ರಾಜಧಾನಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನ ಕಲಾಸೇವೆ ಮಾಡುತ್ತಿರುವ “ಯಕ್ಷದೇಗುಲ’ ಸಂಸ್ಥೆ, ಪ್ರತಿ ವರ್ಷದಂತೆ ಈ ವರ್ಷವೂ “ಯಕ್ಷದೇಗುಲ ಸನ್ಮಾನ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಭಾಗವತರಾದ ಕೆಪ್ಪೆಕೆರೆ ಸುಬ್ರಾಯ ಹೆಗಡೆಯವರನ್ನು ಈ ಬಾರಿ ಸನ್ಮಾನಿಸಲಾಗುವುದು. ನಂತರ ಕೆ. ಮೋಹನ್ ನಿರ್ದೇಶನದ “ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಶತ್ರೂಪ್ರಸೂದನ ವೇಷವನ್ನು ಸಾಂಪ್ರದಾಯಿಕ ಅಕ್ಕಿಹಿಟ್ಟಿನ ಚಿಟ್ಟೆ ಇಟ್ಟ ಬಣ್ಣದ ವೇಷದ ಒಡ್ಡೋಲಗ ನಡೆಯಲಿದೆ.
ಆ ಸಮಾರಂಭದಲ್ಲಿ ಗೃಹ ನಿರ್ಮಾಣ ಮಂಡಳಿಯ ಜನರಲ್ ಮ್ಯಾನೇಜರ್ ನಾಗರಾಜ ಶೇರುಗಾರರು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ರಿಜಿಸ್ಟಾರ್ ಶಿವರುದ್ರಪ್ಪ, ಯಕ್ಷಗಾನ ವಿದ್ವಾಂಸ ಡಾ. ಆನಂದ ರಾಮ ಉಪಾಧ್ಯ ಮತ್ತು ಕೆ.ಪುರುಷೋತ್ತಮ ಅಡಿಗರು ಭಾಗವಹಿಸಲಿದ್ದಾರೆ.
ಎಲ್ಲಿ?: ನಯನ ಸಭಾಭವನ, ಜೆ.ಸಿ.ರಸ್ತೆ
ಯಾವಾಗ? ಫೆ.25, ಭಾನುವಾರ ಸಂಜೆ 6
ಹೆಚ್ಚಿನ ಮಾಹಿತಿಗೆ: 9448547237