Advertisement

ಯಲ್ಲಮ್ಮ ದೇವಿ ಕರಗ ಮಹೋತ್ಸವ

12:07 PM Apr 09, 2018 | |

ಕೆಂಗೇರಿ: ಕೆಂಗೇರಿಯ ಶ್ರೀ ಯಲ್ಲಮ್ಮ ದೇವಿಯ 44ನೇ ವರ್ಷದ ಕರಗ ಮಹೋತ್ಸವ, ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನಜಾವದವರೆಗೆ ಸಾಂಗವಾಗಿ ನೆರವೇರಿತು. ವಹಿ°ಕುಲ ಕ್ಷತ್ರಿಯರ ಆರಾಧ್ಯ ದೈವವಾಗಿರುವ ಶ್ರೀ ಯಲ್ಲಮ್ಮ ದೇವಿಯ ಕರಗವನ್ನು ಇದೇ ಮೊದಲ ಬಾರಿ ಹೊತ್ತಿದ್ದ ವೈ.ಮುನಿ ಆಂಜಿನಪ್ಪ, ಕೆಂಗೇರಿಯ ಪ್ರಮುಖ ಬೀದಿಗಳಲ್ಲಿ ಸಾಗಿ, ಸಾರ್ವಜನಿಕರಿಂದ ಪೂಜೆ ಸ್ವೀಕರಿಸಿದರು.

Advertisement

ಮನೆಗಳ ಮುಂದೆ ರಂಗೋಲಿ ಹಾಕಿ ಕರಗ ಸ್ವಾಗತಿಸಿದ ಸ್ಥಳೀಯರು, ಕರಗದ ಮೇಲೆ ಮಲ್ಲಿಗೆ ಹೂವು ಸಮರ್ಪಿಸುವ ಮೂಲಕ ಭಕ್ತಿ ಪ್ರದರ್ಶಿಸಿದರು. ಕರಗ ಮಹೋತ್ಸವದ ಮುನ್ನಾ ದಿನ ನೂರಾರು ಮಹಿಳೆಯರು ಲಲಿತಾ ಸಹಸ್ರ ನಾಮ, ಕುಂಕುಮಾರ್ಚನೆ ಸಹಿತ ಯಲ್ಲಮ್ಮ ದೇವಿಗೆ ಪೂಜೆ ಸಲ್ಲಿಸಿದರು.

ಕರಗದ ದಿನ ಸುತ್ತಲ ನಾನಾ ಗ್ರಾಮಗಳಲ್ಲಿ ಗ್ರಾಮ ದೇವತೆಗಳ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಸಿ, ನಂತರ ಪಲ್ಲಕ್ಕಿಗಳನ್ನು ಕೆಂಗೇರಿಗೆ ತರಲಾಗಿತ್ತು. ಇದೇ ವೇಳೆ ಜಾನಪದ ಕಲಾ ತಂಡಗಳ ಆಕಷ‌ìಕ ಮೆರವಣಿಗೆ ಕೂಡ ನಡೆಯಿತು. ಯಲ್ಲಮ್ಮ ದೇವಿ ಕರಗ ಶಕ್ತಿ ಉತ್ಸವ ಆಡಳಿತ ಮಂಡಳಿಯ ಎಂ.ಶಾಂತರಾಜು, ವೈ.ಕೃಷ್ಣ, ಜಿ.ರಮೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next