Advertisement

Yakshagana ಧರ್ಮಸ್ಥಳ ಮೇಳದ ತಿರುಗಾಟ ಪ್ರಾರಂಭ

11:28 PM Dec 02, 2023 | Team Udayavani |

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸೇವಾ ಹರಕೆ ಬಯಲಾಟದ ತಿರುಗಾಟ ಶನಿವಾರ ಪ್ರಾರಂಭಗೊಂಡಿತು.

Advertisement

ಬೆಳಗ್ಗೆ 8.30ಕ್ಕೆ ಛತ್ರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಬಳಿಕ ಯಕ್ಷಗಾನ ಮೇಳದ ಶ್ರೀ ಗಣಪತಿ ದೇವರ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಮಂಜುಕೃಪಾ ನಿವಾಸದಲ್ಲಿ ವಿರಾಜಮಾನ ಗೊಳಿಸ ಲಾಯಿತು. ಅಲ್ಲಿ ಗಣಪತಿ ಹೋಮ ಮತ್ತು ಮಹಾಪೂಜೆ ನೆರವೇರಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಮೇಳದ ಯಜಮಾನ ಡಿ. ಹರ್ಷೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌ ಹಾಗೂ ಯಕ್ಷಗಾನ ಕಲಾವಿದರು, ಮೇಳದಲ್ಲಿ ವ್ಯವಸ್ಥಾಪಕರಾದ ಗಿರೀಶ್‌ ಹೆಗ್ಡೆ ಮತ್ತು ಪುಷ್ಪರಾಜ ಶೆಟ್ಟಿ ಹಾಗೂ ಭಕ್ತರು ಉಪಸ್ಥಿತರಿದ್ದರು.

2024ರ ಮೇ 23ರ ವರೆಗೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕಾಸರಗೋಡು ಜಿಲ್ಲೆಗಳಲ್ಲಿ ಭಕ್ತರಿಂದ ಸೇವಾ ಬಯಲಾಟ ಪ್ರದರ್ಶನ ಆಯೋಜಿಸಲಾಗಿದೆ.

ಪ್ರತಿದಿನ ಸಂಜೆ 7ರಿಂದ 12 ಗಂಟೆ ವರೆಗೆ ಕಾಲಮಿತಿ ಯಕ್ಷಗಾನ ಪ್ರದರ್ಶನದಲ್ಲಿ ಪೌರಾಣಿಕಪ್ರಸಂಗಗಳನ್ನು ಮಾತ್ರ ಸಾದರಪಡಿ ಸಲಾಗುತ್ತದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next