Advertisement
ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿ ಶಿಬಿರದ ಅಂಗವಾಗಿ ಶಿಬಿರಾರ್ಥಿ ಗಳು ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಸಂಶೋಧನ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಕ್ಷಗಾನದ ತಾತ್ವಿಕ ಒಳನೋಟಗಳು ಎಂಬ ವಿಷಯದಲ್ಲಿ ಅವರು ಮಾತನಾಡಿದರು. ಸ್ಪರ್ಧೆಗಾಗಿಯೋ, ಪ್ರಶಸ್ತಿಗಾಗಿಯೋ ಯಕ್ಷಗಾನ ಕಲೆಯನ್ನು ಮೈಗೂಡಿಸಿಕೊಳ್ಳಬಾರದು. ಇದರಿಂದ ಉತ್ತಮ ಪ್ರದರ್ಶನ ಸಾಧ್ಯವಿಲ್ಲ. ಕಲಾವಿದ ಅದನ್ನು ಅನುಭವಿಸಿ ಪಾತ್ರಕ್ಕೆ ಜೀವ ತುಂಬಬೇಕು. ಇಂದು ತೆಂಕು ಹಾಗೂ ಬಡಗು ಸೇರಿದಂತೆ ಐವತ್ತಕ್ಕಿಂತಲೂ ಹೆಚ್ಚು ಮೇಳಗಳಿವೆ. ಪ್ರತಿ ಮೇಳ ವರ್ಷಕ್ಕೆ ಕನಿಷ್ಠ ನೂರೈವತ್ತು ಪ್ರದರ್ಶನ ಕೈಗೊಂಡರೆ ಸಹಸ್ರಗಟ್ಟಲೆ ಪ್ರದರ್ಶನವಾಗುತ್ತದೆ. ಇಷ್ಟೊಂದು ಪ್ರದರ್ಶನ ಏರ್ಪಡುತ್ತಿರುವ ಈ ಕಲೆಯ ಮಹತ್ವವನ್ನು ತಿಳಿಯದ ವಿದ್ಯಾವಂತರೂ ನಮ್ಮ ಜತೆಗಿದ್ದಾರೆ ಎಂಬುದೇ ವಿಪರ್ಯಾಸದ ಸಂಗತಿ. ಯಕ್ಷಗಾನ ಸಮಗ್ರ ರಂಗಭೂಮಿ ಕಲೆ. ಒಬ್ಬ ಕಲಾವಿದ ಒಂದು ವರ್ಷದಲ್ಲಿ ಕನಿಷ್ಠ ನೂರೈವತ್ತಕ್ಕಿಂತಲೂ ಅಧಿಕ ವೇಷಗಳನ್ನು ಮಾಡುತ್ತಾನೆ. ಇಂತಹ ಶಕ್ತಿಯಿರುವುದು ಯಕ್ಷಗಾನಕ್ಕೆ ಮಾತ್ರ. ಇಂತಹ ಕಲೆಯನ್ನು, ಕಂಬಳ, ಭೂತಕೋಲವನ್ನು ನೋಡದೆ ಇರುವ ಕರಾವಳಿಯ ವಿದ್ಯಾವಂತ ಜನರು ಈಗಲೂ ನಮ್ಮ ಜತೆಗಿದ್ದಾರೆ. ಇದು ವಿಪರ್ಯಾಸ. ಕಲಾವಿದರಲ್ಲಿ ಪ್ರಾಮಾಣಿಕತೆ ಎಷ್ಟು ಮುಖ್ಯವೋ ಪ್ರೇಕ್ಷಕರಲ್ಲಿ ಅನುಭವಿಸುವ, ಆಸ್ವಾದಿಸುವ ಹƒದಯ ಅಷ್ಟೇ ಮುಖ್ಯ. ಪರಂಪರೆಯ ಮೌಲ್ಯವನ್ನರಿತು ಕಲೆಯ ಮಹತ್ವವನ್ನು ಉಳಿಸುವ ಹೊಣೆ ಯಕ್ಷಗಾನ ಕಲಾವಿದರಿಗಿದೆ. ಸರಿಯಾದುದನ್ನು ಸ್ವೀಕರಿಸುವ ಜಾಣ್ಮೆ ಸಹೃದಯಿ ಪ್ರೇಕ್ಷಕರಲ್ಲಿ ಇರಬೇಕಾದುದು ಅನಿವಾರ್ಯ. ವರ್ಷದಲ್ಲಿ ಯಕ್ಷಗಾನದಿಂದಲೇ ಸುಮಾರು ನಾಲೂ°ರು ಅಥವಾ ಐನ್ನೂರು ಕೋಟಿ ರೂ.ಗಳ ಆರ್ಥಿಕ ವ್ಯವಹಾರ ನಡೆಯುತ್ತದೆ. ಒಂದು ಕಲೆ ಇಷ್ಟೊಂದು ಜನಮನ್ನಣೆ ಗಳಿಸಬೇಕಿದ್ದರೆ ಜನರು ಆ ಕಲೆಗೆ ನೀಡಿರುವ ಪ್ರಾಧಾನ್ಯ ಏನು ಎಂಬುದು ಮನದಟ್ಟಾಗುತ್ತದೆ. ಆದಕಾರಣ ಯಕ್ಷಗಾನ ಲಘುವಲ್ಲ. ವಿದ್ಯಾವಂತ ಯುವಜನತೆ ಈ ಕಲೆಯ ಮಹತ್ವವನ್ನು ಅರಿತು ಅದರತ್ತ ಬರಬೇಕು. ಅಧ್ಯಯನಗಳು ನಡೆಯ ಬೇಕು. ವಿಮರ್ಶೆಗಳು ನಡೆಯಬೇಕು. ಹಿರಿಯ ಕಲಾವಿದರ ಸಂಪರ್ಕ ಬೆಳೆಸಿಕೊಂಡು ಅವರ ಅನುಭವಗಳನ್ನು ದಾಖಲಿಸಬೇಕು. ತೆರೆದ ಮನಸ್ಸಿ ನಿಂದಲೂ, ಅಧ್ಯಯನಶೀಲ ಮನೋ ಭಾವದಿಂದಲೂ ವಿದ್ಯಾರ್ಥಿಗಳು ಯಕ್ಷಗಾನ ದತ್ತ ಬರಲು ಇಂತಹ ಶಿಬಿರಗಳಿಂದ ಸಾಧ್ಯ. ಈಗಾಗಲೇ ಸುಮಾರು ಇಪ್ಪತ್ತೈದು ಪಿಎಚ್‌ಡಿ ಮಹಾ ಪ್ರಬಂಧಗಳು ಯಕ್ಷಗಾನದ ಕುರಿತು ಬಂದಿವೆ. ಆರೇಳು ಸಾವಿರ ಹಸ್ತಪ್ರತಿ ಗಳಿವೆ. ಇವೆಲ್ಲ ಓದುಗನ ಕೈಗೆ ತಲುಪುವ ಕೆಲಸವಾಗಬೇಕು.
Related Articles
Advertisement
ಶಿಬಿರಾರ್ಥಿಗಳು ಕೇಂದ್ರದ ವಸ್ತು ಸಂಗ್ರಹಾಲಯದ ಮಾಹಿತಿ ಸಂಗ್ರಹಿಸಿ ದರು. ಕೇಂದ್ರದ ಗ್ರಂಥಾಲಯದಲ್ಲಿ ಕೆಲಹೊತ್ತು ಕಳೆದ ಶಿಬಿರಾರ್ಥಿಗಳು ಪ್ರಮುಖ ಯಕ್ಷಗಾನ ಹಸ್ತಪ್ರತಿಗಳು ಹಾಗೂ ಇತರ ಪ್ರಕಟಿತ ಗ್ರಂಥಗಳ ಕುರಿತು ತಿಳಿದುಕೊಂಡರು.
ಡಾ| ಧನಂಜಯ ಕುಂಬಳೆ, ಡಾ| ರಾಜಶ್ರೀ, ಜೆಸ್ಸಿ ಮತ್ತಿತರರು ಸಹಕರಿಸಿದರು.