Advertisement

ಯಕ್ಷಗಾನ ಕಲಾರಂಗ: ವಿದ್ಯಾರ್ಥಿನಿಗೆ 16ನೇ ಮನೆ ಹಸ್ತಾಂತರ

11:21 PM Jun 06, 2019 | sudhir |

ಉಡುಪಿ: ಯಕ್ಷಗಾನ ಕಲೆ ಹಾಗೂ ಕಲಾವಿದರ ಕ್ಷೇಮ ಚಿಂತನೆಯ ಜತೆಗೆ ಬಡ ವಿದ್ಯಾರ್ಥಿಗಳ ಬದುಕಿಗೆ ನೆಮ್ಮದಿ ನೀಡುವ ಸಮಾಜಮುಖೀ ಚಿಂತನೆ ಮೂಲಕ ಯಕ್ಷಗಾನ ಕಲಾರಂಗ ಆದರ್ಶ ಸಂಸ್ಥೆಯಾಗಿ ಬೆಳೆದು ನಿಂತಿದೆ. ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದಲ್ಲಿ ಪ್ರೌಢ ಶಿಕ್ಷಣ ಪಡೆದ ಪ್ರತಿಭಾನ್ವಿತರ ಬಾಳಿಗೆ ಬೆಳಕಾಗಿರುವ ಯಕ್ಷಗಾನ ಕಲಾರಂಗದ ಕಾರ್ಯ ಸ್ತುತ್ಯರ್ಹವಾದುದು ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.

Advertisement

ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾಪೋಷಕ್‌ ವಿದ್ಯಾರ್ಥಿನಿ ಪವಿತ್ರಾಳಿಗೆ ಪೆರ್ಡೂರಿನಲ್ಲಿ ಪಂಚಮಿ ಟ್ರಸ್ಟ್‌ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆಯನ್ನು ಜೂ.5 ರಂದು ಅವರು ಉದ್ಘಾಟಿಸಿ ಮಾತನಾಡಿದರು.

ಗಾಂಧಿ ಆಸ್ಪತ್ರೆಯನ್ನು 25 ವರ್ಷಗಳ ಹಿಂದೆ ಉದ್ಘಾಟಿಸಿದ ಪುತ್ತಿಗೆ ಶ್ರೀಗಳಿಂದಲೇ ಈ ಮನೆ ಉದ್ಘಾಟನೆಗೊಂಡಿರುವುದು ನಮ್ಮ ಸುಯೋಗ. ಬೆಳ್ಳಿಹಬ್ಬದ ಈ ವರ್ಷದಲ್ಲಿ ಪ್ರತಿ ತಿಂಗಳ 5ನೇ ತಾರೀಕಿನಂದು ಸಮಾಜಮುಖೀ ಕೆಲಸ ಮಾಡುವುದು ನನ್ನ ಯೋಚನೆ ಇಂದು ಸಾರ್ಥಕತೆಯನ್ನು ಪಡೆಯಿತು ಎಂದು ಪಂಚಮಿ ಟ್ರಸ್ಟ್‌ನ ವರಿಷ್ಠ‌ ಡಾ| ಹರಿಶ್ಚಂದ್ರ ಹೇಳಿದರು. ಡಾ| ಹರೀಶ್ಚಂದ್ರ ದಂಪತಿಯನ್ನು° ಸಮ್ಮಾನಿಸಲಾಯಿತು.

ತಂದೆಯನ್ನು ಬಾಲ್ಯದಲ್ಲೆ ಕಳೆದುಕೊಂಡ ಫ‌ಲಾನುಭವಿ ವಿದ್ಯಾರ್ಥಿನಿ ದ್ವಿತೀಯ ಪದವಿ ಕಲಿಯುತ್ತಿರುವ ಪವಿತ್ರಾ ಹಾಗೂ ದ್ವಿತೀಯ ಪಿ.ಯು ವಿದ್ಯಾರ್ಥಿನಿ ಪಲ್ಲವಿ ಅವರಿಗೆ ಮನೆ ನಿರ್ಮಿಸಿಕೊಟ್ಟು ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿಕೊಟ್ಟ ವಿದ್ಯಾಪೋಷಕ್‌ ಸಂಸ್ಥೆಯ ಬಗ್ಗೆ ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್‌ ರಾವ್‌ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್‌ ನಿರೂಪಿಸಿದರು.

ದಾನಿ ಯು.ವಿಶ್ವನಾಥ ಶೆಣೈ, ಉಪಾಧ್ಯಕ್ಷ‌ ಎಂ. ಗಂಗಾಧರ ರಾವ್‌, ಪಿ. ಕಿಶನ್‌ ಹೆಗ್ಡೆ , ಸದಸ್ಯರಾದ ವಿ.ಜಿ ಶೆಟ್ಟಿ , ವಿಜಯ ಕುಮಾರ್‌ ಮುದ್ರಾಡಿ, ಗಣರಾಜ ಭಟ್‌, ಭುವನಪ್ರಸಾದ್‌ ಹೆಗ್ಡೆ, ಪಿ. ದಿನೇಶ್‌ ಪೂಜಾರಿ, ಕೃಷ್ಣಮೂರ್ತಿ ಭಟ್‌, ಪ್ರಸಾದ್‌ ರಾವ್‌, ಮೋಹನ ಪೆರ್ಡೂರು, ಅನಂತರಾಜ್‌ ಉಪಾಧ್ಯ, ಎಚ್‌.ಎನ್‌. ಶೃಂಗೇಶ್ವರ್‌, ಅಶೋಕ್‌ ಎಂ., ನಟರಾಜ ಉಪಾಧ್ಯ, ಮಂಜುನಾಥ, ಎಚ್‌. ಎನ್‌. ವೆಂಕಟೇಶ್‌, ನಾಗರಾಜ ಹೆಗಡೆ, ಉಮೇಶ್‌ ಪೂಜಾರಿ, ಕಿಶೋರ್‌ ಸಿ.
ಉದ್ಯಾವರ, ಕೆ. ಗೋಪಾಲ್‌, ಸುದರ್ಶನ ಬಾಯರಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next