ನವಿಮುಂಬಯಿ: ಕಲಾವಿದರನ್ನು ಗೌರವಿಸುವ ಕೆಲಸ ಅರ್ಥಪೂರ್ಣವಾಗಿದೆ. ಅಜೆ ಕಾರು ಕಲಾಭಿಮಾನಿಗಳ ಬಳಗ ಮುಂಬಯಿ ಯಲ್ಲಿ ಕಲಾಸೇವೆ ಮಾಡುವುದರೊಂದಿಗೆ ಕಲಾವಿದರನ್ನು, ಕಲಾಪೋಷಕರನ್ನು ಗುರುತಿಸಿ ಸಮ್ಮಾನಿಸುತ್ತಾ ಬರುತ್ತಿದೆ. ಯಕ್ಷಗಾನವನ್ನು ಉಳಿಸಿ- ಬೆಳೆಸುವಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಕಾರ್ಯ ಅಭಿನಂದನೀಯ ಎಂದು ನೆರೂಲ್ ಶ್ರೀ ಶನೀಶ್ವರ ಮಂದಿರದ ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಅವರು ನುಡಿದರು.
ಅ.24 ರಂದು ಐರೋಲಿಯ ಹೆಗ್ಗಡೆ ಭವನದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ನಡೆದ ಕೊರªಬ್ಬು ಬಾರಗ ಯಕ್ಷ ಗಾನ ಪ್ರದರ್ಶನದ ಮಧ್ಯೆ ನಡೆದ ಸಮ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಕಲಾವಿ ದರಿಗೆ ಕಲಾಭಿಮಾನಿಗಳೇ ಆಸ್ತಿಯಾಗಿದ್ದು, ಓರ್ವ ಕಲಾವಿದನನ್ನು ಬೆಳೆಸುವ ಜವಾಬ್ದಾರಿ ಕಲಾಭಿಮಾನಿಗಳಿಗಿದೆ. ಅಜೆಕಾರು ಬಾಲಕೃಷ್ಣ ಶೆಟ್ಟಿ ಓರ್ವ ಕಲಾವಿದರಾಗಿದ್ದುಕೊಂಡು, ಕಲೆ- ಕಲಾವಿದರನ್ನು ಪೋಷಿಸುವ ಕಾರ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ತೊಡಗಿರುವುದು ನಿಜವಾಗಿಯೂ ಅಭಿನಂದನೀಯ ಎಂದರು.
ಸಮ್ಮಾನ
ಸಮಾರಂಭದಲ್ಲಿ ಹಿರಿಯ ರಂಗಕರ್ಮಿ ವಿ. ಕೆ. ಸುವರ್ಣ ಮತ್ತು ಕಲಾವಿದ-ಕಲಾಪೋಷಕ ಚಂದ್ರಹಾಸ ಶೆಟ್ಟಿ ದೆಪ್ಪುಣಿಗುತ್ತು ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ ಬಿ. ಹೆಗ್ಡೆ ಅವರು ಮಾತನಾಡಿ, ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಊರಿನ ಕಲಾವಿದರನ್ನು ಆಹ್ವಾನಿಸಿ ಇಲ್ಲಿ ಅವರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ, ಮುಂಬಯಿಯಲ್ಲಿ ನಿರಂತರವಾಗಿ ಯಕ್ಷಗಾನವನ್ನು ಪ್ರದರ್ಶಿಸಿ ಯಕ್ಷಪ್ರೇಮಿಗಳಿಗೆ ಯಕ್ಷಸವಿಯನ್ನು ಉಣಿಸುತ್ತಿದ್ದಾರೆ. ಅವರ ಇಂತಹ ಕಾರ್ಯಕ್ರಮಗಳಿಗೆ ಎಲ್ಲರು ತುಂಬು ಹೃದಯದಿಂದ ಸಹಕರಿಸಬೇಕು. ಹೆಗ್ಗಡೆ ಸೇವಾ ಸಂಘವು ಕಲಾಕ್ಷೇತ್ರಕ್ಕೆ ಸದಾ ಸಹಕಾರವನ್ನು ನೀಡುತ್ತಾ ಬಂದಿದೆ. ಭವಿಷ್ಯದಲ್ಲೂ ಇದು ಮುಂದುವರಿಯಲಿದೆ ಎಂದರು.
ಗೌರವ ಅತಿಥಿಗಳಾಗಿ ಥಾಣೆ ಬಂಟ್ಸ್ ಅಸೋಸಿಯೇಶನ್ ಜೊತೆ ಕೋಶಾಧಿಕಾರಿ ಚಂದ್ರಶೇಖರ್ ಎಸ್. ಶೆಟ್ಟಿ, ಕನ್ನಡ ಸಂಘ ವರ್ತಕ್‌ನಗರ ಥಾಣೆ ಅಧ್ಯಕ್ಷ ಜಯಂತ್ ಎನ್. ಶೆಟ್ಟಿ, ನವಿಮುಂಬಯಿ ಹೊಟೇಲ್ ಓನರ್ ಅಸೋಸಿಯೇಶನ್ ಅಧ್ಯಕ್ಷ ದಯಾನಂದ ಶೆಟ್ಟಿ, ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಕನ್ನಡ ಸಂಘ ಬಾಲ್ಕುಮ್ ಥಾಣೆ ಅಧ್ಯಕ್ಷ ಮನೋಜ್‌ಕುಮಾರ್ ಎಲ್. ಹೆಗ್ಡೆ, ಅಯ್ಯಪ್ಪ ಭಕ್ತ ಮಂಡಳಿ ಚಾರಿಟೇಬಲ್ ಟ್ರಸ್ಟ್ ನೆರೂಲ್ ಉಪಾಧ್ಯಕ್ಷ ಪ್ರಭಾಕರ ಎಸ್. ಹೆಗ್ಡೆ, ರಾಜಲಕ್ಷಿ¾ ಹಾಸ್ಪಿಟಾಲಿಟಿ ರಸಾಯನಿ ಆಡಳಿತ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಕುಕ್ಕುಂದೂರು, ಉದ್ಯಮಿಗಳಾದ ಮೇಘರಾಜ್ ಶೆಟ್ಟಿ ಸಾನಾ³ಡಾ, ನವಿಮುಂಬಯಿ ಶಿವಾಜಿ ಶೆಟ್ಟಿ. ರಾಘವೇಂದ್ರ ಎಂಟರ್‌ಪ್ರೈಸಸ್ ಘನ್ಸೋಲಿ ಮಾಲಕ ರಾಜೇಂದ್ರ ಎಸ್. ಶೆಟ್ಟಿ, ಉದ್ಯಮಿ ಆನಂದ ಬಂಗೇರ ಬಜ್ಪೆ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.
ಸಮ್ಮಾನಿತರ ಅಭಿನಂದನಾ ಭಾಷಣವನ್ನು ರಂಗನಟ ರವಿ ಎಸ್. ಹೆಗ್ಡೆ ಹೆರ್ಮುಂಡೆ ಅವರು ಮಾಡಿದರು. ಕವಿ ಲಕ್ಷಿ¾à ನಾರಾಯಣ ರೈ ಹರೇಕಳ ಅವರು ಸಮ್ಮಾನ ಪತ್ರ ವಾಚಿಸಿದರು. ರಂಗನಟ, ನಿರ್ದೇಶಕ ಅನಿಲ್ ಕುಮಾರ್ ಹೆಗ್ಡೆ ಪೆರ್ಡೂರು ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಅತಿಥಿಗಳನ್ನು ಗೌರವಿಸಿದರು.
ಇದು ನನ್ನ ಕಲಾಸೇವೆಗೆ ಸಂದ ಗೌರವವಾಗಿದೆ ಎಂದು ಪರಿಗಣಿಸಿ ಸಮ್ಮಾನವನ್ನು ಸ್ವೀಕರಿಸುತ್ತಿದ್ದೇನೆ. ಕಲಾಕ್ಷೇತ್ರದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಸೇವೆ ಅಭಿಮಾನ ಪಡುವಂಥದ್ದಾಗಿದೆ. ಯಾವುದೆ ವ್ಯಕ್ತಿಗೆ ಕಲೆ ಮತ್ತು ಕಲಾವಿದರ ಬಗ್ಗೆ ಇರುವ ಕಾಳಜಿಯಿಂದ ಮಾತ್ರ ಇಂತಹ ಕಾರ್ಯಕ್ರಮಗಳು ನಡೆಯಲು ಸಾಧ್ಯ. ಬಳಗದ ಕಲಾಸೇವೆಗೆ ಕಲಾಭಿಮಾನಿಗಳ, ಕಲಾಪೋಷಕರ ಸಹಕಾರ ಸದಾಯಿರಲಿ.
– ವಿ. ಕೆ. ಸುವರ್ಣ, ಸಮ್ಮಾನಿತರು
ಈ ಸಮ್ಮಾನ ನನ್ನ ಕಲಾಜೀವನಕ್ಕೆ ಪ್ರೇರಣೆಯಾಗಿದೆ. ಇನ್ನಷ್ಟು ಕಲಾಸೇವೆ ಮಾಡಲು ಕಲಾಮಾತೆಯ ಅನುಗ್ರಹ ಈ ಸಮ್ಮಾನದಿಂದ ಸಿಕ್ಕಂತಾಗಿದೆ. ಅಜೆಕಾರು ಕಲಾಭಿಮಾನಿ ಬಳಗವು ಕಲೆಯೊಂದಿಗೆ ಕಲಾವಿದರನ್ನು ಬೆಳೆಸುತ್ತಿದೆ. ಊರಿನ ಯುವ ಪ್ರತಿಭೆಗಳಿಗೆ ಇಲ್ಲಿ ಅವಕಾಶವನ್ನಿತ್ತು ಅವರ ಪ್ರತಿಭೆಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿರುವುದು ಅಭಿನಂದನೀಯ. ಅವರ ಇಂತಹ ಸೇವೆ ಹೀಗೆಯೇ ಮುಂದುವರಿಯಲಿ.
– ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ, ಸಮ್ಮಾನಿತರು
ಚಿತ್ರ-ವರದಿ : ಸುಭಾಷ್ ಶಿರಿಯಾ