Advertisement

ಸೇವಾಲಾಲ್‌ ಆದರ್ಶ ಅಳವಡಿಸಿಕೊಳ್ಳಿ

03:35 PM Feb 16, 2020 | Naveen |

ಯಲಬುರ್ಗಾ: ಸಂತ ಶ್ರೀ ಸೇವಾಲಾಲ್‌ ಮಹಾರಾಜರ ತತ್ವಾದರ್ಶಗಳು ನಮ್ಮ ನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿವೆ. ಅವುಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಬಂಗಾರ ಮಾಡಿಕೊಳ್ಳಬೇಕಾಗಿದೆ ಎಂದು ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಚಿಕ್ಕಬನ್ನಿಗೋಳ ಹೇಳಿದರು.

Advertisement

ಪಟ್ಟಣದಲ್ಲಿ ಸೇವಾಲಾಲ್‌ ಜಯಂತಿ ನಿಮಿತ್ತ ಶನಿವಾರ ಮಾರನಾಳ ರಸ್ತೆಯಲ್ಲಿರುವ ಸೇವಾಲಾಲ್‌ ವೃತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಎಷ್ಟೇ ಕಷ್ಟ ಬಂದರೂ ಮಕ್ಕಳನ್ನು ವಿದ್ಯೆಯಿಂದ ವಂಚನೆ ಮಾಡದೇ ಅವರಿಗೆ ಶಿಕ್ಷಣ ನೀಡುವ ಮೂಲಕ ಅವರನ್ನೇ ಆಸ್ತಿಯನ್ನಾಗಿಸಿಕೊಳ್ಳಬೇಕು. ಸರಕಾರ ನಾನಾ ಸೌಲಭ್ಯ, ಸವಲತ್ತು ಪಡೆದು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ಸರಕಾರ ವತಿಯಿಂದ ಸೇವಾಲಾಲ್‌ ಜಯಂತಿ ಆಚರಿಸಲಾಗುತ್ತಿದೆ. ಕಲಿಯಬೇಕು, ಕಲಿತದ್ದನ್ನು ಇತರರಿಗೂ ಕಲಿಸಿ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸಿ ಉದ್ಧರಿಸಬೇಕು ಎಂಬ ಸಂತ ಶ್ರೀ ಸೇವಾಲಾಲ್‌ ಅವರ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಬಂಜಾರ ರಕ್ಷಣಾ ವೇದಿಕೆ ಅಧ್ಯಕ್ಷ ಪರಶುರಾಮ ನಾಯಕ ಮಾತನಾಡಿ, ಲಂಬಾಣಿ ಸಮಾಜದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಯುವ ಜನತೆ ಸಂಘಟಿತರಾಗಬೇಕು ಎಂದರು. ಸಂತ ಸೇವಾಲಾಲ್‌ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಸಂತ ಸೇವಾಲಾಲ್‌ ಕುದುರೆ ಸವಾರಿ ಮಾಡುತ್ತಿದ್ದರು. ಸಂತ ಸೇವಾಲಾಲ್‌ ಧಾರ್ಮಿಕ ಸಂದೇಶ ಸಮಾಜ ಸುಧಾರಣೆಯ ತಿರುಳಾಗಿತ್ತು. ಇದರಿಂದಾಗಿಯೇ ಅವರನ್ನು ಲಂಬಾಣಿ ಸಮುದಾಯಕ್ಕೆ ಸೀಮಿತಗೊಳಿಸಬಾರದು ಸರ್ವರು ಸೇವಾಲಾಲ ಅವರನ್ನು ಆದರ್ಶವಾಗಿಟ್ಟುಕೊಳ್ಳಬೇಕಿದೆ ಎಂದರು. ಯಲ್ಲಪ್ಪ ನಾಯಕ, ಅಚ್ಚಪ್ಪ ನಾಯಕ, ಶಂಕರ ನಾಯಕ, ಹನುಮಂತ ರಾಠೊಡ, ತುಕರಾಂ, ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next