Advertisement

Yakshagana ಅಮೆರಿಕಾದಲ್ಲಿ ಪ್ರತಿ ವರ್ಷ ಜು.27 ಯಕ್ಷಗಾನ ಡೇ

05:46 PM Aug 02, 2024 | Team Udayavani |

ಉಡುಪಿ: ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಅಪೇಕ್ಷೆಯಂತೆ ಅಮೆರಿಕಾದಲ್ಲಿ ಪಟ್ಲ ಸತೀಶ್‌ ಶೆಟ್ಟಿಯವರ ನಾಯಕತ್ವದಲ್ಲಿ ಯಕ್ಷಧ್ರುವ ಫೌಂಡೇಶನ್‌ ಕಲಾತಂಡದ ಕಲಾವಿದರು ಶ್ರೀ ಪುತ್ತಿಗೆ ಮಠದ ಪ್ರಥಮ ದೇವಾಲಯವೆಂದು ಪ್ರಖ್ಯಾತವಾದ ಫೀನಿಕ್ಸ್‌ನಲ್ಲಿರುವ ಶ್ರೀವೆಂಕಟ ಕೃಷ್ಣ ಕ್ಷೇತ್ರದಲ್ಲಿ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಸಿಕೊಟ್ಟರು.

Advertisement

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಸಿಟಿ ಮೇಯೆರ್‌ ಯಕ್ಷಗಾನದ ಅದ್ಭುತ ಚೆಂಡೆ ವಾದನ ಮತ್ತು ವಿಶಿಷ್ಟ ರೀತಿಯ ಕುಣಿತ ಮತ್ತು ಅಪೂರ್ವ ಗಾಯನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರದರ್ಷನ ನೀಡಿದ ದಿನವನ್ನೇ (ಜು.27) ಪ್ರತಿವರ್ಷ ಯಕ್ಷಗಾನ ಫೌಂಡೇಶನ್‌ ಡೇ ಎಂದು ಘೋಷಿಸಿದರು .

ಅಮೇರಿಕಾದ ನೆಲದಲ್ಲಿ ಪ್ರಥಮ ಬಾರಿ ಯಕ್ಷಗಾನ ಕಲಾ ಸಂಸ್ಥೆಯೊಂದಕ್ಕೆ ಪ್ರಥಮ ಬಾರಿ ಈ ರೀತಿಯ ಸರಕಾರಿ ಗೌರವವಾಗಿದೆ. ಶ್ರೀ ಮಠದ ಪ್ರಧಾನ ಅರ್ಚಕ ಕಿರಣ್‌ ಭಟ್‌, ಅರ್ಚನಾ ಕಿರಣ್‌ ದಂಪತಿ, ಉದಯ ಕಲ್ಲೂರಾಯ ಮೊದಲಾದವರು ಭಾಗವಹಿಸಿದ್ದರು.

ಈ ಕಲಾ ತಂಡವು ಅಮೆರಿಕಾದ್ಯಂತ ಸಂಚರಿಸಲಿದ್ದು ಶ್ರೀ ಪುತ್ತಿಗೆ ಮಠದ ನ್ಯೂಜರ್ಸಿ, ಹುಸ್ಟೋನ್‌ ಮುಂತಾದ ಶಾಖೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಲಿದೆ ಎಂದು ಶ್ರೀ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಚಾರ್ಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next