Advertisement

ಮಳೆಯಬ್ಬರ ಹೆಚ್ಚಿಸಿದ ಅಹಿ ಮಹಿ ರಾವಣ ಕಾಳಗ

06:00 AM Jul 06, 2018 | |

ಇಡೀ ಯಕ್ಷಗಾನದಲ್ಲಿ ಬಹಳ ಕುತೂಹಲ ಮೂಡಿಸಿದ್ದು ಅಹಿ – ಮಹಿ – ರಾವಣ ಕಾಳಗ. ಈಚಿನ ದಿನಗಳಲ್ಲಿ ಅತ್ಯಂತ ವಿರಳವಾಗಿ ಪ್ರದರ್ಶನ ಕಾಣುವ ಪ್ರಸಂಗ ಇದು. ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳ ಪದ ಸಾಮರ್ಥ್ಯ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತು. ಇದೇ ಓಘವನ್ನು ಕಾಯ್ದುಕೊಂಡು ಹೋದವರು ನಂತರ ಭಾಗವತಿಕೆಗೆ ಬಂದ ಮಯ್ಯರು. 

Advertisement

ಮಳೆಗಾಲದ ಅಬ್ಬರದ ಯಕ್ಷಗಾನ ಎಂಬ ಹೆಸರಿನಲ್ಲಿ ಕಳೆಗಟ್ಟಿಸಿದ್ದು ಬಿಸಿ ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಜು.1ರಂದು ನಡೆದ ಅಹಿ ರಾವಣ ಮಹಿ ರಾವಣ ಕಾಳಗ ಯಕ್ಷಗಾನ. ಇದರ ಜತೆಗೆ ರಾಮಾಂಜನೇಯ ಹಾಗೂ ಮಾಯಾ ತಿಲೋತ್ತಮೆ ಪ್ರಸಂಗಗಳು ಒಟ್ಟಂದದ ಪ್ರದರ್ಶನದ ಕಳೆ ಹೆಚ್ಚಿಸಿದವು. ರಾಜೇಂದ್ರ ಕೃಷ್ಣ ಸಂಯೋಜನೆಯಲ್ಲಿ ಮೂಡಿಬಂದ ಯಕ್ಷಗಾನ ಮಳೆಗಾಲದ ಮಳೆಯ ಸದ್ದಿನ ಅಬ್ಬರಕ್ಕಿಂತ ಚೆಂಡೆ ಸದ್ದೇ ಗುಡುಗಿನ ಸದ್ದಡಗಿಸಿತು.


ಮೊದಲು ಪ್ರದರ್ಶನ ಕಂಡದ್ದು ರಾಮಾಂಜನೇಯ ಪ್ರಸಂಗ. ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಪ್ರಫುಲ್ಲಚಂದ್ರ ನೆಲ್ಯಾಡಿ, ಗಿರೀಶ್‌ ರೈ ಕಕ್ಯಪದವು ಭಾಗವತರಾಗಿ ಪ್ರಸಂಗಾರಂಭಕ್ಕೆ ಮುನ್ನುಡಿ ಬರೆದರು. ಚೆಂಡೆ ಮದ್ದಳೆಯಲ್ಲಿ ಗುರುಪ್ರಸಾದ್‌ ಬೊಳಿಂಜಡ್ಕ, ಚೆ„ತನ್ಯಕೃಷ್ಣ ಪದ್ಯಾಣ, ಪ್ರಶಾಂತ್‌ ಶೆಟ್ಟಿ ವಗೆನಾಡು, ಶಿತಿಕಂಠ ಭಟ್‌ ಶೆಂಡೆ ಉಜಿರೆ, ಪ್ರಕಾಶ್‌ ವಿಟ್ಲ ಅವರು ಸಾಥ್‌ ನೀಡಿದರು. ಈ ಪ್ರಸಂಗದಲ್ಲಿ ಗಮನ ಸೆಳೆದದ್ದು 82 ವಯಸ್ಸು ಕಳೆದರೂ ಯುವಕರಂತೆಯೇ ಉತ್ಸಾಹದಿಂದ ಪಾತ್ರಪೋಷಣೆ ಮಾಡುವ ಸೂರಿಕುಮೇರಿ ಗೋವಿಂದ ಭಟ್ಟರ ಶಕುಂತ ರಾಜ. ಕಿರಿದು ಅವಧಿಯಾದರೂ ನೆನಪಿನಲ್ಲಿ ಉಳಿಯುವ ರಂಗಪೋಷಣೆ. ಜತೆಗೆ ಮಾತಿನಲ್ಲೇ ಮಂಟಪ ಕಟ್ಟುವ ‌ ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಮರ್ಯಾದಾ ಪುರುಷೋತ್ತಮ ರಾಮ, ಉಜಿರೆ ಅಶೋಕ ಭಟ್ಟರ ವಿಶ್ವಾಮಿತ್ರ, ಸುಬ್ರಾಯ ಹೊಳ್ಳರ ಹನುಮಂತ ಯಕ್ಷಲೋಕದ ಪರಂಪರೆಯ ನೆನಪನ್ನು ಮರುಕಳಿಸುವಂತೆ ಮಾಡಿತು. ಹಿಲಿಯಾಣ ಸಂತೋಷ -ಸೀತೆ, ಸೀತಾಂಗೋಳಿ ಬಾಲಕೃಷ್ಣ -ಅಂಜನೆ, ಕಲ್ಲುಗುಂಡಿ ವೆಂಕಟೇಶ್‌ -ಲಕ್ಷ್ಮಣ, ಮರಕಡ ಲಕ್ಷ್ಮಣ ಕುಮಾರ್‌ -ಅಂಗದ, ವಾದಿರಾಜ ಕಲ್ಲೂರಾಯ- ನಾರದ, ತಾರಾನಾಥ ರೈ ಕುಂಬ್ರ -ಸುಗ್ರೀವ ಹೀಗೆ ಎಲ್ಲರೂ ಒಟ್ಟು ಪ್ರಸಂಗದ ಮೇಲ್ಮೆಗೆ ಕೊಡುಗೆ ನೀಡಿದರು. ಎಲ್ಲಿಯೂ ಪ್ರೇಕ್ಷಕರಿಗೆ ಉದಾಸೀನ ತರಿಸದೆ, ನೋಡಿಸಿಕೊಂಡು ಹೋಯಿತು. ರವಿಚಂದ್ರ ಕನ್ನಡಿಕಟ್ಟೆಯವರ ಸ್ಮರಿಸಯ್ಯ ರಾಮಮಂತ್ರ ಹಾಡು ಭಕ್ತಿ ಭಾವದ ಸೇಚನಕ್ಕೆ ಕಾರಣವಾಯಿತು.

ಮಾಯಾ ತಿಲೋತ್ತಮೆ ಪ್ರಸಂಗದಲ್ಲಿ ಪದ್ಯಾಣ ಗಣಪತಿ ಭಟ್‌ ಹಾಗೂ ದಿನೇಶ್‌ ಅಮ್ಮಣ್ಣಾಯರ ಮಾಧುರ್ಯದ ದ್ವಂದ್ವ ಭಾಗವತಿಕೆ ಒಟ್ಟು ಯಕ್ಷಗಾನದ ಹೈಲೈಟ್‌ ಎನಿಸಿತು. ಇದಕ್ಕೆ ಧಕ್ಕೆಯಾಗದಂತೆ ಜತೆಯಾದವರು ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಹಾಗೂ ಕಡಬ ವಿನಯ ಆಚಾರ್ಯರು. ಈ ಪ್ರಸಂಗದಲ್ಲಿ ರಂಗದ ರಾಜ ಖ್ಯಾತಿಯ ಮಧೂರು ರಾಧಾಕೃಷ್ಣ ನಾವಡರು ಸುಂದನಾಗಿ, ಜಗದಾಭಿರಾಮ ಪಡುಬಿದ್ರೆ ಉಪಸುಂದನಾಗಿ, ಯಕ್ಷಲೋಕದ ದೇವೇಂದ್ರ ಖ್ಯಾತಿಯ ಜಯಾನಂದ ಸಂಪಾಜೆ ದೇವೇಂದ್ರನಾಗಿ, ಈಶ್ವರ ಪ್ರಸಾದ್‌ ಧರ್ಮಸ್ಥಳ ಬ್ರಹ್ಮನಾಗಿ, ಪಡ್ರೆ ರಕ್ಷಿತ್‌ ತಿಲೋತ್ತಮೆಯಾಗಿ ಪ್ರಸಂಗದ ರಂಗು ಹೆಚ್ಚಿಸಿದರು. ಕಿಶನ್‌, ಉಪಾಸನಾ ಎಂಬ ಬಾಲಕಲಾವಿದರು ಭಾಗವಹಿಸಿದ್ದರು. 

ಇಡೀ ಯಕ್ಷಗಾನದಲ್ಲಿ ಬಹಳ ಕುತೂಹಲ ಮೂಡಿಸಿದ್ದು ಅಹಿ – ಮಹಿ – ರಾವಣ ಕಾಳಗ. ಈಚಿನ ದಿನಗಳಲ್ಲಿ ಅತ್ಯಂತ ವಿರಳವಾಗಿ ಪ್ರದರ್ಶನ ಕಾಣುವ ಪ್ರಸಂಗ ಇದು. ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳ ಪದ ಸಾಮರ್ಥ್ಯ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತು. ಇದೇ ಓಘವನ್ನು ಕಾಯ್ದುಕೊಂಡು ಹೋದವರು ನಂತರ ಭಾಗವತಿಕೆಗೆ ಬಂದ ಸಿರಿಬಾಗಿಲು ರಾಮಕೃಷ್ಣ ಮಯ್ಯರು. 

ಬೆಳಾಲು ಗಣೇಶ್‌ ಭಟ್‌ ಮದ್ದಳೆ ನಾದದೊಂದಿಗೆ ಅಡೂರು ಗಣೇಶ್‌ ರಾವ್‌, ಅಡೂರು ಲಕ್ಷ್ಮೀ ನಾರಾಯಣ ರಾವ್‌ ಅವರ ಚೆಂಡೆಯ ಜುಗಲ್‌ಬಂದಿ ನಾದ ವಾದನ ಪ್ರೇಕ್ಷಕರ ಮೈ ಮನದಲ್ಲಿ ವಿದ್ಯುತ್‌ ಸಂಚಲನ ಮೂಡಿಸಿತು. ಹನುಮಂತನ ಜತೆಗೆ ಯುದ್ಧಕ್ಕೆ ರಾವಣ ತನ್ನ ಸ್ನೇಹಿತರನ್ನು ಕರೆದು ಯುದ್ಧ ಮಾಡಿಸುವ ಚಿತ್ರಣವನ್ನು ನೀಡಲು ಸದಾಶಿವ ಶೆಟ್ಟಿಗಾರ್‌ ಸಿದ್ಧಕಟ್ಟೆ ಹಾಗೂ ಸತೀಶ್‌ ನೈನಾಡು ಅವರ ಅಹಿ ರಾವಣ ಮಹಿ ರಾವಣ, ಹರಿನಾರಾಯಣ ಎಡನೀರು ಅವರ ರಾವಣ, ಅಮ್ಮುಂಜೆ ಮೋಹನ ಕುಮಾರ್‌ ಅವರ ಹನುಮಂತ, ಮಿಲನ್‌ ಪಣಂಬೂರು ಮಕರಧ್ವಜ, ವಾಟೆಪಡು³ ವಿಷ್ಣು ಶರ್ಮರ ವಿಭೀಷಣ, ಕೊಲ್ಲಂಗಾನ ಗಣಾಧಿರಾಜ ತಂತ್ರಿಗಳ ಪಾತಾಳ ಲಂಕಿಣಿ, ಪರಮೇಶ್ವರ ಗಂಗಾನಾಡು ಚಂದ್ರಸೇನೆ, ಬಂಟ್ವಾಳ ಜಯರಾಮ ಆಚಾರ್ಯ ಹಾಗೂ ದಿನೇಶ್‌ ಕೋಡಪದವು ಅವರ ಹಾಸ್ಯ ಪಾತ್ರಗಳು ಇತಿಮಿತಿಯಲ್ಲಿ ಮನರಂಜಿಸಿದವು. ಒಟ್ಟು ಪ್ರದರ್ಶನ ನೆನಪಿನಲ್ಲಿ ಉಳಿಯುವಂತೆ ಅತ್ಯಂತ ಅಚ್ಚುಕಟ್ಟಾಗಿ ಮೂಡಿಬಂತು.  

Advertisement

ಲಕ್ಷ್ಮೀ ಮಚ್ಚಿನ 

Advertisement

Udayavani is now on Telegram. Click here to join our channel and stay updated with the latest news.

Next