ಕೋಟ: ಯಕ್ಷಸೌರಭ ಶ್ರೀಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಆಶ್ರಯದಲ್ಲಿ, ಪಂಚವರ್ಣ ಯುವಕ ಮಂಡಲ ಕೋಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ನ.4ರಂದು ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರಂಗದೋಕುಳಿ ಕಾರ್ಯಕ್ರಮ ಜರಗಿತು.
ಸಾಸ್ತಾನ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ಸುಬ್ರಹ್ಮಣ್ಯ ಮಧ್ಯಸ್ಥ ಕಾರ್ಯಕ್ರಮ ಉದ್ಘಾಟಿಸಿ, ಹವ್ಯಾಸಿ ಕಲಾಸಂಘಟನೆಗಳ ಮೂಲಕ ಕಲೆಯ ಉಳಿವು ಸಾಧ್ಯ. ಆದರೆ ಈ ಸಂಘಟನೆಗಳಿಗೆ ಸರಕಾರ ಹಾಗೂ ಸಾರ್ವಜನಿಕರ ಹೆಚ್ಚಿನ ಸಹಕಾರ ಅಗತ್ಯ. ಕಲಾಪೋಷಕರು ಯುವ ಕಲಾವಿದರಿಗೆ ಗೌರವ ನೀಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ ಎಂದರು.
ಈ ಸಂದರ್ಭ ಕೋಟ ಶಿವಾನಂದ ಅವರ ಪುತ್ರ ಶಶಿಧರ ಕೋಟ ವಿರಚಿತ ಮೋಹಾಗ್ನಿ ಪೌರಾಣಿಕ ಪ್ರಸಂಗ ಬಿಡುಗಡೆಗೊಂಡಿತು. ಕಾರಂತ ಟ್ರಸ್ಟ್‌ನ
ಟ್ರಸ್ಟಿ ಸುಬ್ರಾಯ ಆಚಾರ್ಯ ಪ್ರಸಂಗ ಬಿಡುಗಡೆಗೊಳಿಸಿದರು. ಪ್ರಸಂಗಕರ್ತರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಯಕ್ಷಸೌರಭದ ಅಧ್ಯಕ್ಷ ಮಂಜುನಾಥ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಾಲಿಗ್ರಾಮ ಪ.ಪಂ. ಸದಸ್ಯ ಶ್ಯಾಮ್‌ಸುಂದರ್ ನಾೖರಿ, ಉದ್ಯಮಿ ಶೇವಧಿ ಸುರೇಶ ಕೋಟ, ಯಕ್ಷಗುರು ಪ್ರಸಾದ್ ಮೊಗೆಬೆಟ್ಟು, ದೇವಾಡಿಗ ಸಂಘದ ಅಧ್ಯಕ್ಷ ನರಸಿಂಹ ದೇವಾಡಿಗ, ಯಕ್ಷಸೌರಭ ಕಾರ್ಯಾಧ್ಯಕ್ಷ ರಾಘವೇಂದ್ರ ಕರ್ಕೇರ, ಕಾರ್ಯದರ್ಶಿ ಶ್ರೀನಾಥ ಉರಾಳ, ಸ್ಥಾಪಕಾಧ್ಯಕ್ಷ ಹರೀಶ್ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು. ತಿಮ್ಮಪ್ಪ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.