Advertisement

ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ಯಕ್ಷಗಾನ, ಸಮ್ಮಾನ ಕಾರ್ಯಕ್ರಮ

01:32 PM Oct 23, 2018 | Team Udayavani |

ನವಿಮುಂಬಯಿ: ಘನ್ಸೋಲಿಯ ಕಾರಣಿಕ ಕ್ಷೇತ್ರ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ 46ನೇ ನವ ರಾತ್ರಿ ಮಹೋತ್ಸವದ ಅಂಗವಾಗಿ ಅ. 20ರಂದು ಹೊಟೇಲ್‌ ಫೆಡರೇ ಶನ್‌ ಆಫ್‌ ಮಹಾರಾಷ್ಟ್ರ ಇದರ ಅಧ್ಯಕ್ಷ ಜಗನ್ನಾಥ್‌ ಕೆ. ಶೆಟ್ಟಿ ಅವರ ಸೇವಾರ್ಥಕರಾಗಿ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಕಲಾವಿದರಿಂದ ತ್ರಿಜನ್ಮ ಮೋಕ್ಷ ಯಕ್ಷಗಾನ ನಡೆಯಿತು.

Advertisement

ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಂದಿರದ ಅಧ್ಯಕ್ಷ, ಧರ್ಮ ದರ್ಶಿ ಅಣ್ಣಿ ಸಿ. ಶೆಟ್ಟಿ ವಹಿಸಿದ್ದರು. ಅತಿಥಿಗಳಾಗಿ ಉಪಾಧ್ಯಕ್ಷ ನಂದಿ ಕೂರು ಜಗದೀಶ್‌ ಶೆಟ್ಟಿ, ಜತೆ ಕಾರ್ಯ ದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ, ಉದ್ಯಮಿ ಜಗನ್ನಾಥ್‌ ಕೆ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಅಶೋಕ್‌ ಸಸಿಹಿತ್ಲು ಉಪಸ್ಥಿತರಿದ್ದರು.

ದೇವಾಲಯದ ಪ್ರಧಾನ ಕಾರ್ಯ ದರ್ಶಿ ಸುರೇಶ್‌ ಕೋಟ್ಯಾನ್‌ ಸ್ವಾಗತಿಸಿ ದರು. ದೇವಾಲಯದ ವತಿಯಿಂದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಪ್ರಸಿದ್ಧ ಕಲಾವಿದ ರಾಮಚಂದ್ರ ಸಾಲ್ಯಾನ್‌ ಮತ್ತು ಯಕ್ಷ ಗಾನ ಸೇವೆ ನೀಡಿದ ಜಗನ್ನಾಥ್‌ ಕೆ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಶ್ರೀ ಗುರುನಾರಾಯಣ ಮಂಡಳಿಯ ವತಿಯಿಂದ ಭಾಗವತರಾದ ಮುದ್ದು ಅಂಚನ್‌ ಅವರು ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಕಾರ್ಯದರ್ಶಿ ಸುರೇಶ್‌ ಕೋಟ್ಯಾನ್‌ ಮತ್ತು ಜಗನ್ನಾಥ್‌ ಕೆ. ಶೆಟ್ಟಿ ಅವರನ್ನು ಗೌರವಿಸಿದರು.

ಜಗನ್ನಾಥ ಕೆ. ಶೆಟ್ಟಿ ಮಾತನಾಡಿ, 62 ವರ್ಷಗಳ ಹಿಂದೆ ಈ ಮಾಯಾನಗರಿಗೆ ಬಂದಾಗ ಹೊಟ್ಟೆ ತುಂಬ ಉಣ್ಣಲು  ಇರಲಿಲ್ಲ. ಈಗ ದೇವರು ಎಲ್ಲವನ್ನೂ ನೀಡಿದ್ದಾರೆ. ಕಳೆದ 12 ವರ್ಷಗಳಿಂದ ಮೂಕಾಂಬಿಕೆಯ ಸನ್ನಿಧಿಯಲ್ಲಿ ಕಲಾ ಸೇವೆ ಮಾಡುವ ಭಾಗ್ಯವನ್ನು ಹೊಂದಿದ್ದೇನೆ. ನನ್ನಿಂದ ಸಾಧ್ಯವಾದಷ್ಟು ಕಾಲ ಸೇವೆ ಮಾಡುತ್ತೇನೆ ಎಂದರು.

ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಮಾತನಾಡಿ,  46ನೇ ನವರಾತ್ರಿ ಉತ್ಸವವು ಎಲ್ಲರ ಸಹಕಾರ ದಿಂದ, ದಾನಿಗಳ ಸಹಯೋಗದಿಂದ ವಿಜೃಂಭಣೆಯಿಂದ ಜರಗಿದೆ. ಹತ್ತು ದಿನಗಳ ಕಾಲ ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದವನ್ನು ಸಾವಿರಾರು ಭಕ್ತರು ಸ್ವೀಕರಿಸಿದ್ದಾರೆ. ಅಲ್ಲದೆ ಪ್ರತಿ ದಿನ 1 ಗಂಟೆಯ ವಿರಾಮವೂ ಇಲ್ಲದೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿತ್ತು ಎನ್ನಲು ಸಂತೋಷವಾಗುತ್ತಿದೆ. ನವರಾತ್ರಿಯ ಯಶಸ್ಸಿಗಾಗಿ ಸಹಕರಿಸಿದ ನಿಮ ಗೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಜಗನ್ನಾಥ ಕೆ. ಶೆಟ್ಟಿ ಅವರು ನನಗೆ ಗುರುವಿಗೆ ಸಮಾನರು. ಅವರು ತುಂಬಾ ಅನುಭವಸ್ಥರು. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರು ಕಳೆದ 12 ವರ್ಷಗಳಿಂದ ಯಕ್ಷಗಾನ ಸೇವೆ ನೀಡುತ್ತಾ ಬಂದಿದ್ದಾರೆ. ನಾನು, ನನ್ನದು ಎನ್ನುವುದು ಏನೂ ಇಲ್ಲ. ನಾವು ಪರಮಾತ್ಮನ ಪಾದ ಸೇರುವಾಗ ಖಾಲಿ ಕೈಯಲ್ಲಿ ಹೋಗಬಾರದು. ಜೀವನದಲ್ಲಿ ಏನನ್ನಾದರೂ ಒಳ್ಳೆಯ ಕಾರ್ಯ ಮಾಡಿ ಹೋಗಬೇಕು. ಆಗ ನಮ್ಮ ಹೆಸರು ಚಿರವಾಗಿರುತ್ತದೆ. ಅದೇ ರೀತಿ ಜಗನ್ನಾಥ ಕೆ. ಶೆಟ್ಟಿ ಅವರು ಕಲಾ ಮಾತೆಯ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದರು.

Advertisement

ಅಶೋಕ್‌ ಸಸಿಹಿತ್ಲು ಮಾತನಾಡಿ, ನಮಗೆ ಪ್ರತೀ  ವರ್ಷ ತಾಯಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ಕಲಾ ಸೇವೆ ಮಾಡುವ ಭಾಗ್ಯ ಒದಗಿಸಿದ ಎಲ್ಲರಿಗೂ ಅಭಿನಂದನೆಗಳು. ಜಗನ್ನಾಥ ಶೆಟ್ಟಿ ಅವರು ಕಳೆದ 12 ವರ್ಷಗಳಿಂದ ಯಕ್ಷಗಾನ ಸೇವೆಯನ್ನು ನೀಡುತ್ತಿದ್ದಾರೆ. ಅವರು ನೂರು ವರ್ಷ ಬಾಳಲಿ. ಹೀಗೆಯೇ ನಿರಂತರ ಯಕ್ಷಗಾನ ಸೇವೆ ನೀಡುವ ಭಾಗ್ಯವನ್ನು ತಾಯಿ ಮೂಕಾಂಬಿಕೆ ಕರುಣಿಸಲಿ ಎಂದರು. 

ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್‌ ಕೋಟ್ಯಾನ್‌ ಅವರು ಕಾರ್ಯ ಕ್ರಮ ನಿರ್ವಹಿಸಿ ವಂದಿಸಿದರು. ಕೊನೆ ಯಲ್ಲಿ ಸೇವಾದಾರರಾದ ಜಗನ್ನಾಥ ಕೆ. ಶೆಟ್ಟಿ ಅವರ ವತಿಯಿಂದ ಅನ್ನಪ್ರಸಾದ ನಡೆಯಿತು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next