ಯಲ್ಲಾಪುರ: ಕಳೆದ ಮಳೆಗಾಲದ ಮಹಾಪುರ ಏನೆಲ್ಲಾ ಹಾನಿ ಮಾಡಿದೆ ಎಂಬುದು ಈಗಾಗಲೇ ಗೋಚರಿಸಿದೆ. ಎಷ್ಟೋ ಹಾನಿಯಾದ ರಸ್ತೆಗಳಿಗೆ ಈಗಾಗಲೇ ತೇಪೆ ಹಚ್ಚಲಾಗಿದೆ. ಸರಕಾರದ ಒಂದಿಷ್ಟು ಹಣ ಖರ್ಚು ಕಾಣಿಸಿ ಹೇಗೋ ಏನೆಲ್ಲಾ ಕಸರತ್ತು ಮಾಡಿದ್ದಾರೆ.
Advertisement
ಶಿರಸಿ ಯಲ್ಲಾಪುರ ರಾಜ್ಯ ಹೆದ್ದಾರಿಯ ಬೇಡ್ತಿ ಹಳೆ ಸೇತುವೆ ದುರಸ್ತಿಗೇ ಅವಕಾಶವಿಲ್ಲ ಎಂದ ಇಲಾಖೆ ಮಳೆಗಾಲದಲ್ಲಿ ಹಾನಿಯಾದಾಗ ಲಕ್ಷಾಂತರ ರೂ.ಗಳನ್ನು ಹಳೆ ಸೇತುವೆಗೆ ವ್ಯಯಿಸಿದ ಸಂಗತಿ ನಮ್ಮ ಕಣ್ಮುಂದೆ ಇದೆ. ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆಗೆ ಇದಕ್ಕೂ ಪೂರ್ವದಲ್ಲಿ ವ್ಯಯಿಸಿದ್ದರೆ ಹಳೆ ಸೇತುವೆಗೆ ತೇಪೆ ಹಚ್ಚಿ ಸರಕಾರದ ಹಣ ಪೋಲು ಮಾಡುವ ಪ್ರಸಂಗ ಬರುತ್ತಿರಲಿಲ್ಲ. ಇಂತಹುದು ಒಂದು ಕಡೆಯಾದರೆ ಕನಿಷ್ಠ ಸಾವಿರಾರು ರೂ. ವ್ಯಯಿಸಿ ಮುಂದಾಗುವ ಅಪಘಾತ ಪ್ರಾಣಹಾನಿ ತಡೆಯುವಂತಹ ಸಾಮಾನ್ಯ ಕೆಲಸಕ್ಕೇಕೆ ಇಲಾಖೆಗಳು ಮುಂದಾಗುತ್ತಿಲ್ಲ? ಜನಪ್ರತಿನಿಧಿಗಳಿಗೇಕೆ ಕಾಣುತ್ತಿಲ್ಲ ಎಂಬುದು ಗುಳ್ಳಾಪುರದ ಸೇತುವೆಯ ಸ್ಥಿತಿ ನೋಡಿದಾಗ ಖೇದವಾಗುತ್ತದೆ.
ಸೇತುವೆ ಮೆಲೆ ಜಿಲ್ಲಾಧಿಕಾರಿಗಳು, ಶಾಸಕರು, ಸಂಸದರು ಇನ್ನು ಸ್ಥಳೀಯ ಜನಪ್ರತಿನಿಧಿಗಳು ಸಂಚರಿಸಿದ್ದಾರೆ. ಕೋಟಿ, ಲಕ್ಷ ರೂ. ನೆರೆ ಪರಿಹಾರದ ಬಗ್ಗೆ ಮಾತನಾಡುವವರು ಇಂತಹ ಅಪಾಯದ ಎಲ್ಲೋ ಸಾವಿರಾರು ರೂ ಖರ್ಚು ಮಾಡಿ ಮುಂದಾಗುವ ಅಪಾಯವನ್ನು ತಾತ್ಕಾಲಿಕವಾಗಿ ತಪ್ಪಿಸುವಷ್ಟು ಕೆಲಸಮಾಡಿ ಅವಘಡ ತಪ್ಪಿಸುವ ಶಕ್ತಿ ಸಂಬಂಧಪಟ್ಟ ಇಲಾಖೆಗಳಿಗಿಲ್ಲ ಎನ್ನುವುದು ದುರ್ದೈವದ ಸಂಗತಿ.
Related Articles
Advertisement
1996 ರಲ್ಲಿ ದೇಶಪಾಂಡೆಯವರು ಸಚಿವರಿದ್ದಾಗ ಉದ್ಘಾಟನೆಯಾದ ಸೇತುವೆಯಾಗಿದ್ದು ಆ ಬಳಿಕ ಈ ಸೇತುವೆ ಸಾಮಾನ್ಯ ದುರಸ್ತಿ ಬದಿಗಿರಲಿ ಕನಿಷ್ಠ ಅಪರೂಪಕ್ಕೆ ಸುಣ್ಣ ಬಣ್ಣವನ್ನೂ ಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ನಿರ್ಮಿಸಿದೆ ಎನ್ನಲಾದ ಈ ಸೇತುವೆ ಆದ ಬಳಿಕ ಈ ಇಲಾಖೆ ಕಣ್ಣೆತ್ತಿಯೂ ನೋಡಿಲ್ಲ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಈ ಸೇತುವೆ ನಿರ್ಮಿಸಿ ಬಳಿಕ ಇತ್ತ ನೋಡಿಲ್ಲ. ವಾಲ್ ಪ್ಲೇಟ್‌ಗಳು ಸರಿಯಿಲ್ಲ. ಈಗ ರೇಲ್‌ಗಳು ತುಂಡಾಗಿ ಬಿದ್ದಿದೆ. ಸಾವು ನೋವು ಸಂಭವಿಸಬಹುದು. ಕನಿಷ್ಠ ಅಪಾಯತಪ್ಪಿಸಬಹುದಾದ ಕ್ರಮವನ್ನೂ ತೆಗೆದುಕೊಂಡಿಲ್ಲ. ಈ ಬಗ್ಗೆ ನಾನೇ ನಾಲ್ಕಾರು ಬಾರಿ ಇಲಾಖೆ ಗಮನಕ್ಕೆ ತಂದಿದ್ದೇನೆ. ಪ್ರಯೋಜನವಾಗಿಲ್ಲ.. ವೆಂಕಣ್ಣ ವೈದ್ಯ,
ಸಾಮಾಜಿಕ ಹೋರಾಟಗಾರರು