Advertisement

ಪುಟಾಣಿಗಳಿಂದ ಯಕ್ಷಗಾನ ಕಾಳಿಂಗ ಮದ‌ìನ-ಶಕಟ ಧೇನುಕಾಸುರ ವಧೆ

08:46 PM May 16, 2019 | sudhir |

ಪೆರ್ಲ: ಕುಂಟಾಲು ಮೂಲೆ ರವೀಶ ಅವರ ನೂತನ ಗೃಹ ಪ್ರವೇಶ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ವೀಕ್ಷಣೆಗಾಗಿ ಚಿರಂಜೀವಿ ಯಕ್ಷಗಾನ ಕಲಾಸಂಘದ ಬಾಲ ಕಲಾವಿದರಿಂಧ ಮೇ 13ರಂದು ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.

Advertisement

ಸುಮಾರು 5 ವರ್ಷದಿಂದ 15ವರ್ಷ ಪ್ರಾಯದವರೆಗಿನ ಪುಟಾಣಿ ಮಕ್ಕಳು ಪ್ರದರ್ಶಿಸಿದ ಯಕ್ಷಗಾನ “ಕಾಳಿಂಗ ಮರ್ಧನ -ಶಕಟ ಧೇನುಕಾಸುರ ವಧೆ‡ ಯು ನೆರೆದ ಪ್ರೇಕ್ಷಕರನ್ನು ಯಕ್ಷಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು.

ಹಿರಿಯ ಕಲಾವಿಧರಿಂದ ತಾವೇನೂ ಕಡಿಮೆ ಇಲ್ಲ ಎಂಬಂತೆ ನಾಟ್ಯದಲ್ಲೂ , ಸಂಭಾಷಣೆಯಲ್ಲಿಯೂ ಈ ಮಕ್ಕಳು ಪ್ರೌಢಿಮೆ ಮೆರೆದರು.

ಕರ್ನಾಟಕ ಜಾನಪದ ಲೋಕ ಪ್ರಶಸ್ತಿ ಪುರಸ್ಕೃತ, ಖ್ಯಾತ ನಾಟ್ಯ ಗುರು ಜಯರಾಮ ಪಾಟಾಳಿ ಪಡುಮಲೆ ಇವರ ಗರಡಿಯಲ್ಲಿ ಪಳಗಿದ ಮಕ್ಕಳು ತಮ್ಮ ಶ್ರೇಷ್ಠ ಪ್ರದರ್ಶನದಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಗುರುವಂದನೆ
ಭಾಗವತಿಕೆ ಮನೋಹರ ಬಳ್ಳಾಲ್‌ ಅಡ್ವಾಳ ,ಚೆಂಡೆ ಅಂಬೆಮೂಲೆ ಶಿವಶಂಕರ ಭಟ್‌,ಮದ್ದಳೆ ಮಹಾಲಿಂಗ ಮಲ್ಲ, ಚಕ್ರತಾಳ ದಯಾನಂದ ತಲ್ಪಣಾಜೆ ಇವರು ಹಿಮೇಳದಲ್ಲಿ ಸಾಥ್‌ ನೀಡಿದರು.

Advertisement

ಇದೇ ಸಂದರ್ಭದಲ್ಲಿ ಬಾಲಕಲಾವಿಧ ನವನೀತ್‌ ಹಾಗೂ ರಕ್ಷಕರಾದ ಶೀನ ನಾಯ್ಕ, ಜಯಂತಿ, ರವೀಶ ಕುಂಟಾಲು, ಮಮತಾ ರವೀಶ ಇವರು ನಾಟ್ಯಗುರು ಜಯರಾಮ ಪಾಟಾಳಿ ಪಡುಮಲೆ ಇವರಿಗೆ ಶಾಲು ಹೊದೆಸಿ ಫಲಪುಷ್ಪ ನೀಡಿ ಗುರುವಂದನೆ ಸಲ್ಲಿಸಿ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next