Advertisement

ಮರುಭೂಮಿಯಲ್ಲಿ ಗದಾಯುದ್ಧ

05:47 PM Sep 26, 2019 | mahesh |

ದುಬಾೖಯ ಹವ್ಯಾಸಿ ಯಕ್ಷ ಗಾನ ಕಲಾವಿದರು ಗಣೇಶ ಚತುರ್ಥಿಯ ಧಾರ್ಮಿಕ ಕಾರ್ಯಕ್ರಮದಲ್ಲಿ – ಯಕ್ಷಗಾನ ಅಭ್ಯಾಸ ತರಗತಿ ದುಬಾೖ ಇದರ ಸಹಕಾರ, ಕೊಟ್ಟಿಂಜ ದಿನೇಶ್‌ ಶೆಟ್ಟಿ ಸಂಯೋಜನೆ, ಯಕ್ಷಗುರು ಶೇಖರ ಡಿ. ಶೆಟ್ಟಿಗಾರ್‌ ಕಿನ್ನಿಗೋಳಿ ಇವರ ನಿರ್ದೇಶನ, ಮಾರ್ಗದರ್ಶನದಲ್ಲಿ ಗದಾಯುದ್ಧ ಕನ್ನಡ ಯಕ್ಷಗಾನ ತಾಳಮದ್ದಳೆ ನಡೆಯಿತು.

Advertisement

ಹಿಮ್ಮೇಳದಲ್ಲಿ ಕೃಷ್ಣ ಪ್ರಸಾದ್‌ ರಾವ್‌ ಸುರತ್ಕಲ್‌, ಶರತ್‌ ಕುಡ್ಲ , ಕು| ವೈಷ್ಣವಿ, ಕು| ಪ್ರಾಪ್ತಿ ಜಯಾನಂದ ಪಕ್ಕಳ, (ಭಾಗವತರಾಗಿ), ಭವಾನಿ ಶಂಕರ ಶರ್ಮ, ಪುತ್ತಿಗೆ ವೆಂಕಟೇಶ್ವರ ಶಾಸ್ತ್ರಿ (ಚೆಂಡೆ ಮದ್ದಳೆ ವಾದಕರಾಗಿ), ಕುಮಾರ ಆದಿತ್ಯ ದಿನೇಶ್‌ ಶೆಟ್ಟಿ (ಚಕ್ರತಾಳ)ದಲ್ಲಿ ಸಹಕರಿಸಿದರು. ಅರ್ಥಧಾರಿಗಳಾಗಿ ಶೇಖರ ಡಿ. ಶೆಟ್ಟಿ ಗಾರ್‌ ಕಿನ್ನಿಗೊಳ್ಳಿ (ಸುಯೋಧನ), ಬಾಲಕೃಷ್ಣ ಡಿ. ಶೆಟ್ಟಿಗಾರ್‌ ಕಿನ್ನಿಗೊಳ್ಳಿ (ಭೀಮ-1), ಶರತ್‌ ಕುಡ್ಲ (ಭೀಮ-2), ವಾಸು ಬಾಯಾರ್‌ (ಸಂಜಯ), ಗಿರೀಶ್‌ ನಾರಾಯಣ ಕಾಟಿಪಳ್ಳ (ಬೇಹಿನಚಾರ), ಸುಧಾಕರ ರಾವ್‌ ಪೇಜಾವರ (ಧರ್ಮರಾಯ), ಸುಮಂತಾ ಗಿರೀಶ್‌ (ಅರ್ಜುನ),ಲತಾ ಸುರೇಶ್‌ ಹೆಗ್ಡೆ (ನಕುಲ), ಸತೀಶ್‌ ಶೆಟ್ಟಿಗಾರ್‌ ವಿಟ್ಲ (ಸಹದೇವ), ಸ್ವಾತಿ ಸಂತೋಷ್‌ ಕಟೀಲ್‌ (ಶ್ರೀ ಕೃಷ್ಣ), ಜೀವನ್‌ ಕ್ರಾಸ್ತ (ಬಲರಾಮ) ಅರ್ಥಧಾರಿಗಳಾಗಿ ಕಲಾವಂತಿಕೆಯನ್ನು ಮೆರೆದರು.

– ವಾಸು ಬಾಯಾರ್‌

Advertisement

Udayavani is now on Telegram. Click here to join our channel and stay updated with the latest news.

Next