Advertisement
ಹೊನ್ನಾವರ ತಾಲೂಕಿನ ಹಡಿನಬಾಳ ಎಂಬಲ್ಲಿ 1950ರಲ್ಲಿ ಈಶ್ವರ ಹೆಗಡೆ ಮತ್ತು ಗೋಪಿ ದಂಪತಿಗಳ ಪುತ್ರನಾಗಿ ಜನಿಸಿದ ಮಹಾದೇವ ಹೆಗಡೆಯವರು ತನ್ನ 18ನೇ ವಯಸ್ಸಿನಲ್ಲಿ ಬಣ್ಣದ ಲೋಕ ಪ್ರವೇಶಿಸಿದ್ದರು. ಹೆಗಡೆಯವರ ಕುಟುಂಬವೇ ಯಕ್ಷಗಾನ ರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಗಣನೀಯ ಕೊಡುಗೆ ನೀಡಿತ್ತು. ಅಣ್ಣ ಕಪ್ಪೆಕೆರೆ ಸುಬ್ರಾಯ ಹೆಗಡೆ ಹೆಸರಾಂತ ಭಾಗವತರು.
Related Articles
Advertisement
ಹಂತ ಹಂತವಾಗಿ ಬೆಳೆದು ಬಂದ ಇವರು ಸ್ತ್ರೀವೇಷ, ಬಣ್ಣದ ವೇಷಗಳನ್ನು ಸಹ ಮಾಡಿದ್ದರು. 40 ಕ್ಕೂ ಹೆಚ್ಚು ವರ್ಷ ವರ್ಷ ಕಲಾಸೇವೆ ಮಾಡಿದ್ದರು. ಮಂದಾರ್ತಿ ಮೇಳದ ಪ್ರಧಾನ ವೇಷದಾರಿಯಾಗಿ ಸೇವೆ ಸಲ್ಲಿಸಿದ್ದರು. ಸದಾ ಹಸನ್ಮುಖಿಯಾಗಿ ಸರ್ವ ಕಲಾವಿದರ ನೆಚ್ಚಿನವರಾಗಿದ್ದರು. ಶಿರಸಿ ಮಾರಿಕಾಂಬ ಮೇಳವನ್ನು ಎರಡು ವರುಷ ಸಂಚಾಲಕರಾಗಿ ನಡೆಸಿದ್ದರು.