Advertisement

Yakshagana: ಖ್ಯಾತ ಪ್ರಸಂಗಕರ್ತ ಅಗರಿ ಭಾಸ್ಕರ ರಾವ್ ನಿಧನ

04:31 PM Dec 31, 2023 | Team Udayavani |

ಬೆಂಗಳೂರು: 30ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಂಗಕ್ಕೆ ನೀಡಿದ ಅಗರಿ ಭಾಸ್ಕರ ರಾವ್(76)ಭಾನುವಾರ (ಡಿ. 31) ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ.

Advertisement

ಯಕ್ಷಗಾನದ ಪ್ರಸಿದ್ಧ ಭಾಗವತರಾಗಿದ್ದ ಅಗರಿ ಶ್ರೀನಿವಾಸ ಭಾಗವತರ ಹಿರಿಯ ಪುತ್ರರಾದ ರಘುರಾಮ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ, ಕಲೆ-ಸಾಹಿತ್ಯದ ಮೇಲಿನ ಅಪಾರ ಆಸಕ್ತಿಯಿಂದ ಪ್ರಸಿದ್ಧ ತಂದೆಯ ಇನ್ನೊಂದು ಪ್ರವೃತ್ತಿಯಾದ ಪ್ರಸಂಗ ರಚನೆಯನ್ನು ಮುಂದುವರಿಸಿಕೊಂಡು ಹೋದರು.

ಕ್ಷೇತ್ರ ಮಹಾತ್ಮೆಗಳನ್ನು ಬರೆಯುವಲ್ಲಿ ಸಿದ್ಧಹಸ್ತರಾಗಿದ್ದರು. ಶ್ರೀ ವಿಶ್ವಕರ್ಮ ಮಹಾತ್ಮೆ,ಶ್ರೀಹರಿ ಲೀಲಾರ್ಣವ,ಶ್ರೀದೇವಿ ತ್ರಿಕರ್ಣೇಶ್ವರೀ ಮಹಾತ್ಮೆ, ಶ್ರೀ ಗುಂಡುಬಾಳ ಕ್ಷೇತ್ರ ಮಹಾತ್ಮೆ,ರಾಣಿ ಅಪ್ರಮೇಯಿ ಸೇರಿದಂತೆ ಅವರ ಹಲವು ಪ್ರಸಂಗಗಳು ರಂಗದಲ್ಲಿ ವಿಜೃಂಭಿಸಿವೆ. ತುಳು ಭಾಷೆಯಲ್ಲೂ ಪ್ರಸಂಗ ರಚಿಸಿದ್ದಾರೆ.

2018ರಲ್ಲಿ ‘ಯಕ್ಷಗಾನ ಪ್ರಸಂಗ ದಶಕ’ ಶೀರ್ಷಿಕೆಯಲ್ಲಿ ಡಾ. ಪಾದೆಕಲ್ಲು ವಿಷ್ಣು ಭಟ್ಟರ ಸಂಪಾದಕತ್ವದಲ್ಲಿ ಹತ್ತು ಪ್ರಸಂಗಗಳಗುಚ್ಛ ಪ್ರಕಟವಾಗಿತ್ತು. ಅದರ ಮಾರಾಟದಿಂದ ಬಂದ ಹಣವನ್ನು ಕಲಾವಿದರ ಕ್ಷೇಮ ಚಿಂತನೆಗೆ ಕೆಲಸ ಮಾಡುವ ಉಡುಪಿಯ ಯಕ್ಷಗಾನ ಕಲಾರಂಗಕ್ಕೆ ಸಮರ್ಪಿಸಿದ್ದರು. ಅವರು ಪತ್ನಿ ,ಪುತ್ರ,ಪುತ್ರಿಯನ್ನು ಅಗಲಿದ್ದಾರೆ.ಕಲಾರಂಗದ ಸಂಸ್ಥೆಯ ಆಜೀವ ಸದಸ್ಯರಾದ ಭಾಸ್ಕರ್ ರಾವ್ ಅವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಸೇರಿ ಕಲಾವಿದರು, ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next