Advertisement

ಪಿಂಪ್ರಿ-ಚಿಂಚ್ವಾಡ್‌ ಬಂಟರ ಸಂಘದ ವತಿಯಿಂದ ಯಕ್ಷಗಾನ, ಸಮ್ಮಾನ

04:13 PM Sep 19, 2018 | Team Udayavani |

ಪುಣೆ: ಕರಾವಳಿ  ಕರ್ನಾಟಕದ ವಿಶ್ವವಿಖ್ಯಾತ  ಯಕ್ಷಗಾನ ಕಲೆ ಇಂದು  ವಿಶ್ವದೆÇÉೆಡೆ ಪಸರಿಸಿದೆ, ಖ್ಯಾತಿಯನ್ನು ಗಳಿಸಿದೆ. ದೇಶದ ಉದ್ದಗಲಕ್ಕೂ ಪ್ರತಿಯೊಂದು ರಾಜ್ಯದಲ್ಲೂ ಯಕ್ಷಗಾನಕ್ಕೆ ಮನ್ನಣೆ ಸಿಕ್ಕಿದೆ. ಇಂತಹ ಯಕ್ಷಗಾನದ ಬೆಳವಣಿಗೆಗೆ ಪ್ರಮುಖವಾಗಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ, ಆ ಮೂಲಕ ಉತ್ತಮ ಗುಣಮಟ್ಟದ ಯಕ್ಷಗಾನ ಪ್ರದರ್ಶನಗಳನ್ನು ನೀಡಿ ಕಲಾಭಿಮಾನಿಗಳ ಮನಗೆದ್ದ ಮಂಡಳಿಗಳ ಕಾರ್ಯ ಶ್ಲಾಘನೀಯ. ಇಂತಹ ಒಂದು ಯಕ್ಷಗಾನ ಮಂಡಳಗಳಲ್ಲಿ  ನಮ್ಮ  ಪುಣೆಯ  ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯು ಒಂದು. ಪ್ರವೀಣ್‌ ಶೆಟ್ಟಿ ಅವರು ತನ್ನ ಯಕ್ಷಗಾನ ಕಲೆಯ ಮೇಲಿನ ಪ್ರೀತಿಯಿಂದ ಪುಣೆಯಲ್ಲಿ ಒಂದು  ಮಂಡಳಿಯನ್ನು ಸ್ಥಾಪಿಸಿ ಅದರ ಮೂಲಕ ಉತ್ತಮ ಕಲಾ ಸೇವೆಯನ್ನು ಮಾಡುತ್ತಿ¨ªಾರೆ. ಇವರಿಗೆ ಪ್ರೋತ್ಸಾಹಕರಾಗಿ ಸಂಘಟಕರು ಕೂಡ ಉತ್ತಮ ಸಹಕಾರವನ್ನು ನಿಡುತ್ತಿ¨ªಾರೆ. ಕಲಾಪೋಷಕರು, ಕಲಾಭಿಮಾನಿಗಳ ಉತ್ತಮ ಸ್ಪಂದನೆ ಸಿಕ್ಕಿದೆ.  ಒಂದು ಯಕ್ಷಗಾನ ಮೇಳದಲ್ಲಿ ಉತ್ತಮ ಪ್ರಸಂಗ, ಹೆಸರಾಂತ ಕಲಾವಿದರು, ಉತ್ತಮ ಸಂಘಟಕರು ಸೇರಿದಾಗ ಯಾವ  ರೀತಿಯಲ್ಲಿ ಕಲಾಭಿಮಾನಿಗಳನ್ನು ಆಕರ್ಷಿಸುತ್ತದೆ ಎಂಬುದಕ್ಕೆ ಇಂದಿನ ಈ ಯಕ್ಷಗಾನ ಪ್ರದರ್ಶನವೇ ಉದಾಹರಣೆ ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ಕಲಾಭಿಮಾನಿಗಳ ಕರತಾಡನಡ ಮೂಲಕ ಉತ್ತಮವಾಗಿ ಮೂಡಿ   ಬಂದಿದೆ. ಪುಣೆಯಲ್ಲಿ ಪ್ರವೀಣ್‌ ಶೆಟ್ಟಿ ಮತ್ತು ತಂಡದವರು  ಯಕ್ಷಗಾನವನ್ನು ಬೆಳೆಸಿದ ರೀತಿ ನಿಜಕ್ಕೂ ಮೆಚ್ಚುವಂತಹದು ಎಂದು ಪಿಂಪ್ರಿ-ಚಿಂಚ್ವಾಡ್‌ ಬಂಟರ ಸಂಘದ ಮಾಜಿ ಅಧ್ಯಕ್ಷ  ವಿಶ್ವನಾಥ್‌ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸಿದರು

Advertisement

ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಸಾಂಸ್ಕೃತಿಕ ಸಮಿತಿಯ ಪ್ರಾಯೋಜಕತ್ವದಲ್ಲಿ, ಶ್ರೀ ಮಹಾಗಣಪತಿ  ಯಕ್ಷಗಾನ ಮಂಡಳಿಯ ಅಧ್ಯಕ್ಷ ಮತ್ತು  ಪದಾಧಿಕಾರಿಗಳ  ವ್ಯವಸ್ಥಾಪಕತ್ವದಲ್ಲಿ ಪುಣೆ  ಮಂಡಳಿಯ  ಕಲಾವಿದರು ಮತ್ತು ಊರಿನ ಅತಿಥಿ  ಕಲಾವಿದರ ಕೂಡುವಿಕೆಯಿಂದ  ಸೆ. 16ರಂದು  ನಿಗಿxಯ ಶ್ರೀ  ಕೃಷ್ಣ ಮಂದಿರದ ಸಭಾಗೃಹದಲ್ಲಿ  ಜರಗಿದ ಬೂಡುದ ಗುಳಿಗೆ  ಎಂಬ ತುಳು ಯಕ್ಷಗಾನ ಪ್ರದರ್ಶನದ ಮಧ್ಯಾಂತರದಲ್ಲಿ ಜರಗಿದ  ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು,  ಯಕ್ಷಗಾನ ಕಲೆಯನ್ನು ನಮ್ಮ ಯುವ ಜನತೆಯು  ತಿಳಿಯಬೇಕು ಮತ್ತು ಕಲಿಯಬೇಕು ಹಾಗೂ ಪ್ರೋತ್ಸಾಹಿಸಬೇಕು. ಆಗ ನಿರಂತರ ಕಾರ್ಯಕ್ರಮಗಳು ನಡೆಸಲು ಸಾಧ್ಯ. ಯಕ್ಷಗಾನ ಕಲೆ ಎಂಬುವುದು ಅದೊಂದು ಸೇವೆಯ ತರಹದಲ್ಲಿಯೇ ದೇವರಿಗೆ  ಅರ್ಪಣೆ ಎಂಬ ಭಾವ ನಮ್ಮಲ್ಲಿದೆ. ಯಕ್ಷಗಾನಕ್ಕೆ ಪವಿತ್ರತೆ, ಭಕ್ತಿ ಎಂಬುವುದಿದೆ. ಅದ್ದರಿಂದ  ಇದೊಂದು ಪಾವಿತ್ರ್ಯತೆಯಿಂದ ಕೂಡಿದ ಕಲಾಸೇವೆಯೂ ಹೌದು ಎಂದರು.

ಯುವ ಭಾಗವತ ಯೋಗೇಶ್‌ ಆಚಾರ್ಯರವರ  ಭಾಗವತಿಕೆ,  ಆನಂದ ಶೆಟ್ಟಿ ಇನ್ನರವರ ಮದ್ದಳೆ ಮತ್ತು ಪ್ರವೀಣ್‌ ಅವರ ಚೆಂಡೆಯ  ಹಿಮ್ಮೇಳದೊಂದಿಗೆ   ಪುಣೆ ಮಂಡಳಿಯ  ಕಲಾವಿದರಾದ  ಉದಯಕುಮಾರ್‌ ಅಡ್ಯನಡ್ಕ ಶ್ರೀನಿವಾಸ್‌ ರೈ ಕಡಬ, ರಘುನಾಥ್‌ ಪೂಜಾರಿ ನಲ್ಲೂರು, ಸುಧೀರ್‌ ಶೆಟ್ಟಿ ಕುಕ್ಕುಂದೂರು, ಅತಿಥಿ ಕಲಾವಿದರಾದ ಅಕ್ಷಯ್‌, ಸಿ. ಕೆ. ಪ್ರಶಾಂತ್‌, ರಘುರಾಮ ಕಾವೂರು, ಪ್ರಸಾದ್‌ ಸವಣೂರು, ವಸಂತ ಗೌಡ, ಸುರೇಶ್‌ ಸುರತ್ಕಲ್‌, ಸತೀಶ್‌ ಕಡಂಬಾರು, ರವಿ ಹಾಗೂ ಇನ್ನಿತರ ಉದಯೋನ್ಮುಖ   ಕಲಾವಿದರು ಪಾಲ್ಗೊಂಡಿದ್ದರು.

ಯಕ್ಷಗಾನದ ಮಧ್ಯಾಂತರದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಪಿಂಪ್ರಿ ಬಂಟರ ಸಂಘದ ಅಧ್ಯಕ್ಷ ಮಹೇಶ್‌ ಹೆಗ್ಡೆ ಕಟ್ಟಿಂಗೇರಿ ಅವರು ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ  ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಅವರನ್ನು  ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಸಮ್ಮಾನಿಸಿದರು. ಯಕ್ಷಗಾನ ಭಾಗವತ ಯೋಗೇಶ್‌ ಆಚಾರ್ಯ, ಕಲಾವಿದ ಉದಯ ಕುಮಾರ್‌ ಅಡ್ಯನಡ್ಕ ಅವರನ್ನು ಅಭಿನಂದಿಸಿದರು.  ಕಾರ್ಯಕ್ರಮದ ಯಶಸ್ವಿಗೆ ಪಿಂಪ್ರಿ-ಬಂಟರ ಸಂಘದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ ಶೆಟ್ಟಿ ಪೆರ್ಡೂರು  ಮತ್ತು ಪದಾಧಿಕಾರಿಗಳು ಸಹಕರಿಸಿದರು.

ಪಿಂಪ್ರಿ-ಚಿಂಚಾÌಡ್‌ ಹೊಟೇಲ್‌ ಅಸೋಸಿಯೇಶನ್‌ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪಿಂಪ್ರಿ-ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ನಾರಾಯಣ ಶೆಟ್ಟಿ ಎರ್ಮಾಳ್‌, ಸೀತಾರಾಮ್‌ ಶೆಟ್ಟಿ ಎರ್ಮಾಳ್‌, ಉಪಾಧ್ಯಕ್ಷ ವಿಜಯ ಶೆಟ್ಟಿ, ಸಂಘದ ಪ್ರಮುಖರಾದ ರಮೇಶ್‌ ಡಿ. ಶೆಟ್ಟಿ, ಕಾರ್ಯದರ್ಶಿ ದಿನೇಶ್‌ ಶೆಟ್ಟಿ ಬಜೆಗೋಳಿ, ಕೋಶಾಧಿಕಾರಿ ಸಂತೋಷ್‌ ಶೆಟ್ಟಿ, ಅವಿನಾಶ್‌ ಶೆಟ್ಟಿ ಮತ್ತು  ಹವ್ಯಾಸಿ ಕಲಾವೃಂದ ಪಿಂಪ್ರಿ ಇವರು ಉಪಸ್ಥಿತರಿದ್ದರು. ಪುಣೆ  ಮಂಡಳಿಯ  ಕೋಶಾಧಿಕಾರಿ ಶ್ರೀಧರ ಶೆಟ್ಟಿ ಕÇÉಾಡಿ, ರಾಮಣ್ಣ ರೈ ಪುತ್ತೂರು ಮತ್ತು ಗೋವರ್ಧನ್‌ ಶೆಟ್ಟಿ ಅವರು ಸಹಕರಿಸಿದರು. ಕಲಾ ಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

Advertisement

ಯಕ್ಷಗಾನ ನನ್ನ ಪ್ರೀತಿಯ ಕಲೆ. ಪುಣೆಯಲ್ಲಿ ಪ್ರವೀಣ್‌   ಶೆಟ್ಟಿಯವರು ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ ಅ ಮೂಲಕ ಹಲವಾರು ಪ್ರದರ್ಶನಗಳನ್ನು ಏರ್ಪಡಿಸಿ ಪುಣೆಯ ಮತ್ತು  ಪಿಂಪ್ರಿಯ ಕಲಾಭಿಮಾನಿಗಳಿಗೆ ಯಕ್ಷಗಾನದ ರಸದೌತಣವನ್ನು ನೀಡುತ್ತಾ ಬಂದಿ¨ªಾರೆ. ತನ್ನ ವ್ಯಯಕ್ತಿಕ, ವ್ಯಾಪಾರದ ಜಂಜಾಟದ ನಡುವೆಯೂ ಯಕ್ಷಗಾನದ ಮೇಲಿನ ಪ್ರೀತಿಯಿಂದ ಜನರ ಅಪೇಕ್ಷೆಗೆ ತಕ್ಕಂತೆ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ಅವರ ಸಾದನೆ ಕಡಿಮೆಯಲ್ಲ. ಅಂತಹ  ಓರ್ವ ಅಪ್ಪಟ ಕಲಾ ಪ್ರೇಮಿಯ ಯಕ್ಷಗಾನ ಮಂಡಳಿಯ ಒಂದು ಪ್ರದರ್ಶನವನ್ನು  ಪಿಂಪ್ರಿಯಲ್ಲಿ ನನ್ನ ಅಧ್ಯಕ್ಷತೆಯ ಸಮಯದಲ್ಲಿ ಏರ್ಪಡಿಸಬೇಕು ಎಂಬ ಮಹದಾಸೆ  ನನ್ನದಾಗಿತ್ತು. ಅದು ಇಂದು ಉತ್ತಮ ಪ್ರಸಂಗದೊಂದಿಗೆ ತುಂಬಿದ  ಕಲಾಭಿಮಾನಿಗಳನ್ನು ಮನ ತೃಪ್ತಿಯಂತೆ ನಡೆದಿದೆ ಎಂದು ಭಾವಿಸುತ್ತೇನೆ. ಪ್ರವೀಣ್‌ ಶೆಟ್ಟಿ ಅವರ ಯಕ್ಷಕಲಾ ಸೇವೆಗೆ ಯಶಸ್ಸನ್ನು ಬಯಸುತ್ತೇನೆ.
– ಮಹೇಶ್‌ ಹೆಗ್ಡೆ ಕಟ್ಟಿಂಗೇರಿ,
ಅಧ್ಯಕ್ಷರು, ಬಂಟರ ಸಂಘ,ಪಿಂಪ್ರಿ -ಚಿಂಚ್ವಾಡ್‌

ಪುಣೆಯಲ್ಲಿ ಅಸಂಖ್ಯಾತ ಯಕ್ಷಗಾನ ಕಲಾಭಿಮಾನಿಗಳಿದ್ದಾರೆ ಎಂಬ ಉದ್ದೇಶದಿಂದ  ಒಂದು ಯಕ್ಷಗಾನ ಮಂಡಳಿಯನ್ನು ಕಟ್ಟಿದ್ದೇವೆ. ಈ ಮೂಲಕ ಉತ್ತಮವಾದ ಪ್ರಸಂಗಗಳನ್ನು ಆಯ್ದು, ಕಲಾಭಿಮಾನಿಗಳ ಅಭಿರುಚಿಗೆ ತಕ್ಕಂತ ಹಲವಾರು ಪ್ರದರ್ಶನಗಳು ಮಂಡಳಿಯ ಮೂಲಕ ನಡೆದು ಯಶಸ್ಸನ್ನು ಗಳಿಸಿದೆ. ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಅಧ್ಯಕ್ಷರಾದ ಮಹೇಶ್‌ ಹೆಗ್ಡೆ ಅವರು  ಕೂಡಾ ನಮ್ಮ ಮಂಡಳಿಯು ಒಂದು ಯಕ್ಷಗಾನವನ್ನು ಆಡಿಸಬೇಕು ಎಂಬ ಕೆಲವು ದಿನಗಳ ಬೇಡಿಕೆಯಂತೆ ಇಂದು ಪ್ರದರ್ಶನ ನಡೆಯುತ್ತಿದೆ. ತುಂಬಿ ತುಳುಕಿದ ಸಭಾಂಗಣವನ್ನು ನೋಡಿದಾಗ ಹೃದಯ  ತುಂಬಿ ಬಂದಿದೆ.  ಮುಂದೆಯೂ ಈ ಮಂಡಳಿಯ ಪ್ರದರ್ಶನವನ್ನು   ಅಡಿಸುವಂತಾಗಬೇಕು. ಯಕ್ಷಗಾನವನ್ನು ಉಳಿಸಿ ಬೆಳೆಸಬೇಕು ಎಂಬ ಮಹದಾಸೆ ನನ್ನದು.ಇಂದಿನ ಈ ಪ್ರದರ್ಶನದ ಪ್ರಾಯೋಜಕರಾದ ಪಿಂಪ್ರಿ-ಬಂಟರ ಸಂಘದ ಅಧ್ಯಕ್ಷ ಮಹೇಶ ಹೆಗ್ಡೆ ಮತ್ತು ಅವರ ಎಲ್ಲ ಪದಾಧಿಕಾರಿಗಳಿಗೆ  ನಾನು ಆಭಾರಿಯಾಗಿದ್ದೇನೆ ಎಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು ಹೇಳಿದರು.
 
ವರದಿ:ಹರೀಶ್‌ ಮೂಡಬಿದ್ರೆ

Advertisement

Udayavani is now on Telegram. Click here to join our channel and stay updated with the latest news.

Next