Advertisement

ಭಾಂಡೂಪ್‌ನಲ್ಲಿ ರಂಜಿಸಿದ ವೀರಮಣಿ ತಾಳಮದ್ದಳೆ

03:56 PM Jul 19, 2017 | Team Udayavani |

ಯಕ್ಷಮಿತ್ರರು ಭಾಂಡೂಪ್‌ ನಾಡಿನ ಕಲಾ ಪ್ರಕಾರಗಳನ್ನು ಉತ್ತೇಜಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿದೆ. ಅದರಲ್ಲೂ ಯಕ್ಷಗಾನ, ತಾಳಮದ್ದಳೆ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಅವರ ಸರಣಿ ಯಕ್ಷಗಾನ ತಾಳಮದ್ದಳೆಯ ಅಂಗವಾಗಿ “ವೀರಮಣಿ’ ತಾಳಮದ್ದಳೆಯು ಇತ್ತೀಚೆಗೆ ಭಾಂಡೂಪ್‌ನ ಶ್ರೀ ನಿತ್ಯಾನಂದ ಮಂದಿರದ ಸಭಾಂಗಣದಲ್ಲಿ ಆಯೋಜಿಸಿ ತಾಳಮದ್ದಳೆಯ ಅಭಿಮಾನಿಗಳನ್ನು ರಂಜಿಸುವಲ್ಲಿ ಯಕ್ಷಮಿತ್ರರು ಭಾಂಡೂಪ್‌ ಯಶಸ್ವಿಯಾದರು.

Advertisement

ಮಂದಿರದ ಪ್ರಧಾನ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್‌ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರ್ಚಕ ಸುಭಾಶ್‌ ಭಟ್‌, ಬಿಲ್ಲವರ ಅಸೋಸಿಯೇಶನ್‌ ಭಾಂಡೂಪ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಎಂ. ಬಿ. ಸನಿಲ್‌, ಭಾಂಡೂಪ್‌ ಶ್ರೀ ಶನಿಮಂದಿರದ ಸೀತಾರಾಮ ಜಿ. ಕರ್ಕೇರ, ಹಿರಿಯರಾದ ಸದಾನಂದ ಅಮೀನ್‌, ಯಕ್ಷಮಿತ್ರರು ಭಾಂಡೂಪ್‌ನ ಜನಾದ‌ìನ ಪೂಜಾರಿ, ವಾಸು ಎಸ್‌. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಕಲಾವಿದ ವೇಣುಗೋಪಾಲ್‌ ಭಟ್‌ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. 

ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಅತಿಥಿಗಳನ್ನು ಅಭಿನಂದಿಸಿ ಗೌವಿಸಿದರು.

ಇದೇ ಸಂದರ್ಭದಲ್ಲಿ ನಡೆದ ವೀರಮಣಿ ತಾಳಮದ್ದಳೆಯಲ್ಲಿ ಕಾವ್ಯಶ್ರೀ ಆಜೇರು ಅವರ ಇಂಪಾದ ಹಾಡು ಗಾರಿಕೆಯು ಯಕ್ಷಕಲಾಭಿಮಾನಿಗಳನ್ನು ಆಶ್ಚರ್ಯಗೊಳಿಸಿತು. ಎಳೆಯ ಹರೆಯದಲ್ಲೇ ಉತ್ತಮ ಕಂಠದಿಂದ ಪ್ರಸಿದ್ಧಿಯನ್ನು ಹೊಂದಿರುವ ಅವರು ಯಕ್ಷಗಾನ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಉತ್ತಮ ಸಾಧನೆಗಳನ್ನು ಮಾಡಲಿ ದ್ದಾರೆ ಎಂಬುವುದನ್ನು ನಿರೂಪಿಸಿದರು. ಚೆಂಡೆ-ಮದ್ದಳೆಯಲ್ಲಿ ಕಟೀಲು ಮೇಳದ ಪ್ರಸಿದ್ಧ ಹಿಮ್ಮೇಳ ಕಲಾವಿದ ಪ್ರಶಾಂತ್‌ ಶೆಟ್ಟಿ ವಗೆನಾಡು, ಶ್ರೀಪತಿ ನಾಯಕ್‌ ಆಜೇರು   ತಮ್ಮಲ್ಲಿರುವ ಪ್ರತಿಭಾ ಶಕ್ತಿಯನ್ನು ಪ್ರದರ್ಶಿಸಿದರು.

ಅರ್ಥಗಾರಿಕೆಯಲ್ಲಿ ವೀರಮಣಿಯಾಗಿ ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ ಅವರ ಮಾತುಗಾರಿಕೆಯ ಗತ್ತು, ಆ ಶೈಲಿ ಎಲ್ಲರನ್ನು ಮಂತ್ರಮುಗ್ಧಗೊಳಿಸಿತು. ಮೊದಲ ಭಾಗದ ಹನುಮಂತನಾಗಿ ದಿನೇಶ್‌ ಶೆಟ್ಟಿ ಕಾವಳಕಟ್ಟೆ, ದ್ವಿತೀಯ ಹನುಮಂತನಾಗಿ ಹರೀಶ್‌ ಬಳಂತಿಮೊಗರು, ಈಶ್ವರನಾಗಿ ಪಕಳಕುಂಜ ಶ್ಯಾಮ್‌ ಭಟ್‌, ಶತ್ರುಘ್ನನಾಗಿ ಶೇಣಿ ವೇಣುಗೋಪಾಲ್‌ ಭಟ್‌ ಅವರು ತಮ್ಮ ಪಾತ್ರಗಳಿಗೆ ಜೀವತುಂಬುವಲ್ಲಿ ಯಶಸ್ವಿಯಾದರು. ದಿನೇಶ್‌ ಶೆಟ್ಟಿ ವಿಕ್ರೋಲಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸುರಿಯುತ್ತಿದ್ದ ಮಳೆಯ ನಡುವೆಯೂ ಕಲಾಭಿಮಾನಿಗಳು ವಿವಿಧ ಉಪನಗರಗಳಿಂದ ಆಗಮಿಸಿ ಕಲಾವಿದರನ್ನು ಹುರಿದುಂಬಿಸಿದರು. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದಾಗ ಮಾತ್ರ ನಾಡಿನ ಕಲೆ, ಸಂಸ್ಕೃತಿ, ಆಚಾರ, ವಿಚಾರಗಳು ಉಳಿಯಲು ಸಾಧ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next