ಯಲಬುರ್ಗಾ: ಕೊವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ಇಡೀ ದೇಶವನ್ನೇ ಲಾಕಡೌನ್ ಮಾಡಲಾಗಿದೆ. ಈ ಮಧ್ಯೆ ತಿನ್ನಲು ಆಹಾರ ಸಿಗದೇ ಅದೆಷ್ಟೋ ಮೂಕ ಪ್ರಾಣಿಗಳು ಬಳಲುತ್ತಿವೆ. ಹೀಗೆ ಹಸಿವಿನಿಂದ ರೋದಿಸುತ್ತಿದ್ದ ಕೋತಿಗಳಿಗೆ ಯಲಬುರ್ಗಾ ಪೋಲಿಸ್ ಠಾಣೆಯ ಸಿಪಿಐ ಎಂ.ನಾಗರಡ್ಡಿ ಆಹಾರ, ಬ್ರೆಡ್, ರೊಟ್ಟಿ, ಹಣ್ಣು, ನೀಡಿ ಮಾನವೀಯತೆ ಮೆರೆದಿದ್ದಾರೆ.
ಕೋವಿಡ್-19 ಪ್ರತಿಕೂಲ ಪರಿಣಾಮ ಬರೀ ಮನುಷ್ಯರಿಗಷ್ಟೇ ಅಲ್ಲದೇ ಇದೀಗ ಪ್ರಾಣಿಗಳಿಗೂ ತಟ್ಟುತ್ತಿದೆ. ತಾಲೂಕಿನ ಕೊಪ್ಪಳ-ಬೇವೂರು ಮಾರ್ಗ ಮಧ್ಯ ನೀಲಗಿರಿ, ಬೇವಿನಗಿಡದಲ್ಲಿ ನೂರಾರು ಕೋತಿಗಳು ಇವೆ. ಆ ಕೋತಿಗಳು ಆಹಾರವಿಲ್ಲದೇ ಪರದಾಡುವದನ್ನು ಗಮನಿಸಿದ ಯಲಬುರ್ಗಾ ಸಿಪಿಐ ಎಂ.ನಾಗರಡ್ಡಿ ಅವರು ಆಹಾರ, ಹಣ್ಣುಗಳನ್ನು ಸ್ವತ: ತಾವೇ ತಿನ್ನಿಸಿದ್ದಾರೆ. ಇದಕ್ಕೆ ಬೇವೂರು ಪಿಎಸ್‌ಐ ಶಂಕರ ನಾಯಕ ಹಾಗೂ ಪೋಲಿಸ ಸಿಬ್ಬಂದಿಗಳು ಕೈ ಜೋಡಿಸುತ್ತಿದ್ದಾರೆ. ಪೋಲಿಸರ ಕಾರ್ಯಕ್ಕೆ ವ್ಯಾಪಕ ಶ್ಲಾಘನೀಯ ವ್ಯಕ್ತವಾಗಿದೆ.
ಸಾರ್ವಜನಿಕರಿಂದ ಶ್ಲಾಘನೆ: ಯಲಬುರ್ಗಾ ಸಿಪಿಐ ಎಂ.ನಾಗರಡ್ಡಿ ಅವರ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತವಾಗಿದೆ. ಇತ್ತಿಚೆಗೆ ಸಿಪಿಐ ಅವರು ಬಹಳಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ತಾಲೂಕಿನಾದ್ಯಂತ ಲಾಕಡೌನ ಅನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ. ನಿತ್ಯ ಕೊರೊನಾ ನಿಮಿತ್ಯ ತಾಲೂಕಿನಾದ್ಯಂತ ಜಾಗೃತಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈಚೆಗೆ ವೈರಸ್ ವಿರುದ್ದ ಕಿರುಚಿತ್ರವೊಂದನ್ನು ತಯಾರಿಸಿದ್ದಾರೆ. ಅದು ಮೇಲಾಧಿಕಾರಿಗಳಿಂದ ಹಾಗೂ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆಗೆ ವ್ಯಕ್ತವಾಗಿದೆ.
ಲಾಕಡೌನ್ ಹಿನ್ನೆಲೆ ಮಾರ್ಕೆಟ್ ಬಂದ್ ಆಗಿದೆ. ವ್ಯಾಪಾರಿಗಳು, ಪ್ರಯಾಣಿಕರು, ಜನತೆ ತಮ್ಮ ಬಳಿ ಉಳಿಯುತ್ತಿದ್ದ ತರಕಾರಿ ಅಥವಾ ಹಣ್ಣುಗಳನ್ನು ಸ್ಥಳದಲ್ಲಿ ಇರುತ್ತಿದ್ದ ಕೋತಿಗಳಿಗೆ ನೀಡುತ್ತಿದ್ದರು. ಹೀಗಾಗಿ ಸ್ಥಳದಲ್ಲಿದ್ದ ಕೋತಿಗಳ ಹೊಟ್ಟೆ ತುಂಬುತ್ತಿತ್ತು. ಆದರೆ ಬಂದ್ ಆಗಿರುವ ಹಿನ್ನಲೆಯಲ್ಲಿ ಕೋತಿಗಳಿಗೆ ಆಹಾರ ಸಿಗುತ್ತಿಲ್ಲ. ಹಸಿವಿನಿಂದ ಮೂಕ ಪ್ರಾಣಿಗಳು ರೋಧಿಸುತ್ತಿದ್ದ ದೃಶ್ಯವನ್ನು ಕಂಡು ಸಿಪಿಐ ಎಂ.ನಾಗರಡ್ಡಿ ಅವರು ಕೋತಿಗಳಿಗೆ ಹಣ್ಣು ತಿನ್ನಲು ನೀಡಿ ಅವುಗಳ ಹಸಿವು ನೀಗಿಸಿದ್ದಾರೆ. ಕೋತಿಗಳಿಗೆ ಕಲ್ಲಂಗಡಿ, ಬಾಳೆಹಣ್ಣು ಇತರೆ ಹಣ್ಣನ್ನು ನೀಡಿ ಹಸಿವು ನೀಗಿಸಿದ್ದಾರೆ. ಕೋತಿಗಳಿಗೆ ಆಹಾರ ನೀಡುವ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.