Advertisement

ಕಾಯಕ‌ತತ್ವ ಸಾರಿದ ಬಸವಾದಿ ಶರಣ

10:44 AM Jan 23, 2019 | |

ಯಲಬುರ್ಗಾ: ಒಂದು ದಡದಿಂದ ಇನ್ನೊಂದು ದಡಕ್ಕೆ ಜನರನ್ನು ಸುರಕ್ಷಿತವಾಗಿ ತಲುಪಿಸಿ ನಿಜ ಶರಣರಾಗಿ ಹೆಸರಾದ ಅಂಬಿಗರ ಚೌಡಯ್ಯನವರ ಆದರ್ಶಗಳು ಪ್ರಸ್ತುತವಾಗಿದ್ದು, ಅವರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಹಾಲಪ್ಪ ಆಚಾರ್‌ ಹೇಳಿದರು.

Advertisement

ಪಟ್ಟಣದ ಹಳೇ ಪಪಂ ಕಚೇರಿ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ ಹಾಗೂ ಗಂಗಾಮತಸ್ಥ ಸಮುದಾಯದ ಆಶ್ರಯದಲ್ಲಿ ಹಮ್ಮಿಕೊಂಡ ಶ್ರೀನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಚನ ಸಾಹಿತ್ಯ ಸರಳವಾಗಿದ್ದರೂ ಲೋಕದ ರೀತಿ, ಸಾಮಾಜಿಕ ನೀತಿಗಳನ್ನು ಹೇಳುವಾಗ ಚೌಡಯ್ಯನವರು ಬಂಡಾಯ ಮಾರ್ಗವನ್ನು ಅನುಸರಿಸಿದರು ಎನ್ನುವುದು ಅವರ ವಚನಗಳಿಂದ ಅರ್ಥವಾಗುತ್ತದೆ ಎಂದರು.

ಕಸಾಪ ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಮಾತನಾಡಿ, ಶ್ರಮ ಸಂಸ್ಕೃತಿಯಲ್ಲಿ ಅಪಾರ ವಿಶ್ವಾಸವುಳ್ಳ, ಕಾಯಕ ತತ್ವಕ್ಕೆ ಇಡೀ ಜೀವನವನ್ನೇ ಸಮರ್ಪಿಸಿಕೊಂಡ ಅಂಬಿಗರ ಚೌಡಯ್ಯ ಒಬ್ಬ ಶ್ರೇಷ್ಠ ವಚನಕಾರರಾಗಿದ್ದರು. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡ್ರ, ತಹಶೀಲ್ದಾರ್‌ ರಮೇಶ ಅಳವಂಡಿಕರ್‌, ಜಿಪಂ ಸದಸ್ಯೆ ಗಂಗಮ್ಮ ಗುಳಗಣ್ಣನವರ, ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಮುಖಂಡರಾದ ಬಸವಲಿಂಗಪ್ಪ ಭೂತೆ, ಯಮನಪ್ಪ ಸುಣಗಾರ, ಶರಣಪ್ಪ ಜಾಲಗಾರ, ಈರಣ್ಣ ಹುಬ್ಬಳ್ಳಿ, ಈರಪ್ಪ ಕುಡಗುಂಟಿ ಅಧಿಕಾರಿಗಳಿದ್ದರು.

ತುಮಕೂರಿನ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮಿಗಳ ಶಿವೈಕ್ಯ ನಿಮಿತ್ತ ಕಾರ್ಯಕ್ರಮದ ನಂತರ ಶ್ರದ್ಧಾಂಜಲಿ ಸಭೆ ನಡೆಯಿತು. ಎರಡು ನಿಮಿಷಗಳ ಕಾಲ ಮೌನ ಆಚರಣೆ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next