Advertisement
11 ಸದಸ್ಯ ಬಲದ ಪಟ್ಟಣ ಪಂಚಾಯಿತಿಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 10 ಸ್ಥಾನ ಹಾಗೂ ಬಿಜೆಪಿ ಒಂದು ಸ್ಥಾನ ಪಡೆದಿತ್ತು. ಪಪಂನಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇದೆ. ಈ ಬಾರಿ ಅಧ್ಯಕ್ಷ ಸ್ಥಾನವು ಸಾಮಾನ್ಯ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನವು ಬಿಸಿಎ ಮಹಿಳೆಗೆ ಮೀಸಲಾಗಿದೆ. 11 ಸದಸ್ಯರಲ್ಲಿ ಐವರು ಮಹಿಳಾ ಸದಸ್ಯರಿದ್ದು,ಈಪೈಕಿ ನಾಲ್ವರು ಕಾಂಗ್ರೆಸ್ ಹಾಗೂ ಒಬ್ಬರು ಬಿಜೆಪಿಯವರಾಗಿದ್ದಾರೆ.
Related Articles
Advertisement
ಯಾರಿಗೆ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ಥಾನ? : ಪಪಂಅಧ್ಯಕ್ಷೆಸ್ಥಾನಕ್ಕೆಪ್ರಭಾವತಿ, ಸುಶೀಲಾ,ಲಕ್ಷ್ಮೀ,ಶಾಂತಮ್ಮಆಕಾಂಕ್ಷಿಗಳಾಗಿದ್ದು, ಈ ನಾಲ್ವರು ಸದಸ್ಯರಲ್ಲಿಅಧಿಕಾರದಹಂಚಿಕೆ ಸೂತ್ರಕ್ಕೂಅವಕಾಶವಿದೆ. ಉಪಾಧ್ಯಕ್ಷೆ ಸ್ಥಾನಕ್ಕೆ ಇಬ್ಬರ ಮಧ್ಯೆ ಪೈಪೋಟಿ ಇರುವುದರಿಂದ ಇದರಲ್ಲೂ ಅಧಿಕಾರಹಂಚಿಕೊಳ್ಳಬಹುದಾಗಿದೆ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಆಗಿರುವ ಮಾಜಿ ಸಂಸದ ಆರ್. ಧ್ರುವನಾರಾಯಣ್, ಶಾಸಕ ಸಿ.ಪುಟ್ಟರಂಗಶೆಟ್ಟಿ, ಮಾಜಿಶಾಸಕರಾದ ಎಸ್. ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜುಸೇರಿದಂತೆ ಪಕ್ಷದ ಸ್ಥಳೀಯ ನಾಯಕರ ಕೃಪಾ ಕಟಾಕ್ಷಕ್ಕಾಗಿ ಆಕಾಂಕ್ಷಿಗಳು ಕಾಯುತ್ತಿದ್ದು, ಯಾರಿಗೆ ಗದ್ದುಗೆ ಒಲಿಯುತ್ತದೆಯೋಕಾದು ನೋಡಬೇಕಿದೆ.
-ಫೈರೋಜ್ ಖಾನ್