ಶಿರಸಿ: ಯಕ್ಷಗಾನ ಸಾಹಿತ್ಯ, ಕಲಾ ಪ್ರದರ್ಶನಕ್ಕೆ ಸಂಬಂಧಿಸಿ ಕನ್ನಡ ಸಾಹಿತ್ಯ ಪರಿಷತ್ ಜೊತೆಯಾಗಿ ನಿಲ್ಲಲಿದೆ ಎಂದು ಕಸಾಪ ರಾಜ್ಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸಾಹಿತಿ ಶೇಖರ ಗೌಡ ಮಾಲಿ ಪಾಟೀಲ್ ಹೇಳಿದರು.
ಇವರು ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ, ಯಕ್ಷಗಾನ ಸಾಹಿತ್ಯ ಕೂಡ ಕನ್ನಡದ ಸಾಹಿತ್ಯ. ಈ ಬಗ್ಗೆ ಪರಿಷತ್ ಆಸಕ್ತಿ ವಹಿಸಲಿದೆ ಎಂದು ಭರವಸೆ ನೀಡಿದರು.
ಕನ್ನಡದ ಹಿರಿಮೆ ಗರಿಮೆಯ ಪ್ರತೀಕವಾದ ಕನ್ನಡ ಸಾಹಿತ್ಯ ಪರಿಷತ್ ನ್ನು ಮುನ್ನೆಡಸಲು ಸಮರ್ಥ ನಾಯಕತ್ವ ಯಕ್ಷಗಾನ ಅವಶ್ಯಕತೆ ಇದೆ. ಆದ್ದರಿಂದ ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಕಣಕ್ಕೆ ಇಳಿದಿದ್ದೇನೆ ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷನಾಗಿ ಎರಡು ಅವಧಿ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅನುಭವ ನನಗಿದೆ. ಅದಲ್ಲದೇ 11 ಕೃತಿ ಗಳನ್ನು ರಚಿಸಿ ನಾಡಿಗೆ ನೀಡಿದ್ದೆನೆ. ಕನ್ನಡ ಸಾಹಿತ್ಯ ಪರಿಷತ್ ಒಂದೊಂದು ಭವ್ಯ ಪರಂಪರೆಯ ಸಂಸ್ಥೆ. ಕನ್ನಡ ನಾಡು ನುಡಿಯ ಪ್ರತೀಕವಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್. ಈ ಕನ್ನಡ ಸಾಹಿತ್ಯ ಪರಿಷತ್ತನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಕನಸು ನನ್ನದಾಗಿದೆ. ಕನ್ನಡ ವಿಶ್ವ ಕನ್ನಡವಾಗಿ ಭಾಷೆಯಾಗಬೇಕೆಂಬ ಕನಸುಳ್ಳ ನನಗೆ ಮತ ನೀಡಿ ಕನ್ನಡ ನಾಡು ನುಡಿಯ ಸೇವೆ ಮಾಡಲು ಮತದಾರರು ಮತದಾನ ಮೂಲಕ ಅವಕಾಶ ನೀಡಬೇಕು ಎಂದರು.
ಇದನ್ನೂ ಓದಿ: ಇನ್ನು ಮುಂದೆ ಬಸ್ ನಲ್ಲಿ ಪ್ರಯಾಣಿಕರು ಮೊಬೈಲ್ ನಲ್ಲಿ ಹಾಡು ಹಾಕುವಂತಿಲ್ಲ: ಆದೇಶ
ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಉತ್ಸವ ಮೂರ್ತಿ ಗಳನ್ನಾಗಿಸದೇ, ವರ್ಷವಿಡಿ ಅವರ ಕ್ರಿಯಾಶೀಲತೆ ಯನ್ನು ಪರಿಷತ್ತು ರಾಜ್ಯದ ವಿವಿಧೆಡೆ ಬಳಸಿಕೊಳ್ಳುವಂತೆ ಮಾಡುತ್ತೇವೆ.ಕನ್ನಡ ನಿಧಿ ಪರಿಷತ್ತಿನ ನಿಬಂಧನೆ 38 ಎ ಸ್ಥಾಯಿ ನಿಧಿ ಸ್ಥಾಪನೆ ನನ್ನ ಉದ್ದೇಶವಾಗಿದೆ.ಪ್ರತಿ ವರ್ಷ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಸಾಹಿತ್ಯ ಸಾಂಸ್ಕೃತಿಕ ಸಮಾವೇಶ ನಡೆಸುತ್ತೇವೆ. ಉತ್ತರ ಕರ್ನಾಟಕ ಭಾಗಕ್ಕೆ ಒಂದು ಬಾರಿ ಅವಕಾಶ ಕೊಡಿ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಧರಣೇಂದ್ರ ಕುರಕುರಿ , ಆರ್ ಜಿ ಹಳ್ಳಿ ನಾಗರಾಜ್, ಎನ್ ಶಿವಕುಮಾರ್ ಉಪಸ್ಥಿತರಿದ್ದರು.