Advertisement

ಯಲ್ಲಾಪುರ : 108 ಅಂಬ್ಯುಲೆನ್ಸ್ ನಲ್ಲಿ ಅವಳಿ ಮಕ್ಕಳ ಜನನ

09:13 PM Jan 17, 2022 | Team Udayavani |

ಯಲ್ಲಾಪುರ : ಹೆರಿಗೆಗೆಂದು ಆಸ್ಪತ್ರೆಗೆ ಕರೆತರುತ್ತಿರುವ ವೇಳೆ ಮಹಿಳೆಯೊರ್ವಳು 108 ಅಂಬ್ಯುಲೆನ್ಸ್ ನಲ್ಲಿಯೇ ಅವಳಿ ಮಕ್ಕಳನ್ನು ಹೆತ್ತಿದ್ದಾಳೆ.

Advertisement

ಯಲ್ಲಾಪುರ ತಾಲೂಕಿನ ಕರಡೊಳ್ಳಿಯ ಸುಮಿತ್ರಾ ಶಿಂಧೆ ಎಂಬವರು ಮೂರನೇ ಹೇರಿಗೆಗೆಂದು ಆಸ್ಪತ್ರೆಗೆ 108 ವಾಹನದಲ್ಲಿ ಕರೆತರುತ್ತಿರುವ ವೇಳೆ ಹೆರಿಗೆಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.

ಅಂಬ್ಯಲೆನ್ಸ್ ಚಾಲಕ ಅನಿಲ್ ನಾಯ್ಕ,ತಂತ್ರಜ್ಞ ಶಿವಕುಮಾರ ಇಟಗಿ ಸುರಕ್ಷಿತ ಹೆರಿಗೆ ಮಾಡಿಸಿದರು.ಹೆಣ್ಣು ಹಾಗೂ ಗಂಡು ಮಗುವನ್ನು ಹೆತ್ತಿದ್ದು ಮಕ್ಕಳ ತೂಕದ ಪ್ರಮಾಣ ಕಡಿಮೆ ಇರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next