಕರಿಗೆ ಗಾಯಗಳಾದ  ಘಟನೆ ನಡೆದಿದೆ.

Advertisement

ಗ್ರೇಟರ್ ನೋಯ್ಡಾ ಮತ್ತು ಆಗ್ರಾದ ನಡುವಿನ ಸಂಪರ್ಕ ಸೇತುವೆಯಂತಿರುವ ರಸ್ತೆ ಇದಾಗಿದ್ದು, ಅಪಘಾತ ನಡೆದ ತಕ್ಷಣ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Agra: A private bus carrying around 100 passengers overturns on Yamuna Expressway in Khandauli area. “14 passengers sustained injuries and were rushed to a hospital,” says Archana Singh, Circle Officer, Etmadpur. pic.twitter.com/1g40W107f3

— ANI UP (@ANINewsUP)

Advertisement

ಇದನ್ನೂ ಓದಿ:“ಬಿಳಿಯರ ಪ್ರಾಬಲ್ಯವು ಅಕ್ಷರಶಃ ನಮ್ಮನ್ನು ಕೊಲ್ಲುತ್ತಿದೆ” : ಸ್ಟೆಫನಿ ಚೋ ಆಕ್ರೋಶ

ಈ ಕುರಿತಾಗಿ ಮಾಹಿತಿ ನೀಡಿರುವ ಎಟ್ಮಾಡುಪುರದ ಪೊಲೀಸ್ ಅಧಿಕಾರಿಗಳು, ಖಾಸಗಿ ಬಸ್ಸೊಂದು 100 ಜನರ ಪ್ರಯಾಣಿಕರನ್ನು ತುಂಬಿಸಿಕೊಂಡು ಖಂಡೌಲಿ ಪ್ರದೇಶದಲ್ಲಿರುವ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಪ್ರಯಾಣ ಬೆಳೆಸುವ ವೇಳೆ ರಸ್ತೆಯ ಬದಿ ಉರುಳಿದ ಪರಿಣಾಮ ಅಪಘಾತಕ್ಕೆ ಈಡಾಗಿದೆ. ಇದರಿಂದ ಬಸ್ಸಿನಲ್ಲಿದ್ದ 100 ಜನರಲ್ಲಿ 14 ಜನರಿಗೆ ಗಾಯಗಳಾಗಿದ್ದು, ಎಲ್ಲಾ ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:OYO ಭಾರತದ ವ್ಯವಹಾರವು ಈಗ EBITDA ಸಕಾರಾತ್ಮಕವಾಗಿದೆ : ರಿತೇಶ್ ಅಗರ್ವಾಲ್

Advertisement

Udayavani is now on Telegram. Click here to join our channel and stay updated with the latest news.

Next