Advertisement

ತಾಂ ತಕಿಟ ಧೀಂ: ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆ

03:02 PM Nov 10, 2018 | Team Udayavani |

“ಯಕ್ಷಸಿಂಚನ’ ಟ್ರಸ್ಟ್‌ ದಶಮಾನೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಯುವ ಪ್ರಸಂಗಕರ್ತರನ್ನು ಪ್ರೋತ್ಸಾಹಿಸಲು, ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯನ್ನು ಆಯೋಜಿಸಿದೆ. ಯಕ್ಷಗಾನ ಪರಂಪರೆಯತ್ತ ಯುವಪೀಳಿಗೆಯನ್ನು  ಸೆಳೆಯುವ ನಿಟ್ಟಿನಲ್ಲಿ ಈ ಸ್ಪರ್ಧೆ ನಡೆಯುತ್ತಿದ್ದು, ಸ್ಪರ್ಧಿಗಳು 45 ವರ್ಷ ಒಳಪಟ್ಟವರಾಗಿರಬೇಕು. ಸ್ಪರ್ಧೆಗೆ ಹೆಸರು ನೋಂದಾಯಿಸುವಾಗ ಹೆಸರು, ವಿಳಾಸ, ವಯಸ್ಸಿನ ದೃಢೀಕರಣ ಪತ್ರದ ಪ್ರತಿ, ಯಕ್ಷಗಾನ/ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿನ ತಮ್ಮ ಅನುಭವ, ತಮ್ಮ ಯಕ್ಷಗಾನ ಗುರುಗಳ ವಿವರ, ಮೊಬೈಲ್‌ ಸಂಖ್ಯೆ ಇತ್ಯಾದಿ ವಿವರಗಳನ್ನು ನೀಡಬೇಕು. 

Advertisement

ಪ್ರಸಂಗ ಹೇಗಿರಬೇಕು?
ಪ್ರಸಂಗದ ಪದ್ಯಗಳು ಪ್ರಸಂಗಕರ್ತರ ಮೂಲ ರಚನೆಯಾಗಿರಬೇಕು. ಪದ್ಯಗಳು 75-150 ಪದಕ್ಕೆ ಮೀರದಂತೆ, 3 ತಾಸಿನ ರಂಗಪ್ರಯೋಗಕ್ಕೆ ಸೂಕ್ತವಾಗುವಂತೆ ಇರಬೇಕು. ಪ್ರಸಂಗವು ಕನಿಷ್ಠ ವಾರ್ಧಕ, ಭಾಮಿನಿ ,ಕಂದಪದ್ಯವನ್ನು ಒಳಗೊಂಡಿರಲೇಬೇಕು. ಪ್ರಸಂಗ ರಚನೆಗೆ 3 ತಿಂಗಳ‌ ಕಾಲಾವಕಾಶವಿದ್ದು, ಡಿಸೆಂಬರ್‌ 1ರಿಂದ ಫೆಬ್ರವರಿ 28ರ ಒಳಗೆ ಪ್ರಸಂಗವನ್ನು ಕಳುಹಿಸಬೇಕು. ನಂತರ ಬರುವ ಪ್ರಸಂಗಗಳನ್ನು ಪರಿಗಣಿಸಲಾಗುವುದಿಲ್ಲ. 
ಪ್ರಸಂಗಕ್ಕೆ ಬಳಸಿದ ಸಾಹಿತ್ಯ, ಛಂದೋಬದ್ಧತೆ, ಬಳಕೆಯಾದ ಮಟ್ಟುಗಳು, ರಂಗಭೂಮಿಯ ಪ್ರಯೋಗ ಸಾಧ್ಯತೆಗಳು, ಭಾಷಾಶುದ್ಧಿ… ಮೊದಲಾದ ಅಂಶಗಳ ಮೇಲೆ ತೀರ್ಪು ನಿರ್ಣಯವಾಗುತ್ತದೆ. ಇಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ. ಪ್ರಥಮ ಬಹುಮಾನಕ್ಕೆ 10 ಸಾವಿರ ರೂ., ದ್ವಿತೀಯ ಬಹುಮಾನಕ್ಕೆ 6 ಸಾವಿರ ರೂ. ನಿಗದಿಪಡಿಸಲಾಗಿದೆ. ದಶಮಾನೊತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉತ್ತಮವಾದ ಪ್ರಸಂಗಗಳನ್ನು ಆಯ್ಕೆ ಮಾಡಿ “ಯಕ್ಷಗಾನ ಪ್ರಸಂಗಕೋಶ’ದಲ್ಲಿ ಪ್ರಕಟಿಸಲಾಗುತ್ತದೆ.

ಎಲ್ಲಿಗೆ ಕಳಿಸಬೇಕು?
ಇಮೇಲ್‌ : bprhegdegmail.com, shashiyajigmail.com
ವಿಳಾಸ: ಯಕ್ಷಸಿಂಚನ ಟ್ರಸ್ಟ್‌, ನಂ.117, ವಾಸ್ತು ಗ್ರೀನ್ಸ್‌, ಕೊಡಿಪಾಳ್ಯ ಮುಖ್ಯ ರಸ್ತೆ , ಬೆಂಗಳೂರು, ಈ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಬಹುದು. 
ಹೆಚ್ಚಿನ ಮಾಹಿತಿಗೆ: 9986384205, 9986363495 

Advertisement

Udayavani is now on Telegram. Click here to join our channel and stay updated with the latest news.

Next