Advertisement
ಸರ್ಕಾರ ಪ್ರತಿ ಕ್ವಿಂಟಲ್ ಸಾಮಾನ್ಯ ಭತ್ತಕ್ಕೆ ರೂ. 1940, ಗ್ರೇಡ್ ಎ ಭತ್ತಕ್ಕೆ 1960 ರೂ. ಬೆಂಬಲ ಬೆಲೆ ನಿಗದಿ ಪಡಿಸಿದೆ. ಆದರೆ, ರೈತರ ಜಮೀನುಗಳಿಗೆ ವರ್ತಕರು ಖುದ್ದಾಗಿ ಬಂದು ಹೆಚ್ಚು ಕಡಿಮೆ ಇದೇ ಬೆಲೆಗೆ ಭತ್ತ ಖರೀದಿಸುತ್ತಾರೆ. ಇದರಿಂದ ಸಾಗಣೆ ವೆಚ್ಚ ಸೇರಿದಂತೆ ಮತ್ತಿತರ ಅನಗತ್ಯ ಖರ್ಚುಗಳು ಉಳಿತಾಯವಾಗಲಿದೆ. ನಮ್ಮ ಮನೆ ಬಾಗಿಲಿನಲ್ಲೇ ಇದೇ ದರ ಸಿಗುತ್ತಿರುವಾಗಖರೀದಿ ಕೇಂದ್ರಕ್ಕೆ ಏಕೆ ಭತ್ತ ನೀಡಬೇಕು ಎಂಬುದು ರೈತರ ಪ್ರಶ್ನೆಯಾಗಿದೆ. ಹೀಗಾಗಿ ಜಿಲ್ಲೆಯ ರೈತರು ಬೆಂಬಲ ಬೆಲೆ ಯೋಜನೆಗೆ ನೋಂದಣಿಯಾಗುತ್ತಿಲ್ಲ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯನ್ನು ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದೆ. ಪ್ರತಿ ಕ್ವಿಂಟಲ್ ಸಾಮಾನ್ಯ ಭತ್ತಕ್ಕೆ ರೂ. 1940, ಗ್ರೇಡ್ ಎ ಭತ್ತಕ್ಕೆ 1960 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಷರತ್ತುಗಳಿಂದ ರೈತರು ಹಿಂದೇಟು : ಸರ್ಕಾರ ವಿಧಿಸಿರುವ ನಿಯಮಗಳಿಗೆ ಬೇಸತ್ತು ರೈತರು ಭತ್ತ ಖರೀದಿ ಕೇಂದ್ರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಭತ್ತ ಖರೀದಿಗೆ ನಿಗದಿಪಡಿಸಿದ ಗುಣಮಟ್ಟ, ಕೃಷಿ ಇಲಾಖೆ ಪೂ›ಟ್ಸ್‌ಐಡಿ ಅಧಿಕಾರಿಗಳಿಂದ ಗುಣಮಟ್ಟ ಪರಿಶೀಲನೆ, ರೈತರು ಸ್ವಂತ ಖರ್ಚಿನಲ್ಲಿ ನಿಗದಿಪಡಿಸಿದ ಅಕ್ಕಿ ಗಿರಣಿಗೆ ಭತ್ತವನ್ನು ಪೂರೈಸುವುದು ಸೇರಿದಂತೆ ಇತರೆ ನಿಯಮಗಳಿಂದ ರೈತರು ಹಿಂದೇಟು ಹಾಕುತ್ತಿದ್ದಾರೆ.
Related Articles
ನೋಂದಣಿಗೆ ಮುಂದಾಗುತ್ತಿಲ್ಲ.
Advertisement
ರೈತರ ಮನೆ ಬಾಗಿಲಿನಲ್ಲೇ ಕ್ಯಾಶ್ ಆ್ಯಂಡ್ ಕ್ಯಾರಿರೈತರು ಇದೀಗ ಭತ್ತ ಕೊಯ್ಲು ಮಾಡಿ ಒಕ್ಕಣಿ ಮಾಡಿ ಭತ್ತ ಶೇಖರಿಸುತ್ತಿದ್ದಾರೆ. ವರ್ತಕರು ಮನೆ ಬಾಗಿಲಿಗೇ ಬಂದು ಕ್ವಿಂಟಲ್‌ಗೆ 1,900 ರೂ. ನೀಡಿ ಸ್ಥಳದಲ್ಲೇ ಹಣ ಪಾವತಿಸುತ್ತಾರೆ. ಗುಣಮಟ್ಟ ಪರಿಶೀಲನೆ ಮತ್ತಿತರ ನಿಯಮಗಳ ಕಟ್ಟುಪಾಡು ಇಲ್ಲ. ಹೀಗಾಗಿ ಮನೆಯಲ್ಲೇ ಭತ್ತ ಮಾರುವುದೇ ಲೇಸು ಎಂಬುದು ರೈತರ ನಿಲುವು. ಭತ್ತ ಖರೀದಿ ಕೇಂದ್ರಕ್ಕೆ ಭತ್ತವನ್ನು ಕೊಂಡೊಯ್ದರೆ ಸಾಗಣೆ ವೆಚ್ಚವನ್ನೂ ಭರಿಸಬೇಕಿದೆ. ಜೊತೆಗೆ ಗುಣಮಟ್ಟ ಪರಿಶೀಲನೆ, ತೇವಾಂಶ ಅದು ಇದು ಸೇರಿದಂತೆ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಜೊತೆಗೆ ಹಣ ಪಡೆಯಲು ತಿಂಗಳುಗಟ್ಟಲೇ ಕಾಯಬೇಕಾಗುತ್ತದೆ. ಹೀಗಾಗಿ ನಾವು ಏಕೆ ಭತ್ತ ಖರೀದಿ ಕೇಂದ್ರಕ್ಕೆ ಭತ್ತ ಮಾರಬೇಕು ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಭತ್ತ ಖರೀದಿಗೆ ಕೇಂದ್ರ ತೆರೆದರೂ
ರೈತರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ – ಫೈರೋಜ್ ಖಾನ್