Advertisement

ಯಕ್ಷಧ್ರುವ ಪಟ್ಲ ಫೌಂಡೇಶನ್‌ ವಾರ್ಷಿಕೋತ್ಸವ: ಯಕ್ಷಗಾಯನ ವೈಭವ

01:00 AM Jan 20, 2019 | Harsha Rao |

ಕುಂಬಳೆ: ಯಕ್ಷಧ್ರುವ ಪಟ್ಲ ಫೌಂಡೇಶನ್‌ ಕುಂಬಳೆ ಘಟಕದ ತೃತೀಯ ವಾರ್ಷಿಕೋತ್ಸವವು ಕಣಿಪುರ ಶ್ರೀ ಗೋಪಾಲಕೃಷ್ಣ ಕೇÒತ್ರ ವಾರ್ಷಿಕ ಮಹೋತ್ಸವದ ಆರಾಟ ದಿನದಂದು ಕೇÒತ್ರ ವಠಾರದಲ್ಲಿ ಜರಗಿತು.ತೆಂಕು ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾಯನ ವೈಭವ ನಡೆಯಿತು.

Advertisement

ಯಕ್ಷಧ್ರುವತಾರೆ ಪಟ್ಲ ಸತೀಶ್‌ ಶೆಟ್ಟರ ಸ್ವರಮಾಧುರ್ಯಕ್ಕೆ ಬಡಗಿನ ಗಾನಸಾರಥಿ ಅಮೋಘ ಕಂಠ ಸಿರಿಯ ಜನ್ಸಾಲೆ ರಾಘವೇಂದ್ರ ಆಚಾರ್ಯರ ಸ್ವರ ಮಿಳಿತವಾಯಿತು.ತೆಂಕು ಬಡಗಿನ ಮಿಳಿತ ಮಾಧುರ್ಯದ ಸತ್ಯನಾರಾಯಣ ಪುಣಿಚಿತ್ತಾಯರ ಸ್ವರ ನಿನಾದಿಸಿ ರಾಗಸರಾಗವಾಗಿ ಅನುರಣಿಸುವ ಮಹಾಭಾಗವತಿಕೆ,ಇವೆಲ್ಲಕ್ಕೆ ಕಲಶವಿಡುವಂತೆ ತೆಂಕುತಿಟ್ಟಿನ ಪದ್ಮನಾಭ ಉಪಾಧ್ಯಾಯ ಉಜಿರೆ,ಗುರುಪ್ರಸಾದ್‌ ಬೊಳಂಜಡ್ಕ,ರಾಜೇಂದ್ರಕೃಷ್ಣ ಪಂಜಿಗದ್ದೆ ಮತ್ತು ಬಡಗಿನ ಸುನಿಲ್‌ ಭಂಡಾರಿ ಕಡತೋಕ,ಹಾಗೂ ಸುಜನ್‌ ಹಾಲಾಡಿಯವರ ಹಿಮೇ¾ಳವಾದನ ವೈಖರಿ,ಗುರುರಾಜ ಹೊಳ್ಳ ಬಾಯಾರು ಇವರ ನಿರೂಪಣೆ ಮೇಳೈಸಿತು.

ಸಮಾರಂಭದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್‌ರವರನ್ನು ಸಮ್ಮಾನಿಸಲಾಯಿತು.
ಕೀರ್ತಿಶೇಷ ಮೇರು ಭಾಗವತರಾಗಿದ್ದ ಪುತ್ತಿಗೆ ತಿಮ್ಮಪ್ಪ ರೈ ಮತ್ತು ಎರ್ಮನಿಲೆ ನಾರಾಯಣ ಶೆಟ್ಟಿಯವರ ಸಂಸ್ಮರಣೆಯನ್ನು ಪಟ್ಲಗುತ್ತು ಮಹಾಬಲ ಶೆಟ್ಟಿ  ಮಾಡಿದರು.

ಹಿರಿಯ ಭಾಗವತ ಪುತ್ತಿಗೆಗುತ್ತು ತಿಮ್ಮಪ್ಪ ರೈ ಅವರ ಅಶಕ್ತ ಪತ್ನಿ ಕುಸುಮಾ ರೈ ಅವರಿಗೆ ಆರ್ಥಿಕ ನೆರವನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಕಣಿಪುರ ಕೇÒತ್ರದ ಪ್ರಧಾನ ಅರ್ಚಕ ವೇದಮೂರ್ತಿ ಮಾಧವ ಅಡಿಗಳು ದೀಪಬೆಳಗಿಸಿ ಉದ್ಘಾಟಿ ಸಿದರು.

ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯರು ಆಶೀರ್ವಚನ ನೀಡಿದರು.ಕುಂಬಳೆ ಗ್ರಾಮ ಪಂಚಾಯತ್‌ ಸದಸ್ಯರಾದ ಕೆ.ರಮೇಶ್‌ ಭಟ್‌,ಸುಖೇಶ್‌ ಭಂಡಾರಿ,ಸುಜಿತ್‌ ರೈ,ಅರುಣಾ ಎಂ.ಆಳ್ವ ಮತ್ತು ಪುಷ್ಪಲತಾ ಸುರೇಶ್‌,ಐಲ ಶ್ರೀ ಕೇÒತ್ರದ ಆಡಳಿತ ಮೊಕೇ¤ಸರ ಕೋಡಿಬೈಲು ನಾರಾಯಣ ಹೆಗ್ಡೆ,ಕೇÒತ್ರ ನಿರ್ವಹಣಾಧಿಕಾರಿ ಎಂ.ಟಿ.ರಾಮನಾಥ ಶೆಟ್ಟಿ ,ಸುದೇಶ್‌ ರೈ ಸಿ.ಎ ಅತಿಥಿಗಳಾಗಿ ಭಾಗವಹಿಸಿದರು. 

Advertisement

ಪಟ್ಲ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ಆಶಯಭಾಷಣ ಮಾಡಿದರು. ಪಟ್ಲ ಫೌಂಡೇಶನ್‌ ಕುಂಬಳೆ ಘಟಕಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಢಾರಿ ಅಧ್ಯಕ್ಷತೆ ವಹಿಸಿದರು.ರೋಹಿಣಿ ಎಸ್‌.ದಿವಾಣ ಪ್ರಾರ್ಥನೆ ಹಾಡಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್‌ ಕುಂಬಳೆ ಘಟಕಾಧ್ಯಕ್ಷ ಎಸ್‌.ಜಗನ್ನಾಥ ಶೆಟ್ಟಿ ಸ್ವಾಗತಿಸಿದರು.

ಮಧೂರು ರಾಧಾಕೃಷ್ಣ ನಾವಡ ಸಮ್ಮಾನಿತರ ಕುರಿತು ಅಭಿನಂದನಾ ಭಾಷಣ ಮಾಡಿದರು. ಮಂಜುನಾಥ ಆಳ್ವ ಮಡ್ವ ವಂದಿಸಿದರು.
ರಾಘವೇಂದ್ರ ಪ್ರಸಾದ್‌ ನಾಯಕ್‌ ಬದಿಯಡ್ಕ ನಿರೂಪಿಸಿದರು.ಪಾಂಡವಾಸ್‌ ಕುಂಬಳೆ ಕಂಚಿಕಟ್ಟೆ ಸಹಕಾರ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next