Advertisement

ನಾಡಿದ್ದು ಯಕ್ಷಗಾನ ತರಬೇತಿ ಸಂಸ್ಥೆಗೆ ಯಕ್ಷಗೆಜ್ಜೆ ಸಂಭ್ರಮ

03:50 PM Nov 16, 2018 | Team Udayavani |

ಶಿರಸಿ: ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಇಲ್ಲಿನ ಯಕ್ಷಗಾನ ತರಬೇತಿ ಸಂಸ್ಥೆ ಯಕ್ಷಗೆಜ್ಜೆ ನಡೆಯುತ್ತಿರುವ ಯಕ್ಷಗಾನ ತರಗತಿ ವಿದ್ಯಾರ್ಥಿಗಳಿಂದಲೇ ಯಕ್ಷಗಾನ ಪ್ರದರ್ಶನ, ಸಮ್ಮಾನ, ಮರೆಯಾಗುತ್ತಿರುವ ಯಕ್ಷಗಾನ ಪೂರ್ವಾಂಗದ ದರ್ಶನ ಸೇರಿದಂತೆ ಹಲವು ರಚನಾತ್ಮಕ ಕಾರ್ಯಕ್ರಮ ನ.18 ರಂದು ಸಂಜೆ 4ರಿಂದ ನಗರದ ಯೋಗ ಮಂದಿರದಲ್ಲಿ ನಡೆಯಲಿದೆ.

Advertisement

ಈ ಕುರಿತು ಮಾಹಿತಿ ನೀಡಿದ ಯಕ್ಷಗೆಜ್ಜೆ ಮುಖ್ಯಸ್ಥೆ, ಯಕ್ಷಗುರು ನಿರ್ಮಲಾ ಹೆಗಡೆ ಗೋಳಿಕೊಪ್ಪ, ನಮ್ಮ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಇದಾಗಿದೆ. ಕಳೆದೆರಡು ತಿಂಗಳಿಂದ ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ ನಡೆಸಲಾದ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಕೂಡ ನಡೆಯಲಿದೆ. ಮಕ್ಕಳು, ಮಹಿಳೆಯರು ಒಂದಾಗಿ ಯಕ್ಷಗಾನ ಕಲಿಕೆ ಕುರಿತು ಆಸಕ್ತಿ ಬೆಳಸಿಕೊಂಡಿದ್ದು ವಿಶೇಷವಾಗಿದೆ. ಯಕ್ಷಗಾನದ ಜೊತೆಗೆ ತಾಳಮದ್ದಲೆ ಅರ್ಥಗಾರಿಕೆಯಲ್ಲೂ ತರಬೇತಿ ಪಡೆದು ಹಲವಡೆ ಪ್ರದರ್ಶನ ಕೂಡ ನೀಡಿದ್ದಾರೆ. ಇಲ್ಲಿ ತರಬೇತಿ ಪಡೆದ ಮಕ್ಕಳು ಅನೇಕ ಕಡೆ ಪ್ರಶಸ್ತಿ ಕೂಡ ಪಡೆದಿದ್ದಾರೆ ಎಂದು ವಿವರಿಸಿದರು.

ಯಕ್ಷಗಾನ ತರಬೇತಿ ನೀಡುವ ಜೊತೆಗೆ ಮಕ್ಕಳಿಗೆ ಪೌರಾಣಿಕ ಕಥಾಭಾಗಗಳನ್ನು ಪರಿಚಯಿಸುವ ಆಶಯ ನಮ್ಮದಾಗಿದೆ. ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಆಗುವ ಬದಲಾವಣೆ ಅರಿವನ್ನೂ ಮೂಡಿಸುವದು ಆಗಿದೆ. ಕಲೆಯ ಕಲಿಕೆಯ ಜೊತೆ ಪ್ರದರ್ಶನದ ಅವಕಾಶವನ್ನೂ ಸಂಸ್ಥೆ ಮಾಡುತ್ತಿದೆ. ಈಗಾಗಲೇ 24 ವಿದ್ಯಾರ್ಥಿಗಳು ಪ್ರತೀ ರವಿವಾರ ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.

18ರಂದು ಸಂಜೆ 4ಕ್ಕೆ ಯಕ್ಷಗಾನ ಕಲಾವಿದರಾದ ವಿದ್ವಾನ್‌ ಸುಬ್ರಾಯ ಭಟ್ಟ ಗಡಿಗೆಹೊಳೆ ಹಾಗೂ ಗಣಪತಿ ಭಾಗವತ್‌ ಕವ್ವಾಳೆ ಅವರನ್ನು ಗೌರವಿಸಲಾಗುತ್ತಿದೆ. ಸ್ವರ್ಣವಲ್ಲೀ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜಿ.ಎನ್‌.ಹೆಗಡೆ ಹೀರೇಸರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಯಕ್ಷಶಾಲ್ಮಲಾದ ಕಾರ್ಯಾಧ್ಯಕ್ಷ ಆರ್‌.ಎಸ್‌. ಹೆಗಡೆ ಭೈರುಂಬೆ, ಅರ್ಥಧಾರಿ ನಾರಾಯಣ ಯಾಜಿ ಸಾಲೇಬೈಲು, ಉದ್ಯಮಿ ಉಪೇಂದ್ರ ಪೈ, ಯಕ್ಷಗಾನ ಅಕಾಡೆಮಿ ಸದಸ್ಯರಾದ ನಾಗರಾಜ್‌ ಜೋಶಿ ಸೋಂದಾ, ಅಶ್ವಿ‌ನಿ ಕೊಂಡದಕುಳಿ, ಪತ್ರಕರ್ತ ರಮೇಶ ಹೆಗಡೆ ಕಾನಗೋಡ, ವಾರ್ತಾವಾಚಕ ಎ.ವಿ.ಚಿತ್ತರಂಜನದಾಸ್‌, ಆರಾಧನಾ ಚಾರಿಟೇಬಲ್‌ ಟ್ರಸ್ಟ್‌ನ ಅರುಣಾ ಭಟ್ಟ ಪಾಲ್ಗೊಳ್ಳಲಿದ್ದಾರೆ.

ಶಿಬಿರಾರ್ಥಿಗಳಿಂದ ಯಕ್ಷಗಾನ ಪೂರ್ವರಂಗವಾದ ಗಣಪತಿ ಪೂಜೆ, ಪೀಠಿಕಾ ಸ್ತ್ರೀ ವೇಷಗಳನ್ನು ವಿದ್ಯಾರ್ಥಿಗಳಾದ ಭೂಮಿಕಾ, ರಕ್ಷಿತಾ, ಅನಘಾ, ಅನನ್ಯ, ಸುಚೇತಾ, ಪ್ರತೀಕ, ಪ್ರಿಯಾ, ಮಧುಕ್ಷರಾ, ಮೌಲ್ಯಾ, ಗ್ರೀಷ್ಮ, ರಶ್ಮಿ ಹೆಗಡೆ, ದಾಕ್ಷಾಯಿನಿ ಕೊಡಿಯಾ ಪ್ರದರ್ಶಿಸಲಿದ್ದಾರೆ. ನಿರ್ಮಲಾ ಹೆಗಡೆ ವಿರಚಿತ ಗಜಾನನ ಜನನ ಮಕ್ಕಳ ಯಕ್ಷಗಾನದಲ್ಲಿ ಸ್ನೇಹಶ್ರೀ ಹೆಗಡೆ ಈಶ್ವರ, ಅನಘಾ ಹೆಗಡೆ ಪಾರ್ವತಿ, ಅಭಿಜ್ಞಾ ಹೆಗಡೆ ಗಣಪತಿ, ಪ್ರತೀಕ ಹೊಸ್ಮನೆ, ಗ್ರೀಷ್ಮ ಗಣಗಳಾಗಿ ಪಾಲ್ಗೊಳ್ಳುವರು. ಬಳಿಕ ಶ್ರೀಶಂಕರ ದಿಗ್ವಿಜಯ ಆಖ್ಯಾನ ಪ್ರದರ್ಶನವಾಗಲಿದೆ. 

Advertisement

ಹಿಮ್ಮೇಳದಲ್ಲಿ ಗಜಾನನ ತುಳಗೇರಿಮಠ, ಶ್ರೀಪಾದ ಮೂಡಗಾರ, ಪ್ರಮೋದ ಕಬ್ಬಿನಗದ್ದೆ ಪಾಲ್ಗೊಳ್ಳುವರು. ಮುಮ್ಮೇಳದಲ್ಲಿ ಈಶ್ವರನಾಗಿ ಮಯೂರಿ ಉಪಾಧ್ಯಾಯ, ಸೂತ್ರಧಾರಿಯಾಗಿ ವೀಣಾ ಕುಮಾರ, ಬಾಲ ಶಂಕರನಾಗಿ ಭೂಮಿಕಾ ಹೆಗಡೆ, ಶಂಕರಾಚಾರ್ಯರಾಗಿ ನಿರ್ಮಲಾ ಹೆಗಡೆ, ದೇವೇಂದ್ರನಾಗಿ ರಕ್ಷಿತಾ ಹೆಗಡೆ, ದೇವೇಂದ್ರನ ಬಲವಾಗಿ ಅನನ್ಯ ಹೆಗಡೆ, ಸುಚೇತಾ ಹೆಗಡೆ, ಆರ್‍ಯಾಂಬೆಯಾಗಿ ರಶ್ಮಿ ಹೆಗಡೆ, ಪತಿವ್ರತಾ ಯಾಗಿ ದಾಕ್ಷಾಯಿನಿ ಕೊಡಿಯಾ, ಸುಧನ್ವರಾಜನಾಗಿ ಬಿಂದು ದತ್ತಾತ್ರಯ ಹೆಗಡೆ, ಸನಂದನ ಹಾಗೂ ಉಗ್ರನರಸಿಂಹನಾಗಿ ವಿಜಯಶ್ರೀ ಹೆಗಡೆ, ವ್ಯಾಸ ಮಹರ್ಷಿಯಾಗಿ ಮೈತ್ರಿ ಹೆಗಡೆ, ಮಂಡನ ಮಿಶ್ರನಾಗಿ ಲತಾ ಗಿರಿಧರ, ಲಕ್ಷ್ಮೀಯಾಗಿ ಅನ್ನಪೂರ್ಣ ಭಟ್ಟ, ಚಂಡಾಲವೇಷ ಯಶೋಧಾ ಹೆಗಡೆ ಪಾತ್ರ ಮಾಡಲಿದ್ದಾರೆ ಎಂದರು. ಎಂ.ಕೆ. ಹೆಗಡೆ ಗೋಳಿಕೊಪ್ಪ, ಸತೀಶ ಹೆಗಡೆ ಗೊಳಿಕೊಪ್ಪ, ವಿಗ್ನೇಶ್ವರ ಹೆಗಡೆ, ಬಿಂದು ಹೆಗಡೆ ಇತರರು ಇದ್ದರು.

ಯಕ್ಷಗಾನದಲ್ಲಿ ಪಾತ್ರ ಮಾಡುವ ಜೊತೆಗೆ, ಕಲಿಸಬೇಕು ಎಂಬ ಆಶಯದಲ್ಲಿ ಕೆಲಸ ಮಾಡುತ್ತಿದ್ದೇವೆ. ಮಕ್ಕಳು, ಮಹಿಳೆಯರು ರಂಗದಲ್ಲಿ ತೊಡಗಿಕೊಂಡಾಗ ಖುಷಿ ಕಾಣುತ್ತದೆ.
 ನಿರ್ಮಲಾ ಹೆಗಡೆ
ಗೋಳಿಕೊಪ್ಪ, ಗುರು

Advertisement

Udayavani is now on Telegram. Click here to join our channel and stay updated with the latest news.

Next