Advertisement

ವಿಶ್ವವಿದ್ಯಾನಿಲಯದಲ್ಲಿ ಯಕ್ಷಗಾನ ಶಿಕ್ಷಣ

12:58 PM Jun 01, 2017 | Harsha Rao |

ಉಡುಪಿ: ಈ ಶೈಕ್ಷಣಿಕ ವರ್ಷದಿಂದ ಹಾವೇರಿಯ ಜನಪದ ವಿಶ್ವವಿದ್ಯಾನಿಲಯದಲ್ಲಿ ಯಕ್ಷಗಾನ ಬಯಲಾಟ ಶಿಕ್ಷಣ ಆರಂಭಿಸ‌ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ನಡೆದ ಯಕ್ಷಗಾನ ಕಲಾವಿದರ ಸಮಾವೇಶದಲ್ಲಿ ಅವರು ಮಾತನಾಡಿದರು.

ವಿ.ವಿ.ಯಲ್ಲಿ 3 ವರ್ಷದ ಯಕ್ಷಗಾನ ಡಿಪ್ಲೊಮಾ ತರಗತಿ ನಡೆಯಲಿದೆ. ಹಿಂದೆ ಆಸಕ್ತರು ಯಕ್ಷಗಾನ ಮೇಳದವರೊಂದಿಗೆ ಸೇರಿಕೊಂಡು ಕಲಿತು ಕಲಾವಿದರಾಗಿ ರೂಪುಗೊಳ್ಳುತ್ತಿದ್ದರು. ಆದರೆ ಇಂದಿನ ಯಕ್ಷ ಶಿಕ್ಷಣದ ಅಗತ್ಯತೆ ಮನಗಂಡು ಯಕ್ಷಗಾನ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ. ಈ ಮೂಲಕ ಯಕ್ಷಗಾನ ಕಲೆಗೆ ಮತ್ತಷ್ಟು ಚೈತನ್ಯ ತುಂಬುವ ಕೆಲಸ ಸರಕಾರದಿಂದ ಆಗುತ್ತಿದೆ ಎಂದರು.

ಯಕ್ಷಗಾನದ ಉಗಮ ಸ್ಥಾನ ಉಡುಪಿ ಎನ್ನುವ ವಾದವಿದೆ. ಯಕ್ಷಗಾನ ಕಲಾರಂಗ ಯಕ್ಷ ಕಲಾವಿದರಿಗಾಗಿ ಮಾಡುತ್ತಿರುವ ಕಾರ್ಯಗಳು ಅದಕ್ಕೆ ಪೂರಕವಾಗಿ ಕಂಡುಬರುತ್ತದೆ. ಕಲಾದೇವಿಯ ಅನುಗ್ರಹ ಕಲಾರಂಗಕ್ಕಿದೆ ಎಂದು ಕಲಾರಂಗದ ಕಾರ್ಯವನ್ನು ಸಚಿವರು ಶ್ಲಾ ಸಿದರು.

ಕಲಾಯೋಗಿಗಳು: ಪೇಜಾವರ ಶ್ರೀ
ಯಕ್ಷಗಾನ ಕಲಾವಿದರು ಕಷ್ಟಪಟ್ಟು ಯಕ್ಷಗಾನದ ಮೂಲಕ ಜನರಲ್ಲಿ ಆನಂದ ಉಂಟು ಮಾಡುತ್ತಾರೆ. ಯಕ್ಷ ಕಲಾವಿದರು ಕಲಾಯೋಗಿಗಳು. ಯಕ್ಷಗಾನಕ್ಕೆ ಉತ್ತಮ ಭವಿಷ್ಯವಿದೆ ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

Advertisement

ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪಡುಬಿದ್ರಿ ಯುಪಿಸಿಎಲ್‌ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಬಿ. ಕಿಶೋರ್‌ ಆಳ್ವ, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ, ಕೋಟ ಗೀತಾನಂದ ಫೌಂಡೇಶನ್‌ನ ಆನಂದ ಸಿ. ಕುಂದರ್‌, ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಪಿ. ಕಿಶನ್‌ ಹೆಗ್ಡೆ, ಮಂಟಪ ಪ್ರಭಾಕರ ಉಪಾಧ್ಯ ಬೆಂಗಳೂರು, ಡಾ| ಎಂ. ಪ್ರಭಾಕರ ಜೋಶಿ, ಧಾರವಾಡ ಆಕಾಶವಾಣಿಯ ದಿವಾಕರ ಹೆಗಡೆ, ಸಸಿಹಿತ್ಲು ಮೇಳದ ಸಂಚಾಲಕ ಬಿ. ದಯಾನಂದ, ಹಿರಿಯ ಕಲಾವಿದ ಗೋವಿಂದ ಭಟ್‌, ಕಲಾರಂಗದ ಎಂ. ಗಂಗಾಧರ ರಾವ್‌, ಎಸ್‌.ವಿ. ಭಟ್‌ ಮೊದಲಾದವರು ಉಪಸ್ಥಿತರಿದ್ದರು.

ಕಲಾರಂಗದ ಅಧ್ಯಕ್ಷ ಕೆ. ಗಣೇಶ್‌ ರಾವ್‌ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ದಿವಾಕರ ಹೆಗಡೆ ಅವರು ಬರೆದ “ಮೋಹಮೇನಕೆ’ ಪ್ರಸಂಗಕೃತಿಯನ್ನು ಪೇಜಾವರ ಶ್ರೀಪಾದರು ಅನಾವರಣಗೊಳಿಸಿದರು. ಯಕ್ಷನಿಧಿ ಸದಸ್ಯರಿಗೆ ವಿಮಾ ಯೋಜನೆ, ಗೃಹನಿರ್ಮಾಣ ಹೀಗೆ ವಿವಿಧ ಪ್ರೋತ್ಸಾಹ ಧನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next