ಯಕ್ಷಗಾನ ಗಂಡು ಕಲೆ. ಅಲ್ಲಿನ ಸ್ತ್ರೀಪಾತ್ರಗಳನ್ನು ಪುರುಷರು, ಮಹಿಳೆಯರೂ ನಾಚುವಂತೆ ನಿರ್ವಹಿಸುತ್ತಾರೆ ಎನ್ನುವ ನಂಬಿಕೆಗೆ ಪ್ರಶ್ನೆಯಾಗಿ ನಿಂತ ನಾಟಕ “ಅಕ್ಷಯಾಂಬರ’. ದ್ರೌಪದಿಯಾಗಿ ಸುರಸುಂದರವಾಗಿ ಅಲಂಕೃತಗೊಂಡ ಪುರುಷ ಸ್ತ್ರೀವೇಷಧಾರಿಗೆ, ಕೌರವನ ಪಾತ್ರದಲ್ಲಿ ಬಂದ ಸ್ತ್ರೀವೇಷಧಾರಿ ಒಂದು ಸವಾಲಾಗಿ ಕಾಡುವ ಪ್ರಸಂಗದಿಂದ ಇಡೀ ನಾಟಕ ಸೆಳೆಯುತ್ತದೆ. ಮಹಿಳೆ ಅನೇಕ ವಿಧದಲ್ಲಿ ಪುರುಷನನ್ನೂ ಮೀರಿಸುವ ಶಕ್ತಿ ಹೊಂದಿರುವಳು ಎನ್ನುವುದು ಈ ನಾಟಕದ ಪ್ರಧಾನ ತಿರುಳು. ಶರಣ್ಯ ರಾಮಪ್ರಕಾಶ್ ರಚಿಸಿ, ನಿರ್ದೇಶಿಸಿರುವ ಈ ನಾಟಕ ಈಗಾಗಲೇ ಸಾಕಷ್ಟು ಮೆಚ್ಚುಗೆ ಗಿಟ್ಟಿಸಿಕೊಂಡಿದೆ.
ಯಾವಾಗ?: ಜ.27, ಭಾನುವಾರ, ರಾ.7.30
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಪ್ರವೇಶ: 150 ರೂ.