Advertisement

PM ಮೋದಿಯವರೊಂದಿಗೆ ಕೃಷಿ ಸಂವಾದಕ್ಕೆ ಯಲ್ಲಾಪುರದ ಲತಾ ಹೆಗಡೆ ಆಯ್ಕೆ

01:05 AM Jun 16, 2024 | Team Udayavani |

ಯಲ್ಲಾಪುರ : ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ ಇವರುಗಳ ಸಹಯೋಗದಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜೂ. 18 ರಂದು ಪ್ರಧಾನ ಮಂತ್ರಿಯವರೊಂದಿಗೆ ನೈಸರ್ಗಿಕ ಕೃಷಿ ವಿಷಯದ ಕುರಿತು ಸಂವಾದ ನಡೆಸಲು ಯಲ್ಲಾಪುರ ತಾಲೂಕಿನ ಜಂಬೇಸಾಲ ಗ್ರಾಮದ ಲತಾ ರಾಜೀವ ಹೆಗಡೆ ಯವರು ಆಯ್ಕೆಯಾಗಿದ್ದಾರೆ.

Advertisement

ನೈಸರ್ಗಿಕ ಕೃಷಿ ತರಬೇತಿ ಪಡೆದ ಕೃಷಿ ಸಖಿಯರಿಗೆ ಈ ಅವಕಾಶ ಕಲ್ಪಿಸಲಾಗಿದ್ದು ಕರ್ನಾಟಕ ರಾಜ್ಯದಿಂದ ಇಬ್ಬರು ಕೃಷಿ ಸಖಿಯರನ್ನು ಸಂವಾದಕ್ಕೆ ಆಯ್ಕೆ ಮಾಡಲಾಗಿದೆ. ಲತಾ ರಾಜೀವ ಹೆಗಡೆಯವರು ತಮ್ಮ ಪತಿಯೊಂದಿಗೆ ನೈಸರ್ಗಿಕ ಪುಷ್ಪಕೃಷಿ, ಪಶು ಆಹಾರ ತಯಾರಿಕೆ, ಹೈನುಗಾರಿಕೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದು ತಾಲೂಕಿನ ಚಂದ್ಗುಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೃಷಿ ಸಖಿಯಾಗಿ ಗ್ರಾಮೀಣ ಪ್ರದೇಶದ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆಗೆ ಸಂವಾದ ನಡೆಸಲು ರಾಜ್ಯದ ಪ್ರತಿನಿಧಿಯಾಗಿ ಅವಕಾಶ ದೊರಕಿರುವ ಕುರಿತು ಲತಾ ಹೆಗಡೆ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next