Advertisement
ಮೊದಲನೆ ದಿನ ಜಾಂಬವತಿ ಕಲ್ಯಾಣ ಪ್ರಸಂಗ. ಬಲರಾಮನಾಗಿ ಸುಲೋಚನಾ ವಿ.ರಾವ್ ನಾರದನೊಂದಿಗೆ ಸಹೋದರ ಕೃಷ್ಣನನ್ನು ಸಮರ್ಥಿಸುತ್ತಾ ಶ್ಯಮಂತಕ ಮಣಿ ಕದ್ದ ಅಪವಾದಕ್ಕೊಳಗಾಗಿದ್ದಾನೆ ಎಂದಾಗ ನ್ಯಾಯಾಧೀಶರಾಗಿ ಗಂಭೀರ ಗತ್ತುಗಾರಿಕೆಯ ನಿರ್ವಹಣೆ ತೋರಿದರು. ನಾರದನಾಗಿ ಕೆ. ಕಲಾವತಿ ಕೃಷ್ಣನ ಬಗ್ಗೆ ಬಲರಾಮನಲ್ಲಿ ಕ್ರೋಧ ಉಕ್ಕಿಸುವಲ್ಲಿ ಯಶಸ್ವಿಯಾದರು. ಆ ಭಾಗದ ಕೃಷ್ಣ ಲಲಿತಾ ಭಟ್ ವಿಧೇಯ ಸಹೋದರನಾಗಿ ತಾಳ್ಮೆಯಿಂದ ಪ್ರತಿಕ್ರಿಯಿಸುತ್ತ ಅಣ್ಣನ ಕೋಪವನ್ನು ತಣಿಸುವ ಸನ್ನಿವೇಶವನ್ನು ಚೆನ್ನಾಗಿ ನಿಭಾಯಿಸಿದರು. ಜಾಂಬವಂತನಾಗಿ ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ ಮೆರೆದರೆ ಶ್ರೀ ರಾಮಾಯಣ ದರ್ಶನದ ಬಳಿಕ ಭಕ್ತಿಯ ಹೊನಲನ್ನೇ ಹರಿಸಿದರು. ಈ ಭಾಗದ ಕೃಷ್ಣನಾಗಿ ವನಿತಾ ಹೆಗಡೆ ಸಮರ್ಥ ಸಂವಾದದ ಮೂಲಕ ಮೆರಗು ಕೊಟ್ಟರು. ಮಂಗಳಾ ಜಾಂಬವತಿ ಪಾತ್ರ ಮಾಡಿದರು. ಬಲಿಪ ಪ್ರಸಾದ ಭಟ್ ಇವರ ಪರಂಪರೆಯ ಭಾಗವತಿಕೆ ಜನಮನ ಗೆದ್ದಿತು.
Related Articles
Advertisement
ನಾಲ್ಕನೇ ದಿನ ದಾನಶೂರ ಕರ್ಣ ಪ್ರಸಂಗ. ಪುರುಷ ಪ್ರಧಾನವಾದ ಈ ಕಥಾ ಭಾಗದ ಪ್ರಸ್ತುತಿಯಲ್ಲಿ ಮೊದಲ ಭಾಗದ ಕರ್ಣನಾಗಿ ಪುತ್ತೂರಿನ ಶುಭಾ ಅಡಿಗ ನಿರರ್ಗಳ ವಾಗjರಿಯಿಂದ ಅಬ್ಬರಿಸಿದರೆ, ಅರ್ಜುನನಾಗಿ ಕಿಶೋರಿ ದುಗ್ಗಪ್ಪ ನಡುಗಲ್ಲು ಅಷ್ಟೇ ಭರ್ಜರಿಯಾಗಿ ಪಾತ್ರ ಚಿತ್ರಣಗೈದರು. ಹರಿಣಾಕ್ಷಿ ಶೆಟ್ಟಿ ಶಲ್ಯನಾಗಿ ನಿಲುವನ್ನು ಸಮರ್ಥವಾಗಿ ಮಂಡಿಸಿದರು. ಎರಡನೇ ಭಾಗದ ಕರ್ಣಾರ್ಜುನರಾಗಿ ದೀಪ್ತಿ ಭಟ್ ಹಾಗೂ ಸುಲೋಚನಾ ರಾವ್ ಪ್ರೌಢವಾದ ಭಾವಪೂರ್ಣ ಚಿತ್ರಣ ಕೊಟ್ಟರೆ ಶ್ರೀಕೃಷ್ಣನಾಗಿ ಜಯಂತಿ ಹೊಳ್ಳ ಅರ್ಜುನನನ್ನು ಯುದ್ಧಕ್ಕೆ ಉತ್ತೇಜಿಸುವಲ್ಲಿ ವ್ಯಂಗ್ಯ, ಸಮಾಧಾನ ನುಡಿಗಳ ಮೂಲಕ ರಂಜಿಸಿದರು. ಮಂಗಳಾ ಸರ್ಪಾಸ್ತ್ರ ಹಾಗೂ ವೃದ್ಧ ಬ್ರಾಹ್ಮಣನಾಗಿ ಕಾಣಿಸಿಕೊಂಡರು. ಭವ್ಯಶ್ರೀ ಹರೀಶ್ ಭಾಗವತಿಕೆಗೆ ಪೆರ್ಲ ಗಣೇಶ ಭಟ್ ಹಾಗೂ ಗಣೇಶ ಭಟ್ ಬೆಳಾಲು ಹಿಮ್ಮೇಳ ಒದಗಿಸಿದರು.
ಐದನೇ ದಿನ ವಾಲಿಮೋಕ್ಷ.ಸದಾನಂದ ಕುಲಾಲ್ ಸಂಪ್ರದಾಯ ಶೈಲಿಯ ಭಾವಪೂರ್ಣ ಹಾಡುಗಾರಿಕೆ ನಡೆಸಿದರು. ಮಂಗಳಪಾಡಿ ಮಂಡಳಿಯ ಜಯಲಕ್ಷ್ಮೀ ಕಾರಂತ, ಸರಸ್ವತಿ ಹೊಳ್ಳ ಮೊದಲ ಭಾಗದ ಸುಗ್ರೀವ – ವಾಲಿಯಾಗಿ ವಾಕ್ ಚಾತುರ್ಯದಿಂದ ಜನಮನಗೆದ್ದರೆ ರಾಮನಾಗಿ ಮಲ್ಲಿಕಾ ಅಜಿತ್ ಸಿದ್ಧಕಟ್ಟೆ ಗಂಭೀರ ಪಾತ್ರ ನಿರ್ವಹಣೆ ಮಾಡಿದರು. ಎರಡನೇ ಭಾಗದಲ್ಲಿ ದುರ್ಗಾಂಬ ಮಂಡಳಿಯ ಲಲಿತಾ ಭಟ್ ಸುಗ್ರೀವನಾಗಿ, ರಾಮ – ವಾಲಿಯಾಗಿ ಸುಲೋಚನಾ ರಾವ್ ಹಾಗೂ ದೀಪ್ತಿ ಭಟ್ ರಾಮವಾಲಿ ಸಂವಾದವನ್ನು ಅರ್ಥಗರ್ಭಿತವಾಗಿಸಿದರು. ಸುಮಿತ್ರಾ ಕಲ್ಲೂರಾಯ ಲಕ್ಷ್ಮಣನಾಗಿ ಕಾಣಿಸಿಕೊಂಡರು.
ಆರನೇ ದಿನ ನಾಸಚ್ಛೇದ ಪ್ರಸಂಗ. ಅಶೋಕ ನಗರದ ಭಾÅಮರಿ ಮಹಿಳಾ ಕಲಾವೃಂದದ ಸದಸ್ಯೆಯರಾದ ಆಕೃತಿ ಭಟ್, ಮಂಜುಳಾ ಪ್ರಭಾಕರ್, ಉಮಾ ದಿವಾಕರ್, ಸುಮತಿ ಕೆ.ಎನ್., ಪೂರ್ಣಿಮಾ ರಾವ್, ಪ್ರೇಮಾ ಕುಮಾರಿ ಪಾತ್ರ ನಿರ್ವಹಿಸಿದರು. ಹರೀಶ್ ಶೆಟ್ಟಿ ಸೂಡ, ರವಿರಾಜ ಜೈನ್, ರಾಮ ಹೊಳ್ಳ ಹಿಮ್ಮೆಳ ಒದಗಿಸಿದರು.
ಕೊನೆಯ ದಿನ ಪಾಂಚಜನ್ಯೋತ್ಪತ್ತಿ. ಶ್ರೀಕೃಷ್ಣನಾಗಿ ವೃಂದಾ ಕೊನ್ನಾರ್, ಸಾಂದೀಪನಿಯಾಗಿ ಲಲಿತಾ ಭಟ್, ಬಲರಾಮನಾಗಿ ಕಲಾವತಿ , ಯಮನಾಗಿ ಜಯಂತಿ ಹೊಳ್ಳ ಪ್ರೌಢ ಅಭಿನಯದಿಂದ ಮೆರೆದರೆ ಸುಮತಿ ಕೆ.ಎನ್. ಸದೊ½àದಿನಿಯಾಗಿ , ವೀಣಾ ಕೃಷ್ಣ ಮೂರ್ತಿ ವರುಣನಾಗಿ, ನಳಿನಿ ಮೋಹನ್ ಪಂಚಜನನಾಗಿ ಪಾತ್ರ ನಿರ್ವಹಣೆ ಮಾಡಿದರು. ಶಾಲಿನಿ ಹೆಬ್ಟಾರ್ ಭಾಗವತಿಕೆಯಲ್ಲಿ, ರಾಮ ಹೊಳ್ಳ, ಮಾ| ವರುಣ ಹೆಬ್ಟಾರ್ ಹಿಮ್ಮೇಳದಲ್ಲಿ ಸಹಕರಿಸಿದರು.
ಯಕ್ಷಪ್ರಿಯ