Advertisement
ಹವ್ಯಾಸಿ ಅರ್ಥದಾರಿ ರಾಮಚಂದ್ರ ಭಟ್ ತೋಕೂರು ಯಕ್ಷಗಾನ ಕಂಡ ಅಪರೂಪದ ಹಿರಿಯ ತಲೆಮಾರಿನ ಕೊಂಡಿ. ಇವರು ಸಂಸ್ಕೃತ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರ ಪಾರಂಗತರು. ಸಂಸ್ಕೃತ , ಕನ್ನಡ ಸ್ನಾತಕೋತ್ತರ ಪದವಿ ಪಡೆದು ಅಧ್ಯಾಪನ ವೃತ್ತಿಯಲ್ಲಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಹಾಗೂ ನಾಟಕದ ಬಗ್ಗೆ ಅಪಾರವಾದ ಸೆಳತದಿಂದ ಆಟ- ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ದಿ. ಕೊರ್ಗಿ ವೆಂಕಟೇಶ ಉಪಾಧ್ಯಯರ ಗೆಳತನ , ಪ್ರಭಾಕರ ಜೋಷಿಯವರ , ಎಂ. ಎಲ್ ಸಾಮಗರ ಒಡನಾಟದಿಂದ ತಾಳಮದ್ದಲೆಯಲ್ಲಿ ಭಾಗವಹಿಸುವಿಕೆ, ಶಂಕರನಾರಾಯಣ ಸಾಮಗ, ರಾಮದಾಸ ಸಾಮಗರ ಜೊತೆಗೆ ತಾಳಮದ್ದಲೆ ಕೂಟದಲ್ಲಿ ಅರ್ಥಗಾರಿಕೆ ಮಾಡಿದ್ದಾರೆ. ವಾಸುದೇವ ಸಾಮಗರ ಸಂಯಮಂನಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಮೂಲ್ಕಿ, ಬಪ್ಪನಾಡು, ಕಾರ್ನಾಡು, ಸುರತ್ಕಲ್, ಹೊಸಬೆಟ್ಟು ವಿನಲ್ಲಿ ನಡೆಯುವ ವಾರದ ಕೂಟ, ತಿಂಗಳ ಕೂಟಗಳಲ್ಲಿ ಭಾಗವಹಿಸಿಸುತ್ತಿದ್ದಾರೆ.
Advertisement
ರಾಮಚಂದ್ರಭಟ್‌ಗೆ ಯಕ್ಷಲಹರಿ ಪ್ರಶಸ್ತಿ
06:58 PM Aug 01, 2019 | mahesh |
Advertisement
Udayavani is now on Telegram. Click here to join our channel and stay updated with the latest news.